Advertisement

ಬಿಸಿಸಿಐ ಈಗ ಒಡೆದ ಮನೆ!

12:09 PM May 07, 2017 | |

ನವದೆಹಲಿ: ಮತ್ತೆ ಬಿಸಿಸಿಐ ಗೊಂದಲದ ಗೂಡಾಗಿದೆ. ಇಂಗ್ಲೆಂಡ್‌ನ‌ಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಬಣಗಳು ಸೃಷ್ಟಿಯಾಗಿ ಬಿಸಿಸಿಐ ಒಡೆದ ಮನೆಯಾಗಿದೆ.

Advertisement

ಒಂದು ಬಣ ತಂಡವನ್ನು ಆಯ್ಕೆ ಮಾಡಬಾರದು, ಚಾಂಪಿಯನ್ಸ್‌ ಟ್ರೋಫಿಯನ್ನು ಬಹಿಷ್ಕರಿಸಬೇಕು ಎಂದು ಪಟ್ಟು ಹಿಡಿದು ಕೂತಿದ್ದರೆ, ಮತ್ತೂಂದು ಬಣ ಆಡಬೇಕು ಎಂಬ ಭಾವನೆ ಹೊಂದಿದೆ.

ಒಂದು ಬಣ ತಂಡವನ್ನು ಸೋಮವಾರ ಆಯ್ಕೆ ಮಾಡಲಾಗುವುದು ಎಂದು ಪ್ರಕಟಿಸಿದ್ದರೆ, ಮತ್ತೂಂದು ಬಣ ಈ ವಿಷಧಿಯವೇ ತಮಗೆ ಗೊತ್ತಿಲ್ಲವೆಂದು ಹೇಳಿಕೊಂಡಿದೆ!

ದಕ್ಷಿಣ ಭಾರತದ ಕ್ರಿಕೆಟ್‌ ಮಂಡಳಿಗಳ ಮೇಲೆ ಬಿಗಿ ನಿಯಂತ್ರಣ ಹೊಂದಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಬಣ ಚಾಂಪಿಯನ್ಸ್‌ ಟ್ರೋಫಿಗೆ ಗೈರಾಗುವ ಮೂಲಕ ಐಸಿಸಿಗೆ ಪಾಠ ಕಲಿಸಬೇಕು ಎಂದು ಬಲವಾಗಿ ವಾದಿಸುತ್ತಿದೆ.

ಆದರೆ ಪೂರ್ವ ಮತ್ತು ಉತ್ತರ ವಲಯಗಳು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ಹೊಂದಿವೆ. ಇನ್ನೊಂದು ಕಡೆ ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿಗಳು ಖಡಾಖಂಡಿತವಾಗಿ ಸೂಚನೆ ನೀಡಿದ್ದು ಕೂಡಲೇ ತಂಡವನ್ನು ಆಯ್ಕೆ ಮಾಡಲೇಬೇಕು, ಒಂದು
ವೇಳೆ ಇದಕ್ಕೆ ವಿರುದ್ಧ ನಿರ್ಣಯ ಕೈಗೊಂಡರೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಖಚಿತಪಡಿಸಿದ್ದಾರೆ.

Advertisement

ಇಂದು ಬಿಸಿಸಿಐ ಸಭೆ: ಭಾನುವಾರ ಬಿಸಿಸಿಐ ವಿಶೇಷ ಸಭೆಯಿದೆ. ಇಲ್ಲಿ ಭಾರತ ಕ್ರಿಕೆಟ್‌ ತಂಡ ಆಡಬೇಕೋ, ಬೇಡವೋ ಎಂಬ ಬಗ್ಗೆ ನಿರ್ಣಯವಾಗುವ ಸಾಧ್ಯತೆಯಿದೆ. ಭಾರತ ಚಾಂಪಿಯನ್ಸ್‌ ಟ್ರೋಫಿ ಬಹಿಷ್ಕರಿಸುವುದರಿಂದ ಯಾವುದೇ ಲಾಭವಿಲ್ಲವೆಂದು ನಿಯೋಜಿತ ಆಡಳಿತಾಧಿಧಿಕಾರಿಗಳ ಅಭಿಪ್ರಾಯವಾಗಿದೆ  ಇದನ್ನು ಮೀರಿ ಬಿಸಿಸಿಐ ಪದಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆಯೇ ಎನ್ನುಧಿವುದು ಖಚಿತವಾಗಿಲ್ಲ.

ಏನಿದು ಚಾಂಪಿಯನ್ಸ್‌
ಟ್ರೋಫಿ ಗೊಂದಲ?

ಇತ್ತೀಚೆಗಷ್ಟೇ ಐಸಿಸಿಯಲ್ಲಿ ಬಿಸಿಸಿಐ ಸೋಲನುಭವಿಸಿದೆ. ಬಿಸಿಸಿಐಗೆ ಭಾರೀ ಲಾಭ ತರುವ ಬಿಗ್‌ ಥ್ರಿà ಆದಾಯ ನೀತಿ
ರದ್ದುಪಡಿಸಬಾರದು, ಹಾಗೆಯೇ ಐಸಿಸಿ ಆಡಳಿತ ವ್ಯವಸ್ಥೆ ಈಗಿರುವಂತೆ ಬಿಸಿಸಿಐ ಆಗ್ರಹಿಸಿತ್ತು. ಈ ಕುರಿತು ಮತದಾನ
ನಡೆದ ವೇಳೆ ಉಳಿದೆಲ್ಲ ರಾಷ್ಟ್ರಗಳು ಬಿಸಿಸಿಐ ಆಗ್ರಹದ ವಿರುದ್ಧ ಮತ ಚಲಾಯಿಸಿದವು.

ಇದರಿಂದ ಸಿಟ್ಟಿಗೆದ್ದ ಬಿಸಿಸಿಐ ಐಸಿಸಿಗೆ ಪಾಠ ಕಲಿಸುವ ದೃಷ್ಟಿಯಿಂದ ವಿಶ್ವದ ಎಲ್ಲ ರಾಷ್ಟ್ರಗಳು ಭಾಗವಹಿಸುವ ಚಾಂಪಿಯನ್ಸ್‌ ಟ್ರೋಫಿಗೆ ಗೈರಾಗುವ ಬಗ್ಗೆ ಚಿಂತಿಸಿದೆ. ಆದರೆ ಇದರಿಂದ ಲಾಭವಿಲ್ಲವೆಂದು ಆಡಳಿತಾಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಸೋಮವಾರ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ಕ್ರಿಕೆಟ್‌ ತಂಡದಾಯ್ಕೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಆದರೆ ಆಯ್ಕೆ ಸಭೆ ನಡೆಸಬೇಕಾಗಿರುವ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಈ ವಿಷಯ ನನಗೇ ಗೊತ್ತಿಲ್ಲ, ಹೇಗೆ ಆಯ್ಕೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದು ಭಾರೀ ಗೊಂದಲ ಮೂಡಿಸಿದೆ.

ಒಂದು ವೇಳೆ ಅಮಿತಾಭ್‌ ತಂಡದ ಆಯ್ಕೆ ಸಭೆ ನಡೆಸದಿದ್ದರೆ ಸಿಇಒ ರಾಹುಲ್‌ ಜೋಹ್ರಿ ನೇರವಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ಗೆ ತಂಡದ ಆಯ್ಕೆ ಮಾಡುವಂತೆ ಸೂಚಿಸಬಹುದು. ಈ ಬೆಳವಣಿಗೆ ನಡೆದರೆ ಅದು ಬಿಸಿಸಿಐನೊಳಗೆ ಭಾರೀ ಕ್ಷೋಭೆಗೆ ಕಾರಣವಾಗುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next