Advertisement

ಬೋಟ್‌ ಮುಳುಗಡೆ: 6 ಮೀನುಗಾರರ ರಕ್ಷಣೆ

06:54 PM Sep 04, 2021 | Team Udayavani |

ಹೊನ್ನಾವರ: ಶರಾವತಿ ಸಂಗಮದ ಅಳವೆಯಲ್ಲಿ ಗಂಗೊಳ್ಳಿ ಮೂಲದ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶಿಯಾನ್‌ ಮಾಲಕತ್ವದ ಬೋಟ್‌ ಮುಳುಗಡೆಯಾಗಿದೆ. ಕಳೆದ ಎರಡು ದಿನದ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ವಾಪಸ್‌ ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ಈ ದುರ್ಘ‌ಟನೆ ಸಂಭವಿಸಿದೆ.

Advertisement

ಬೋಟ್‌ ಮುಳುಗಡೆಯಿಂದ ತುಂಬಿದ್ದ ಮೀನು ಹಾಗೂ ಸಲಕರಣೆಗಳು ಸಮುದ್ರ ಪಾಲಾಗಿ ಅಂದಾಜು 24ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೋಟ್‌ನಲ್ಲಿದ್ದ 6 ಮೀನುಗಾರರನ್ನು ಮತ್ತೊಂದು ಬೋಟ್‌ ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಳವೆ (ಬ್ಯಾಕ್‌ವಾಟರ್‌ ತಡೆಗೋಡೆ) ನಿರ್ಮಾಣಕ್ಕೆ ಮುಹೂರ್ತ ಕೂಡಿಬಂದಿಲ್ಲ. ಕೇಂದ್ರ ಸರ್ಕಾರದಿಂದ ಹಿಂದೆ ಬಂದ ಹಣ ವಾಪಸ್‌ ಹೋಗಿದೆ. ಅಳವೆಯ ಸಹಿತ ಬಂದರು ಕಾಮಗಾರಿ ವಹಿಸಿಕೊಂಡ ಕಂಪನಿ ಅಳವೆ ಆಳ ಮಾಡಲು
ಹೊರಟಿತ್ತು. ಅದಕ್ಕಾಗಿ ದೊಡ್ಡದೊಡ್ಡ ಕಲ್ಲುಗಳನ್ನು ಒಯ್ಯಬೇಕಾಗಿರುವುದರಿಂದ ಪ್ರತ್ಯೇಕ ರಸ್ತೆ ನಿರ್ಮಿಸಲು ಆರಂಭಿಸಿತ್ತು. ಕೆಲವು ಮೀನುಗಾರರ ವಿರೋಧದಿಂದ ರಸ್ತೆ ಕಾಮಗಾರಿ ಪದೇಪದೇ ನಿಲ್ಲುತ್ತಿದೆ. ಅಳವೆಯ ಆಳ ಮತ್ತು ಅಗಲ ವಿಸ್ತರಣೆ ಮೀನುಗಾರರಿಗೆ ಮಾತ್ರವಲ್ಲ ಬಂದರು ನಿರ್ಮಾಣ ಕಂಪನಿಗೂ ಅಗತ್ಯವಿತ್ತು. ಸ್ವಾರ್ಥ ಮತ್ತು ರಾಜಕೀಯ ಅಡ್ಡ ಬಂದರೆ ಯಾವ ಕೆಲಸವೂ ಆಗುವುದಿಲ್ಲ ಎಂಬುದಕ್ಕೆ ಅಳವೆ ಉದಾಹರಣೆ.

ಇದನ್ನೂ ಓದಿ:ಕೇಂದ್ರ ಅಧ್ಯಯನ ತಂಡ ಭೇಟಿ : ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಮುಖ್ಯಮಂತ್ರಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next