Advertisement
ಜಗತ್ತಿನ ಪತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಬಿ.ಎಂ.ಡಬ್ಲ್ಯೂ ಐಷಾರಾಮಿ ಓಡಾಟವನ್ನು ಇನ್ನಷ್ಟು ಉನ್ನತೀಕರಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಕಾರುಗಳಿಂದ, ಗ್ರಾಹಕರು ತಮ್ಮ ನಿರೀಕ್ಷೆಗೂ ಮೀರಿದ ಚಾಲನಾನುಭವ ಪಡೆಯಬಹುದಾಗಿದೆ. ಬಿಎಂಡಬ್ಲ್ಯೂ ಸಂಸ್ಥೆ ಕೂಡ, ಐಷಾರಾಮಿ ಓಡಾಟ ಬಯಸುವ ನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡೇ 3-ಸಿರೀಸ್ ಕಾರುಗಳನ್ನು ತಯಾರಿಸಿದೆ. ಇತ್ತೀಚಿಗಷ್ಟೆ ಗುರುಗ್ರಾಮ್‌ನ ಥ್ರಿಲ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯೂ ಇಂಡಿಯಾದ ಅಧ್ಯಕ್ಷ ರುದ್ರತೇಜ್ ಸಿಂಗ್ ಈ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.
Related Articles
Advertisement
ವಿಶೇಷ ಸೌಲಭ್ಯಗಳು: ಆಟೊಮ್ಯಾಟಿಕ್ ಏರ್‌ಕಂಡೀಷನಿಂಗ್ ಥ್ರೀ-ಝೋನ್ ಇನ್ನಷ್ಟು ಖುಷಿ ನೀಡುತ್ತದೆ. ಗೆಸ್ಟರ್ ಕಂಟ್ರೋಲ್, ವೈರ್‌ಲೆಸ್‌ಚಾರ್ಜಿಂಗ್ ಮತ್ತು ವೈರ್ ಲೆಸ್ ಆಪಲ್ ಕಾರ್‌ಪ್ಲೇ, ಮಾಡ್ರನ್‌ಕಾಕ್‌ಪಿಟ್‌ಕಾನ್ಸೆಪ್ಟ್, ಬಿಎಂಡಬ್ಲ್ಯೂ ಲೈವ್ ಕಾಕ್‌ಪಿಟ್, ಅತ್ಯಾಧುನಿಕ ಬಿಎಂಡಬ್ಲ್ಯೂ ಆಪರೇಟಿಂಗ್ ಸಿಸ್ಟಂ 7.0, 3ಡಿ ನ್ಯಾವಿಗೇಷನ್, ಸ್ಟೀರಿಂಗ್ ವ್ಹೀಲ್ ಹಿಂಬದಿ 12.3 ಇಂಚು ಡಿಜಿಟಲ್ ಇನ್ಸ್‌ಟ್ರಾಮೆಂಟ್ ಡಿಸ್‌ಪ್ಲೆ, 10.25 ಇಂಚು ಕಂಟ್ರೋಲ್ ಡಿಸ್‌ಪ್ಲೆ, ಆಟೊ ಸ್ಟಾರ್ಟ್-ಸ್ಟಾಪ್, ಬ್ರೇಕ್-ಎನರ್ಜಿ ರೀಜನರೇಷನ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಸೇರಿದಂತೆ ಹತ್ತಾರು ವಿನೂತನ ಆಯ್ಕೆಗಳನ್ನು ಇದು ಹೊಂದಿದೆ.
ಚಾಲಕನ ಧ್ವನಿಗೆ ಸ್ಪಂದಿಸುತ್ತೆ!: ಈ ಮೂರು ಕಾರುಗಳಿಗೂ ಧ್ವನಿಗೆ ಪ್ರತಿಕ್ರಿಯಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಾರು ಚಾಲಕ ಸೆಟ್ ಮಾಡಿದ ತನ್ನ ಧ್ವನಿಯನ್ನು ಇದು ಗುರುತಿಸುತ್ತದೆ. ಚಾಲಕ ಕಾರಿನಲ್ಲಿ ಕುಳಿತು ಸ್ಟೇರಿಂಗ್ ಹಿಡಿದ ಬಳಿಕ ಸಂವಹನ ನಡೆಸಿದರೆ, ಆತನ ಧ್ವನಿಯನ್ನು ಗುರುತಿಸಿ ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಅಲ್ಲದೇ, ಕಾರನ್ನು ಸ್ಪರ್ಶಿಸುವವರಿಗೂ ಎಚ್ಚರಿಸುತ್ತದೆ.
ಸ್ಮಾರ್ಟ್ ಪಾರ್ಕಿಂಗ್: ಕಾರಿನ ಹಿಂಭಾಗ ಮತ್ತು ಮುಂಭಾಗದಲ್ಲಿ ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಪಾರ್ಕಿಂಗ್ ಮಾಡುವ ಹಾಗೂ ಕಿರಿದಾದ ಸ್ಥಳದಲ್ಲಿ ಚಾಲನೆ ಮಾಡುವ ಸಂದರ್ಭದಲ್ಲಿ 50 ಮೀಟರ್‌ವರೆಗಿನ ದೃಶ್ಯಗಳನ್ನು ಸೆರೆಹಿಡಿದು, 50 ಮೀಟರ್ ಸ್ಥಳದಲ್ಲಿನ ವಸ್ತುಗಳನ್ನು ಚಾಲಕನ ಗಮನಕ್ಕೆ ತರುತ್ತದೆ. ಹಾಗೆಯೇ ಪಾರ್ಕಿಂಗ್ ಸಂದರ್ಭದಲ್ಲಿ ವಾಯ್ಸ ತಂತ್ರಜ್ಞಾನ ಬಳಸಿ ಸೂಕ್ತವಾದ ಸ್ಥಳದಲ್ಲಿ ಫರ್ಪೆಕ್ಟ್ ಪಾರ್ಕಿಂಗ್ ಮಾಡಬಹುದಾಗಿದೆ. ರಸ್ತೆಗಳ ಉಬ್ಬು, ತಗ್ಗುಗಳಲ್ಲೆಲ್ಲಾ ಕಾರು ಚಲಾಯಿಸುವಾಗ ಪ್ರಯಾಣಿಕರು ಓಲಾಡದಂತೆ ನಿಯಂತ್ರಿಸಿ ಸ್ಮೂತ್ ಅನುಭವವನ್ನು ನೀಡಲು, ಡ್ರೈವಿಂಗ್ ಕಂಫರ್ಟ್ ಲಿಫ್ಟ್ ಡ್ರ್ಯಾಂಪ್ ಕಂಟ್ರೋಲರ್‌ಅನ್ನು ಅಳವಡಿಸಿದೆ.
* ರಾಜು ಖಾರ್ವಿ ಕೊಡೇರಿ