Advertisement
ಬಿ ಎಮ್ ಎಬ್ಲ್ಯೂ ಇಂಡಿಯಾದಿಂದ ಹೊರತರಲಾದ ಈ ನೂತನ ಕಾರನ್ನು ಚೆನ್ನೈನ ಬಿ ಎಮ್ ಡಬ್ಲ್ಯೂ ಗ್ರೂಪ್ ವಿಷೇಷವಾಗಿ ಭಾರತೀಯರಿಗಾಗಿಯೇ ತಯಾರಿಸಿದೆ. ಈ ಕಾರು ಡೀಸೆಲ್ ಹಾಗೂ ಪೆಟ್ರೋಲ್ ಎರಡೂ ಇಂಜಿನ್ ಗಳಲ್ಲಿ ಇಂದಿನಿಂದ ಲಭ್ಯವಿದೆ ಎಂದು ಬಿ ಎಮ್ ಡಬ್ಲ್ಯೂ ಇಂಡಿಯಾ ಹೇಳಿದೆ.
Related Articles
Advertisement
ಬಿಎಮ್ ಡಬ್ಲ್ಯೂ 320 ಬಿಎಮ್ ಡಬ್ಲ್ಯೂ 320 ಎಲ್ ಡಿ ಲಕ್ಸುರಿ ಲೈನ್ ಕಾರ್ ಗೆ 52.50 ಲಕ್ಷ. ಬಿ ಎಮ್ ಡಬ್ಲ್ಯೂ 330 ೆಲ್ ಐ ಎಮ್ ಸ್ಪೋರ್ಟ್ಸ್ ‘ಫರ್ಸ್ಟ್ ಎಡಿಷನ್’ ಕಾರ್ ಗೆ 53.90 ಲಕ್ಷ.
ಇನ್ನು, ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ವೈಟ್, ಮೆಲ್ಬೊರ್ನ್ ರೆಡ್, ಕಾರ್ಬನ್ ಬ್ಲ್ಯಾಕ್ ಹಾಗೂ ಕಾಶ್ಮೀರಿ ಸಿಲ್ವರ್ ಎಂಬ ನಾಲ್ಕು ಬಗೆಯ ಮೆಟಾಲಿಕ್ ಪೈಂಟ್ ವರ್ಕ್ಸ್ ಗಳಲ್ಲಿ ಲಭ್ಯವಿದೆ.
ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ಹೊರನೋಟ ಹೇಗಿದೆ..?
ಸ್ಟ್ರಿಕಿಂಗ್ ಫ್ರಂಟ್ ಲುಕ್ ಹೊಂದಿರುವ ಕಾರು ಎಲ್ಇಡಿ
ಹೆಡ್ ಲೈಟ್ ಗಳೊಂದಿಗೆ ಕಂಗೊಳಿಸುತ್ತದೆ. ಸೆಕ್ಸಿ ಲುಕ್ ನೊಂದಿಗೆ ಸೆಳೆಯುವ ಈ ಕಾರು, ಮೂರು ಆಯಾಮಗಳಲ್ಲಿ ಎಲ್ಇಡಿ ಟೈಲೈಟ್ಸ್ ನೊಂದಿಗೆ ಎರಡು ದೊಡ್ಡ ಇಂಗ್ಲೀಷ್ ಎಲ್ ಆಕಾರದ ಟೈಲ್ ಪೈಪ್ಸ್ ನೊಂದಿಗೆ ತಯಾರಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ
ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ಆಂತರಿಕ ವಿನ್ಯಾಸ ಹೇಗಿದೆ..?
ಈ ಕಾರಿನ ಆಂತರಿಕ ಸೌಂದರ್ಯವೂ ಬಹಳ ಸುಂದರವಾಗಿದೆ. ವಿಶಾಲವಾದ ಗ್ರ್ಯಾಂಡ್ ಕ್ಯಾಬಿನ್ ಹೊಂದಿದ್ದು, ವೆಲ್ ಕಮ್ ಲೈಟ್ ಕಾರ್ಪೆಟ್, ಪ್ರಕಾಶಮಾನವಾಗಿ ಹೊಳೆಯುವ ಡೋರ್ ಸಿಲ್ ಪ್ಲೇಟ್ಸ್, ಆರು ಬಣ್ಣಗಳಲ್ಲಿ ಸುತ್ತುವರಿದ ಬೆಳಕನ್ನು ಹೊಂದಿದೆ ಈ ಲಕ್ಸುರಿಯಸ್ ಕಾರು.
ಇಂಜಿನ್ ನ ವಿಶೇಷತೆಗಳೇನು..?
ಬಿಎಂಡಬ್ಲ್ಯು 330ಯ ಎರಡು ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 258 ಎಚ್‌ಪಿ ಉತ್ಪಾದನೆ ಮತ್ತು 1,550 – 4,400 ಆರ್‌ಪಿಎಂನಲ್ಲಿ ಗರಿಷ್ಠ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಾರು ಕೇವಲ 6.2 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಹೆಚ್ಚಿಸುತ್ತದೆ. ಬಿಎಂಡಬ್ಲ್ಯು 320 ಎಲ್ ಡಿ ಯ ಎರಡು ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 190 ಎಚ್‌ಪಿ ಉತ್ಪಾದನೆ ಮತ್ತು 1,750 – 2,500 ಆರ್‌ಪಿಎಂನಲ್ಲಿ ಗರಿಷ್ಠ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಾರು ಕೇವಲ 7.6 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಹೆಚ್ಚಿಸುತ್ತದೆ.
ಬಿಎಂಡಬ್ಲ್ಯು 3 ಸೀರೀಸ್ ಗ್ರ್ಯಾನ್ ಲೈಮೋಸಿನ್ ಕಾರಿನ ಸುರಕ್ಷತೆ ಹೇಗೆ..? ಬಿಎಂಡಬ್ಲ್ಯು ಸುರಕ್ಷತಾ ತಂತ್ರಜ್ಞಾನಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಸೇರಿದಂತೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಮತ್ತು ಕ್ರ್ಯಾಶ್ ಸೆನ್ಸಾರ್ ಸೇರಿ ಹಲವು ಅತ್ಯಾಧುನಿಕ ತಂತ್ರಜ್ಙಾನವನ್ನೊಳಗೊಂಡಿದೆ. ಇದನ್ನೂ ಓದಿ: ಬಿಜೆಪಿ ಯೋಜನೆಗಳೇ ಮಾಯ