Advertisement

ಕವ್ವಾಯಿ ಹೊಳೆಯಲ್ಲಿ  ರಂಜಿಸಿದ ದೋಣಿ ಸ್ಪರ್ಧೆ

09:20 AM Sep 07, 2017 | Harsha Rao |

ಕಾಸರಗೋಡು: ಜಿಲ್ಲೆಯ ಹಿನ್ನೀರ ಪ್ರಕೃತಿ ಸುಂದರ ಪ್ರದೇಶ ತೃಕ್ಕರಿಪುರದ ಕವ್ವಾಯಿ ನದಿ ತೀರದಲ್ಲಿ ನಡೆದ ಮೂರನೇ ವರ್ಷದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಸ್ಮಾರಕ ದೋಣಿ ಸ್ಪರ್ಧೆ ಜನಮನ ಸೂರೆಗೊಂಡು ರಂಜಿಸಿತು. ಮೆಟ್ಟಮಲ್‌ ಬ್ರದರ್ ಸ್ಥಳೀಯ ಕ್ಲಬ್‌ಗಳ ಸಹಕಾರದೊಂದಿಗೆ ಆಯೋಜಿಸಿದ ಉತ್ತರ ಮಲಬಾರ್‌ ಜಲೋತ್ಸವ ದೋಣಿ ಸ್ಪರ್ಧೆಯಲ್ಲಿ ಕಣ್ಣೂರು – ಕಾಸರಗೋಡು ಜಿಲ್ಲೆಯ ಒಟ್ಟು 22 ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು.

Advertisement

ಒಂದೂವರೆ ಕಿ.ಮೀ. ದೂರದ ದೋಣಿ ಸ್ಪರ್ಧೆಯನ್ನು ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ಸೈಮನ್ಸ್‌ ನಿಶಾನೆ ತೋರಿ ಉದ್ಘಾಟಿಸಿದ್ದರು. ಮಂಗಳವಾರ ಬೆಳಗ್ಗೆ ನಡೆದ ವಾಟರ್‌ ಅಥಾರಿಟಿ ಜಲ ಪ್ರದರ್ಶನವು ನೋಡುಗರನ್ನು ಮನಸೂರೆಗೊಳಿಸಿತು. ಕುಟ್ಟನಾಡ್‌ ಜಲೋತ್ಸವದ ಹೆಸರುವಾಸಿ ವೀಕ್ಷಕ ವಿವರಣೆಗಾರ ಜೊಸೆಫ್‌ ಎಳಂಕುಳಂ, ಜೋನಿ ಭಾಗವಹಿಸಿದ್ದರು. 

ಕವ್ವಾಯಿ ತೀರದ ದೋಣಿ ಪ್ರದರ್ಶನ ಸ್ಪರ್ಧೆಯು ನದಿ ತೀರವನ್ನು ಮಾಲಿನ್ಯ ಮುಕ್ತವಾಗಿಸಿ ಪ್ರಕೃತಿ ಸೌಂದರ್ಯವನ್ನು ಕಾಪಾಡುವ ಸಂದೇಶ ನೀಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಶಾಸಕ ಎಂ. ರಾಜಗೋಪಾಲ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next