Advertisement

ಬೋಟ್ ದುರಂತ: 8 ದಿನದ ಬಳಿಕ ಪತ್ತೆಯಾದ ಮೃತದೇಹ

12:40 AM Jan 29, 2019 | |

ಭಟ್ಕಳ: ಕಾರವಾರ ಸಮೀಪದ ಕೂರ್ಮಗಡ ಜಾತ್ರೆಯಿಂದ ವಾಪಸ್ಸಾಗುವ ವೇಳೆ ಜ.21ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಬಾಲಕ ಸಂದೀಪನ ಮೃತದೇಹ 8 ದಿನಗಳ ಬಳಿಕ ನೇತ್ರಾಣಿ ದ್ವೀಪದ ಸಮೀಪ ಪತ್ತೆಯಾಗಿದ್ದು, ಮೃತದೇಹವನ್ನು ಕಾರವಾರಕ್ಕೆ ರವಾನಿಸಲಾಗಿದೆ.

Advertisement

ಕೂರ್ಮಗಡ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ವೇಳೆ ದೋಣಿ ಮಗುಚಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹೊಸೂರಿನ ಸಂದೀಪ (10) ನಾಪತ್ತೆಯಾಗಿದ್ದ. ಬಾಲಕನ ಪತ್ತೆಗಾಗಿ ಸರ್ಕಾರ ತೀವ್ರ ಕಾರ್ಯಾಚರಣೆ ನಡೆಸಿತ್ತು. ನೇತ್ರಾಣಿ ದ್ವೀಪದಲ್ಲಿ ಶವವೊಂದು ತೇಲುತ್ತಿರುವ ಕುರಿತು ಮೀನುಗಾರರು ನೀಡಿದ ಸುಳಿವಿನಂತೆ ಕರಾವಳಿ ಕಾವಲು ಪಡೆ ಪೊಲೀಸರು ಶೋಧ ನಡೆಸಿದ್ದು, ನಂತರ ಭಟ್ಕಳದ ಸಮೀಪವೇ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಅಳ್ವೆಕೋಡಿ ಸಮುದ್ರ ಕಿನಾರೆಗೆ ತಂದು ಸ್ಥಳದಲ್ಲಿ ಸಹಾಯಕ ಕಮಿಷನರ್‌ ಸಾಜಿದ್‌ ಅಹಮ್ಮದ್‌ ಮುಲ್ಲಾ ಹಾಗೂ ತಹಶೀಲ್ದಾರ್‌ ವೀರೇಂದ್ರ ಬಾಡಕರ್‌ ಸಮ್ಮುಖದಲ್ಲಿ ಮಹಜರು ನಡೆಸಿ ನಂತರ ಕಾರವಾರದ ಸಿವಿಲ್‌ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next