Advertisement

ದುರಂತಕ್ಕೆ ಮೊದಲು ಎಚ್ಚರಿಕೆ ಅಗತ್ಯ: ಲೈಪ್ ಜಾಕೆಟ್ ಇಲ್ಲದೆ ಸಾಣಾಪೂರ ಕೆರೆಯಲ್ಲಿ ಬೋಟಿಂಗ್

10:10 AM Sep 21, 2019 | keerthan |

ಗಂಗಾವತಿ: ಲೈಫ್ ಜಾಕೆಟ್ ಇಲ್ಲದೆ ಪ್ರವಾಸಿಗರನ್ನು ಹರಿಗೋಲಿನಲ್ಲಿ ಕರೆದುಕೊಂಡು ಹೋಗುವ ಮೂಲಕ ತಾಲೂಕಿನ ಸಾಣಾಪೂರ ಕೆರೆಯಲ್ಲಿ ಅಸುರಕ್ಷಿತ ಬೋಟಿಂಗ್ ನಡೆಸಲಾಗುತ್ತಿದೆ. ಈ ಮೂಲಕ ಪ್ರವಾಸಿಗರ ಜೀವಕ್ಕೆ ಕುತ್ತು ತರುವ ಪ್ರಸಂಗವಿದ್ದರೂ ಪೊಲೀಸ್ ಹಾಗೂ ತಾಲೂಕು ಆಡಳಿತ ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬರುತ್ತಿದೆ.

Advertisement

ರಜಾ ದಿನಗಳಲ್ಲಿ ಪ್ರವಾಸಕ್ಕೆ ಆನೆಗೊಂದಿ, ಹನುಮನಹಳ್ಳಿ, ವಿರೂಪಾಪೂರಗಡ್ಡಿ, ಸಾಣಾಪೂರ, ನಾರಾಯಣ ಪೇಟೆ ಸುತ್ತಲಿನ ಪ್ರದೇಶಕ್ಕೆ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಅಂಜನಾದ್ರಿ, ಪಂಪಾ ಸರೋವರ ಸೇರಿ ಹಲವು ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಿ ಕೊನೆಯಲ್ಲಿ ಸಾಣಾಪೂರ ಹತ್ತಿರ ಇರುವ ತುಂಗಭದ್ರಾ ಎಡದಂಡೆ ಕಾಲುವೆ ವಿಶಾಲ ಕೆರೆಯಲ್ಲಿ ಬೋಟಿಂಗ್ ಮಾಡಲು ಆಗಮಿಸುತ್ತಾರೆ.

ಇಲ್ಲಿ ಸ್ಥಳೀಯರು ದೇಶಿಯ ಹರಿಗೋಲು (ತೆಪ್ಪ) ಬಳಕೆ ಮಾಡಿ ಇಡೀ ಕೆರೆಯನ್ನು ಸುತ್ತಿಸುತ್ತಾರೆ. ಇಂತಿಷ್ಟು ಹಣ ನಿಗದಿ ಮಾಡಿದ್ದರೂ ಕೂಡ ಇಲ್ಲಿ ಲೈಫ್ ಜಾಕೆಟ್ ಸೇರಿ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ. ಹರಿಗೋಲು ಬಳಕೆ ಮಾಡಿ ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಹಲವು ದುರ್ಘಟನೆಗಳು ಜರುಗಿವೆ. ತುಂಗಭದ್ರಾ ನದಿಯಲ್ಲಿ ಬಂದ ಪ್ರವಾಹದಲ್ಲಿ ವಿರೂಪಾಪೂರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಕರೆ ತರಲು ಹೋಗಿದ್ದ ಎನ್ ಡಿ ಆರ್ ಎಫ್ ತಂಡದವರು ಕೊಚ್ಚಿಕೊಂಡು ಹೋಗಿ ನಂತರ ರಕ್ಷಿಸಿದ ಘಟನೆ ನಡೆದಿದ್ದರೂ ಸಾಣಾಪೂರ ಕೆರೆಯಲ್ಲಿ ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಹರಿಗೋಲಿನಲ್ಲಿ ಬೋಟಿಂಗ್ ನಡೆಸುತ್ತಿದ್ದಾರೆ. ಇಲ್ಲಿ ದೊಡ್ಡ ದುರಂತಕ್ಕೆ ಕಾರಣವಾಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next