Advertisement

Kerala ಸರಕಾರದ ಆದೇಶ ಕಚೇರಿಗಳ ಫಲಕ ಮಲಯಾಳದಲ್ಲಿ- ಗಡಿನಾಡಿನ ಕನ್ನಡ ಫಲಕಗಳಿಗೆ ಕತ್ತರಿ ಆತಂಕ

12:40 AM Dec 08, 2023 | Team Udayavani |

ಕಾಸರಗೋಡು: ರಾಜ್ಯ ಸರಕಾರದ ಎಲ್ಲ ಕಚೇರಿಗಳಲ್ಲಿ ನಾಮಫಲಕಗಳನ್ನು ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶಿ ಸುವಂತೆ ಅಧಿಕಾರಿ ಆಡಳಿತ ಸುಧಾರಣೆ ಇಲಾಖೆ ನಿರ್ದೇಶ ನೀಡಿದೆ.
ನಾಮಫಲಕದ ಅರ್ಧ ಭಾಗದಲ್ಲಿ ಮಲಯಾಳದಲ್ಲೂ, ಇನ್ನರ್ಧ ಭಾಗದಲ್ಲಿ ಇಂಗ್ಲಿಷ್‌ನಲ್ಲೂ ಪ್ರದರ್ಶಿಸಬೇಕು. ಅಲ್ಲದೆ ಸರಕಾರಿ ವಾಹನಗಳಲ್ಲಿ ಮುಂದೆ ಮತ್ತು ಹಿಂದೆ ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ನಾಮಫಲಕ ಅಳವಡಿಸಬೇಕೆಂದು ತಿಳಿಸಿದೆ.

Advertisement

ಕಚೇರಿಗಳ ಮೊಹರುಗಳು, ಅಧಿಕಾರಿಗಳ ಹೆಸರು ಮತ್ತು ಅವರು ವಹಿಸುವ ಔದ್ಯೋಗಿಕ ಸ್ಥಾನದ ಮೊಹರುಗಳನ್ನು ಇಂಗ್ಲಿಷ್‌ ಮತ್ತು ಮಲಯಾಳದಲ್ಲೂ ಇರಬೇಕು. ಸರಕಾರಿ ಕಚೇರಿಗಳ ಹಾಜರು ಪಟ್ಟಿ ಇತ್ಯಾದಿ ಎಲ್ಲ ರಿಜಿಸ್ಟರ್‌ ಪುಸ್ತಕಗಳನ್ನೂ ಮಲಯಾಳದಲ್ಲಿ ತಯಾರಿಸಬೇಕು. ಮಾತ್ರವಲ್ಲ ಎಲ್ಲ ಕಡತಗಳನ್ನು ಪೂರ್ಣವಾಗಿ ಮಲಯಾಳದಲ್ಲಿರಬೇಕೆಂದು ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಈ ಸುತ್ತೋಲೆಯು ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡು ಜಿಲ್ಲೆಗೂ ಅನ್ವಯವಾಗಲಿದೆ. ಜಿಲ್ಲೆಯ ಎಲ್ಲ ಸರಕಾರಿ ಕಚೇರಿ ಮತ್ತು ಅವುಗಳ ವಾಹನಗಳಲ್ಲಿ ಕನ್ನಡ ನಾಮ ಫಲಕಗಳು ಮಾಯವಾಗಲಿವೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡಿನಲ್ಲೂ ಇದು ಕಡ್ಡಾಯವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next