Advertisement

ಕಾಪು ಬಳಿ ಕಲ್ಲಿಗೆ ಢಿಕ್ಕಿ ಹೊಡೆದ ಟಗ್: ಅಪಾಯದಲ್ಲಿ 9 ಜನ ಸಿಬ್ಬಂದಿಗಳು

11:25 AM May 16, 2021 | Team Udayavani |

ಕಾಪು: ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಂದು ಟಗ್ ಕೋರಂಗಲ ಆಪರೇಷನ್ ಮೈನ್, ಇದೀಗ ಕಾಪು ಬಳಿ ಕಲ್ಲಿಗೆ ಢಿಕ್ಕಿಹೊಡೆದಿದೆ ಎಂದು ವರದಿಯಾಗಿದೆ. ಇದರಲ್ಲಿ 9 ಜನ ಸಿಬಂದಿಗಳಿದ್ದು ಅಪಾಯದಲ್ಲಿದ್ದಾರೆ.

Advertisement

ಟಗ್ ನಲ್ಲಿ ಅಪಾರ ಪ್ರಮಾಣದ ಡೀಸೆಲ್ ಆಯಿಲ್ ಇದೆ ಎಂದು ತಿಳಿದು ಬಂದಿದೆ. ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿದೆ.

ಈ ಟಗ್ ಗುತ್ತಿಗೆ ಕಂಪನಿಯ ಗುತ್ತಿಗೆ ಕೊನೆಗೊಂಡಿದ್ದು, ನವಮಂಗಳೂರಿನ ಬಂದರಿನ ಹೊರ ವಲಯದಲ್ಲಿ ಆಂಕರ್ ಹಾಕುವಂತೆ ಬಂದರು ಮಂಡಳಿಯಿಂದ ಸೂಚಿಸಲಾಗಿತ್ತು. ಭಾರೀ ಗಾಳಿಗೆ ಆಂಕರ್ ತುಂಡಾಗಿ ಇದೀಗ ಕಾಪು ಸಮೀಪ ಕಾಣ ಬಳಿ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: ಕೋಲಾರದಲ್ಲೂ ಬ್ಲಾಕ್ ಫಂಗಸ್ ಪತ್ತೆ: ಜಾಲಪ್ಪ ಆಸ್ಪತ್ರೆಯಲ್ಲಿ 12 ಮಂದಿಗೆ ಚಿಕಿತ್ಸೆ

Advertisement

ಕರಾವಳಿ ಕಾವಲು ಪಡೆ ಎಸ್ ಐ ಸುಜಾತ, ಕಾಪ್ ಎಸ್ ಐ ರಾಘವೇಂದ್ರ ಸಿ, ಕಾಪು ಕ್ರೈಂ ಎಸ್ ಐ ತಿಪ್ಪೇಶ್, ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಬೋಟ್ ಗೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳು,  ಕಾಪು ಲೈಟ್ ಹೌಸ್ ಬಳಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:  ದೇಶದಲ್ಲಿಂದು 3,11,170 ಕೋವಿಡ್ ಪಾಸಿಟಿವ್, 3,62,437 ಮಂದಿ ಡಿಸ್ಚಾರ್ಜ್

Advertisement

Udayavani is now on Telegram. Click here to join our channel and stay updated with the latest news.

Next