ಅಬುಜಾ: ಮದುವೆಯಿಂದ ಹಿಂದೆ ಬರುತ್ತಿದ್ದ ಬೋಟ್ ಮಗುಚಿ ಬಿದ್ದು ಮಕ್ಕಳು ಸೇರಿ 103 ಮಂದಿ ಮೃತಪಟ್ಟ ಘಟನೆ ಉತ್ತರ ನೈಜಿರಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೋಟ್ ನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ನೈಜರ್ ನದಿಗೆ ಬಿದ್ದಿರುವ ಜನರನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಕುತ್ತಿದ್ದಾರೆ. ಇದುವರೆಗೆ 100 ಜನರನ್ನು ರಕ್ಷಣೆ ಮಾಡಲಾಗಿದೆ.
ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಳಿಕ ರಾತ್ರಿ ಅವರೆಲ್ಲಾ ಪಾರ್ಟಿ ಮಾಡಿದ್ದರು ಎಂದು ವರದಿಯಾಗಿದೆ. ಮೋಟಾರು ಸೈಕಲ್ ಗಳಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ನಂತರ ಸ್ಥಳೀಯವಾಗಿ ತಯಾರಿಸಿದ ದೋಣಿಯಲ್ಲಿ ತೆರಳಬೇಕಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ:18 ಗಂಟೆಗಳ ಇ.ಡಿ ವಿಚಾರಣೆ: ಕುಸಿದು ಬಿದ್ದು ಆಸ್ಪತ್ರೆ ಸೇರಿದ ತಮಿಳುನಾಡು ಸಚಿವ
ಬೋಟ್ ಜನರಿಂದ ತುಂಬಿ ಹೋಗಿತ್ತು. ಸುಮಾರು 300ಕ್ಕೂ ಹೆಚ್ಚು ಮಂದಿ ಬೋಟ್ ನಲ್ಲಿದ್ದರು. ದೋಣಿಯು ನೀರಿನಲ್ಲಿ ಒಂದು ದೊಡ್ಡ ಮರದ ದಿಮ್ಮಿಯನ್ನು ಹೊಡೆದು ಎರಡು ಭಾಗವಾಯಿತು ಎಂದು ವರದಿಯಾಗಿದೆ