Advertisement

ಮಾಡಿದ ಪಾತ್ರಗಳನ್ನೇ ಮಾಡುವುದಕ್ಕೆ ಬೋರು!

10:23 AM Jul 23, 2017 | |

ರಚಿತಾ ರಾಮ್‌ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಈ ನಾಲ್ಕು ವರ್ಷದಲ್ಲಿ ರಚಿತಾ ಸ್ಟಾರ್‌ಗಳ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ರಚಿತಾ ಕೈಯಲ್ಲಿ ಎರಡು ಸಿನಿಮಾಗಳಿವೆ. “ಭರ್ಜರಿ’ ಹಾಗೂ “ಉಪ್ಪಿ ರುಪಿ’. ಅದು ಬಿಟ್ಟರೆ ರಚಿತಾ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಒಪ್ಪಿಕೊಂಡಿದ್ದಾರೆನ್ನಲಾದ “ಜಾನಿ ಜಾನಿ ಯೆಸ್‌ ಪಪ್ಪಾ’ ಹಾಗೂ “ಕನಕ’ದಿಂದಲೂ ರಚಿತಾ ಹೊರಬಂದಿದ್ದಾರೆ. ಯಾಕೆ ರಚಿತಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ.

Advertisement

ಅದಕ್ಕೆ ಕಾರಣ, ಮಾಡಿದ ಪಾತ್ರಗಳನ್ನೇ ಮತ್ತೆ ಮಾಡೋಕೆ ರಚಿತಾಗೆ ಇಷ್ಟವಿಲ್ಲವಂತೆ. ಆ ಕಾರಣದಿಂದಲೇ ಹೊಸ ಬಗೆಯ ಪಾತ್ರಗಳಿಗಾಗಿ ರಚಿತಾ ಎದುರು ನೋಡುತ್ತಿದ್ದಾರಂತೆ.  “ನಾನು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷ ಆಗಿದೆ. ಈ ನಾಲ್ಕು ವರ್ಷದಲ್ಲಿ ಒಂದಷ್ಟು ಪಾತ್ರಗಳನ್ನು ಮಾಡಿದ್ದೇನೆ. ಮತ್ತೆ ಆ ತರಹದ ಪಾತ್ರಗಳನ್ನೇ ತಂದರೆ ನಾನೇನು ಮಾಡಲಿ. ನನಗೆ ಮಾಡಿದ ಪಾತ್ರಗಳನ್ನೇ ರಿಪೀಟ್‌ ಮಾಡಲು ಇಷ್ಟವಿಲ್ಲ. ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಪಾತ್ರದಲ್ಲಿ ವಿಭಿನ್ನತೆ ಇರಲ್ಲ. ಹಾಗಾಗಿ, ಹೊಸ ತರಹದ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ರಚಿತಾ.

“ರಚಿತಾ ಎಂದರೆ ಕಮರ್ಷಿಯಲ್‌ ಹೀರೋಯಿನ್‌. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಿರುವ ಅವರು ಆಫ್ ಬೀಟ್‌ ತರಹದ ಸಿನಿಮಾಗಳನ್ನು ಮಾಡುತ್ತಾರಾ ಎಂಬ ಸಂದೇಹ ಅನೇಕರಿಗಿದೆ. ರಚಿತಾ ರಾಮ್‌ ಆಫ್ ಬೀಟ್‌ ತರಹದ ವಿಭಿನ್ನ ಪಾತ್ರವಿರುವ ಸಿನಿಮಾ ಮಾಡಲು ತಯಾರಿದ್ದಾರಂತೆ. “ನಾನು ಯಾವುದೇ ಒಂದು ಜಾನರ್‌ಗೆ ಬ್ರಾಂಡ್‌ ಆಗಲು ರೆಡಿಯಿಲ್ಲ. ಹೊಸ ಹೊಸದನ್ನು ಪ್ರಯತ್ನಿಸುತ್ತಿರಬೇಕು. ಹಾಗಾಗಿ, ಆಫ್ಬೀಟ್‌ ಸಿನಿಮಾ ಮಾಡಲು ನಾನು ರೆಡಿ. ಮೊದಲು ಬಂದು ನನಗೆ ಕಥೆ ಹಾಗೂ ಪಾತ್ರವನ್ನು ವಿವರಿಸಬೇಕು.

ಅದು ಬಿಟ್ಟು ದೂರದಿಂದಲೇ ಆಫ್ ಬೀಟ್‌ ತರಹದ ಸಿನಿಮಾ ಮಾಡುತ್ತಾರಾ ಎಂದು ಸಂದೇಹ ಪಡೋದು ಸರಿಯಲ್ಲ. ನನಗೆ ಕಥೆ, ಪಾತ್ರ ಇಷ್ಟವಾದರೆ ಮಾಡುತ್ತೇನೆ’ ಎನ್ನುವುದು ರಚಿತಾ ಮಾತು. ಒಳ್ಳೆಯ ಕಥೆ ಇರುವ ಪಾತ್ರ ಇರುವ ಸಿನಿಮಾಗಳಲ್ಲಿ ಬಜೆಟ್‌ ಇರೋದಿಲ್ಲ ಎಂಬ ಮಾತಿದೆ. ಹೀಗಿರುವಾ ಸ್ಟಾರ್‌ ನಟಿಯನ್ನು ಕೇಳ್ಳೋದು ಹೇಗೆ ಪ್ರಶ್ನೆ ಬರುತ್ತದೆ. ಆದರೆ, ರಚಿತಾಗೆ ಸಂಭಾವನೆಗಿಂತ  ಪಾತ್ರ ಮುಖ್ಯವಂತೆ. “ಯಾವ ಸಿನಿಮಾಗಳಿಗೆ ಎಷ್ಟು ಸಂಭಾವನೆ ಪಡೆಯಬೇಕು ಎಂದು ನನಗೆ ಗೊತ್ತು. ನಾನು ಕಥೆ, ನನ್ನ ಪಾತ್ರ ನೋಡುತ್ತೇನೆ. ರಚಿತಾ 40 ಲಕ್ಷ ತಗೋತ್ತಾರೆ ಅಥವಾ ಇನ್ನೆಷ್ಟು ತಗೋತ್ತಾರೆ ಅಂದಾಕ್ಷಣ ಅದನ್ನು ನಂಬುವ ಬದಲು ಯೋಚಿಸಬೇಕು.

ನಾನು ಪ್ರೊಫೆಶನಲ್‌ ಆಗಿ ಸಂಭಾವನೆ ಕೋಟ್‌ ಮಾಡುತ್ತೇನೆ. ನನ್ನ ಮಾರುಕಟ್ಟೆಯನ್ನು ಕೂಡಾ ನಾನು ನೋಡುತ್ತೇನೆ. ನಾನು ಯಾವತ್ತು ನನಗೆ ಇಷ್ಟೇ ಸಂಭಾವನೆ ಬೇಕೆಂದು ಹಠ ಹಿಡಿದಿಲ್ಲ. ಯಾವುದಾದರೊಂದು ಕಥೆ ಇಷ್ಟವಾದರೆ, ಆ ತಂಡದಲ್ಲಿ ನಾನು ಇರಲೇಬೇಕೆಂದು ನನಗೆ ಮನಸ್ಸಾದರೆ ನನ್ನ ಸಂಭಾವನೆಯನ್ನು ನಾನು ಕಡಿಮೆ ಮಾಡಿಕೊಂಡಿದ್ದೇನೆ ಮತ್ತು ಮಾಡಿಕೊಳ್ಳುತ್ತೇನೆ. ನನಗೆ ಒಳ್ಳೆಯ ಕಥೆ ಹಾಗೂ ಪಾತ್ರ ಮುಖ್ಯ’ ಎನ್ನುವ ಮೂಲಕ ಹೊಸ ಬಗೆಯ ಪಾತ್ರಗಳಿಗೆ ತಾವು ಎದುರು ನೋಡುತ್ತಿರುವುದಾಗಿ ಹೇಳುತ್ತಾರೆ ರಚಿತಾ. 

Advertisement
Advertisement

Udayavani is now on Telegram. Click here to join our channel and stay updated with the latest news.

Next