Advertisement

Soren ನಿವಾಸದಲ್ಲಿ ಪತ್ತೆಯಾದ BMW ಕಾರು ಕಾಂಗ್ರೆಸ್‌ ಸಂಸದ ಧೀರಜ್‌ ಗೆ ಸೇರಿದ್ದು!

03:19 PM Feb 08, 2024 | Team Udayavani |

ನವದೆಹಲಿ: ದೆಹಲಿಯಲ್ಲಿ ಹೇಮಂತ್‌ ಸೊರೇನ್‌ ನಿವಾಸದಲ್ಲಿ ವಶಪಡಿಸಿಕೊಂಡಿದ್ದ ಬಿಎಂಡಬ್ಲ್ಯು ಕಾರು ಸೊರೇನ್‌ ಗೆ ಸೇರಿದ್ದಲ್ಲ, ಆದರೆ ಇದು ಕಾಂಗ್ರೆಸ್‌ ರಾಜ್ಯಸಭಾ ಸಂಸದ ಧೀರಜ್‌ ಪ್ರಸಾದ್‌ ಸಾಹುಗೆ ಸೇರಿದ್ದಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ಗೆದ್ದ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ನಟಿಯನ್ನು ಹತ್ಯೆಗೈದ ಮಗ

ಸೊರೇನ್‌ ನಿವಾಸದಲ್ಲಿ ಬಿಎಂಡಬ್ಲ್ಯು ಕಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಸಾಹುಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದ್ದು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ, ಬಿಎಂಡಬ್ಲ್ಯು ಕಾರು ಧೀರಜ್‌ ಪ್ರಸಾದ್‌ ಸಾಹು ಹೆಸರಿನಲ್ಲಿ ರಿಜಿಸ್ಟರ್ಡ್‌ ಆಗಿದೆ. ಸಾಹು ಜಾರ್ಖಂಡ್‌ ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ. ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಾಹು ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಬರೋಬ್ಬರಿ 351 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.

ಹಣದ ರಾಶಿಯನ್ನು ತೆರಿಗೆ ಅಧಿಕಾರಿಗಳು ಎಣಿಸುತ್ತಿರುವ ದೃಶ್ಯವನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿತ್ತು.

Advertisement

ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಅಂತರ ಕಾಯ್ದುಕೊಂಡಿದ್ದು, ಪಕ್ಷ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತ್ತು. ಸಾಹು ಕೂಡಾ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದೊರೆತ ಹಣ ಮದ್ಯದ ವಹಿವಾಟಿನದ್ದಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದರು.

ಸಾಹು ನಿವಾಸದಲ್ಲಿ ಪತ್ತೆಯಾದ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 40 ಯಂತ್ರಗಳ ಮೂಲಕ ಹತ್ತು ದಿನಗಳ ಕಾಲ ಎಣಿಕೆ ಮಾಡಿದ್ದರು.

ಕಾನೂನು ಬಾಹಿರವಾಗಿ ಭೂ ಮಾಲೀಕತ್ವವನ್ನು ಬದಲಾಯಿಸಿದ ಹಗರಣದಲ್ಲಿ ಕಳೆದ ವಾರ ಸೊರೇನ್‌ ಬಂಧನಕ್ಕೀಡಾಗಿದ್ದರು. ಬಂಧನಕ್ಕೂ ಮುನ್ನ ಸೊರೇನ್‌ ಜಾರ್ಖಂಡ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next