Advertisement
ದೋಣಿಮನೆಯಲ್ಲಿ ಏನೇನಿದೆ?ಸುಮಾರು 200 ಮಂದಿಯನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಶೈಲಿಯ ದೋಣಿ ಮನೆ 120 ಅಡಿ ಉದ್ದ, 20 ಅಡಿ ಅಗಲವಿದೆ. 16 x 11 ಚದರಡಿಯ ಹವಾನಿಯಂತ್ರಿತ ಐಷಾರಾಮಿ ಅಟ್ಯಾಚ್‌ಡ್ 5 ಬೆಡ್ ರೂಮುಗಳು, ಅಡುಗೆ ಕೋಣೆ, ಲಿವಿಂಗ್ ರೂಮ್ ಇದೆ. ಮೇಲ್ಭಾಗದಲ್ಲಿ ಸುಮಾರು 80 ಮಂದಿಗೆ ಕುಳಿತುಕೊಳ್ಳಲು ಅವಕಾಶವಿರುವ 95×20 ಚದರ ಅಡಿಯ ಹಾಲ್ ಇದ್ದು, ಪಾರ್ಟಿಗಳನ್ನು ಆಯೋಜಿಸಬಹುದು. ಬೋಟಿನಲ್ಲಿ 100 ಲೈಫ್ ಜಾಕೆಟ್ ಇರಿಸಲಾಗಿದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್‌ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್‌ನೈಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30ರವರೆಗೆ ಇರುತ್ತದೆ ಎಂದು ಬುಧವಾರ ತಿರುಮಲ ಬೋಟ್ ಹೌಸ್ ಮಾಲಕರಾದ ಕೃಷ್ಣ ಬಿ. ಕುಂದರ್, ನಾಗರಾಜ್ ಬಿ. ಕುಂದರ್ ಮತ್ತು ವಿಶ್ವನಾಥ್ ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೋಣಿಮನೆಯಲ್ಲಿ ಉತ್ತರ, ದಕ್ಷಿಣ ಭಾರತದ ಶೈಲಿಯ ಆಹಾರ ಪದಾರ್ಥಗಳು, ತುಳುನಾಡಿನ ಖಾದ್ಯ ಪದಾರ್ಥಗಳು, ಎಲ್ಲ ರೀತಿಯ ಮೀನಿನ ಖಾದ್ಯ ಆಕರ್ಷಣೆಯಾಗಿರಲಿದೆ. ಜತೆಗೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. 14ಕಿ. ಮೀ. ಸುತ್ತಾಟ
ಬೋಟ್‌ಹೌಸ್‌ನಲ್ಲಿ ಕುಳಿತು ಸುವರ್ಣ ನದಿ, ಸೀತಾನದಿ, ಎಣ್ಣೆಹೊಳೆ ನದಿಗಳ ಸಂಗಮ ಸ್ಥಾನ ಡೆಲ್ಟ ಬೀಚ್, ಹಂಗಾರ ಕಟ್ಟೆ, ಬೆಂಗ್ರೆ, ಹೂಡೆ, ಮೂಡುಕುದ್ರು, ಕಲ್ಯಾಣಪುರ ಸಂತೆಕಟ್ಟೆ ಬ್ರಿಜ್ ಸೇರಿದಂತೆ ಸುಮಾರು 14 ಕಿ.ಮೀ. ದೂರ ಸುತ್ತಾಡಬಹುದಾಗಿದೆ. ಈ ಮಧ್ಯೆ ಮೂರ್‍ನಾಲ್ಕು ಕುದ್ರುಗಳನ್ನು ವೀಕ್ಷಿಸಬಹುದಾಗಿದೆ.