Advertisement
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಶೋಧ ಕಾರ್ಯಕ್ಕೆ ಹೋದ ಪೊಲೀಸರು ಮತ್ತು 10 ಮಂದಿ ಮೀನುಗಾರರ ತಂಡವು ಸಮುದ್ರ, ನದಿತೀರ ಮತ್ತು ಭೂಪ್ರದೇಶ ಭಾಗಗಳಲ್ಲಿ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ. ಡಿ. 15ರ ರಾತ್ರಿಯಿಂದ ಮೀನುಗಾರರ ಸಂಪರ್ಕ ಕಡಿತವಾಗಿತ್ತು. ಮಲ್ಪೆ, ಭಟ್ಕಳ ಮತ್ತು ಕುಮಟಾದ ತಲಾ ಇಬ್ಬರು, ಮಂಕಿಯ ಒಬ್ಬರು ನಾಪತ್ತೆಯಾದವರಲ್ಲಿ ಸೇರಿದ್ದಾರೆ.
ಉಡುಪಿ: ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಸರಕಾರ ಎಚ್ಚೆತ್ತು ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಕರಾವಳಿ ಕಾವಲು ಪಡೆಗೆ ಸಿವಿಲ್ ಪೊಲೀಸರನ್ನೇ ನಿಯೋಜಿಸ ಲಾಗುತ್ತಿದೆ. ಕಡಲಿನ ವಾತಾವರಣಕ್ಕೆ ಒಗ್ಗಿಕೊಂಡು ಕೆಲಸ ಮಾಡಬಲ್ಲ ಸ್ಥಳೀಯರನ್ನೇ ನೇಮಿಸಬೇಕು. ನಾಪತ್ತೆಯಾಗಿರುವ ಮೀನುಗಾರರ ಮನೆಗಳಿಗೆ ಸಚಿವರು ತೆರಳಿ ಧೈರ್ಯ ತುಂಬಬೇಕು. ಕೇಂದ್ರ ಹಾಗೂ ಗೋವಾ ಸಚಿವರೊಂದಿಗೆ ಚರ್ಚಿಸಿದ್ದು, ಕರಾವಳಿ ಕಾವಲು ಪಡೆ ಶೋಧ ನಡೆಸುತ್ತಿದೆ ಎಂದರು.
Related Articles
ಮೀನುಗಾರಿಕೆಗೆ ತೆರಳುವವರಿಗೆ ಪ್ರತ್ಯೇಕ ಸಮವಸ್ತ್ರ ನೀಡಬೇಕು. ಇದರಿಂದ ನಮ್ಮ ರಾಜ್ಯದವರನ್ನು ಗುರುತಿಸಿ ಸಂವಹನ ನಡೆಸಲು ಅನುಕೂಲವಾಗುತ್ತದೆ ಎಂದರು.
Advertisement