Advertisement
ಕಾರು ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ಕಾರನ್ನು ನದಿಯಿಂದ ಹೊರ ತೆಗೆಸಿ ವಿಚಾರಣೆ ಕೈಗೊಂಡರು. ಈ ವೇಳೆ ಅಚ್ಚರಿ ವಿಚಾರ ಹೊರ ಬಂದಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನದಿಗೆ ಕಾರು ಮುಳುಗಿಸಿದ್ದಾನೆ ಎಂದು ಬೆಳಕಿಗೆ ಬಂದಿದೆ.
Related Articles
Advertisement
ಕಾರು ಪತ್ತೆ ಬಳಿಕ ಪೊಲೀಸರು ಪರಿಶೀಲನೆ ನಡೆಸಿ ಕಾರು ಮಾಲೀಕನನ್ನು ಪಟ್ಟಣದ ಠಾಣೆಗೆ ಕರೆದು ತಂದು ವಿಚಾರಿಸಿದ್ದಾರೆ. ಈ ವೇಳೆ ಮಾನಸಿಕ ವ್ಯಕ್ತಿ ಅಸಂಬದ್ದ ಹೇಳಿಕೆ ನೀಡುತ್ತಿದ್ದರಿಂದ ಪೊಲೀಸರು ಕಂಗಾಲಾಗಿದ್ದಾರೆ. ಬಳಿಕ ಸಂಬಂಧಿಕರು ಠಾಣೆಗೆ ಬಂದು ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ಖುಲಾಸೆ ಮಾಡಿದ್ದಾರೆ.