Advertisement
ಹೊಸ ವ್ಯವಸ್ಥೆಗಾಗಿ ಎಲ್ಲ ಬಿಎಂಟಿಸಿ ಘಟಕಗಳಲ್ಲಿ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಮಹಿಳೆಯರಿಗೆ ಮೊದಲ ಆದ್ಯತೆ ಮತ್ತು ಜೇಷ್ಠತೆ ಆಧಾರದ ಮೇಲೆ ಈ ಕರ್ತವ್ಯ ನಿಯೋಜನೆ ಪದ್ಧತಿ ಪರಿಚಯಿಸ ಲಾಗುತ್ತಿದೆ. ಈ ವ್ಯವಸ್ಥೆ ಅನುಷ್ಠಾನಕ್ಕಾಗಿ ಆಯಾ ವಲಯದ ವಿಭಾಗೀಯ ನಿಯಂತ್ರಣಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಕೌನ್ಸೆಲಿಂಗ್ ಸಮಿತಿ ರಚಿಸಲಾಗಿದೆ. ವಿಭಾಗೀಯ ಸಂಚಾರ ಅಧಿಕಾರಿ ಅಥವಾ ತಾಂತ್ರಿಕ ಶಿಲ್ಪಿ, ಘಟಕ ವ್ಯವಸ್ಥಾಪಕರು, ಸಿಬ್ಬಂದಿ ಮೇಲ್ವಿಚಾರಕ ಮತ್ತು ಸಂಚಾರ ಮೇಲ್ವಿಚಾರಕರನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿರುತ್ತದೆ.
Related Articles
Advertisement
ಬಿಎಂಟಿಸಿ ನೌಕರರ ಸಿಬ್ಬಂದಿಯಲ್ಲೇ ಅಪಸ್ವರ! :
ಕರ್ತವ್ಯ ನಿಯೋಜನೆಯಲ್ಲಿ ಕಿರುಕುಳ ತಪ್ಪಿಸಿ, ಪಾರದರ್ಶಕತೆ ತರಬೇಕು ಎನ್ನುವುದು ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಆದರೆ, ಇದಕ್ಕಾಗಿ ಬಿಎಂಟಿಸಿ ಪರಿಚಯಿಸುತ್ತಿರುವ ಡ್ನೂಟಿ ರೋಟಾ ವ್ಯವಸ್ಥೆಗೆ ಸ್ವತಃ ಅದೇ ಸಾರಿಗೆ ನೌಕರರಿಂದ ಅಪಸ್ವರ ಹಾಗೂ ಆಕ್ಷೇಪಗಳು ಕೇಳಿಬರುತ್ತಿವೆ!
ಸಾವಿರಾರು ನೌಕರರು ಒಂದೇ ಮಾರ್ಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರು ತ್ತಾರೆ. ಸೇವೆಯಲ್ಲಿ ಅಥವಾ ಪ್ರಯಾಣಿಕರಿಂದ ಒಂದೇ ಒಂದು ದೂರು ಕೇಳಿಬಂದಿಲ್ಲ. ಇನ್ನು ಕೆಲವು ಚಾಲಕರಿಗೆ ಬಸ್ “ಅಡ್ಜಸ್ಟ್’ ಆಗಿರುತ್ತದೆ. ಉತ್ತಮ ನಿರ್ವಹಣೆ ಮಾಡಿರುತ್ತಾರೆ. ಅದೇ ರೀತಿ ಹಲವರು ಆಯಾ ಪಾಳಿಗೆ ವಿಶೇಷವಾಗಿ ರಾತ್ರಿ ಪಾಳಿಗೆ ಹೊಂದಿಕೊಂಡಿರುತ್ತಾರೆ. ಉದಾಹರಣೆಗೆ ರಾತ್ರಿ ಪಾಳಿ ಮುಗಿಸಿಕೊಂಡು ಹತ್ತಿರದ ಸಂಬಂಧಿಕರ ಮನೆ ಅಥವಾ ಸ್ನೇಹಿತರ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈಗ ಡ್ನೂಟಿ ರೋಟಾ ವ್ಯವಸ್ಥೆಯಿಂದ ಅದೆಲ್ಲದರಲ್ಲೂ ಏರುಪೇರು ಆಗಲಿದೆ. ಈ ಹಿನ್ನೆಲೆಯಲ್ಲಿ ಕೆಲವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಇದಕ್ಕಿಂತ ಮುಖ್ಯವಾಗಿ ತುಮಕೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ಹೊರವಲಯದಿಂದ ಸಾವಿರಾರು ಚಾಲನಾ ಸಿಬ್ಬಂದಿ ಬಂದು ಡ್ಯೂಟಿ ಮುಗಿಸಿಕೊಂಡು ಹೋಗುತ್ತಾರೆ. ಅವರೆಲ್ಲರಿಗೂ ರಾತ್ರಿಪಾಳಿ ಅನುಕೂಲಕರವಾಗಿದೆ. ಒಂದು ವೇಳೆ ಸಾಮಾನ್ಯ ಪಾಳಿ ಮುಗಿಸಿ, ರಾತ್ರಿ ಅವರು ಊರು ತಲುಪಲು ಸಮಸ್ಯೆ ಆಗುತ್ತದೆ. ಹೀಗಾಗಿ ಆಕ್ಷೇಪ ವ್ಯಕ್ತಪಡಿಸಬಹುದು ಎಂದರು.
ರಜೆಗೆ ಓಎಲ್ಎಂಎಸ್ :
ಬಿಎಂಟಿಸಿ ಸಾರಿಗೆ ಸಿಬ್ಬಂದಿ ರಜೆ ಮಂಜೂರಾತಿಗೆ ಸಂಬಂಧಿ ಸಿದಂತೆ ಆನ್‌ಲೈನ್ ಲೀವ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಓಎಲ್‌ಎಂಎಸ್) ಜಾರಿಗೊಳಿಸಲಾ ಗುತ್ತಿದೆ. ಹಾಗಾಗಿ, ಇಲ್ಲಿಯೂ ಪಾರದರ್ಶಕತೆ ಬರಲಿದೆ ಎನ್ನಲಾಗಿದೆ.
ಡ್ಯೂಟಿ ರೋಟಾ ಸಿಸ್ಟಂ ಸ್ವತಃ ಸಿಬ್ಬಂದಿಯ ಬೇಡಿಕೆ ಆಗಿದೆ. ಹಾಗಾಗಿ,ಅನನುಕೂಲತೆ ಪ್ರಶ್ನೆ ಬರುವುದೇ ಇಲ್ಲ. ಆರಂಭದಲ್ಲಿ ತುಸು ಸಮಸ್ಯೆ ಆಗಬಹುದು. ಆದರೆ, ಸಿಬ್ಬಂದಿ ಹಿತದೃಷ್ಟಿಯಿಂದ ಮತ್ತು ಪಾರದರ್ಶಕತೆ ತರಲು ಇದು ಅತ್ಯವಶ್ಯಕ. – ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
ಅನುಷ್ಠಾನಕ್ಕೆ ಇದು ಸಕಾಲ ಅಲ್ಲ. ಕೋವಿಡ್ ದಿಂದಾಗಿ ಬಸ್‌ಗಳು ಸಂಪೂರ್ಣ ಕಾರ್ಯಾಚರಣೆ ಮಾಡುತ್ತಿಲ್ಲ. ವೋಲ್ವೊ ಬಸ್‌ಗಳ ಚಾಲನಾ ಸಿಬ್ಬಂದಿ ಬೇರೆ ಡಿಪೋಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇಂಥ ವೇಳೆ ಬೇರೆ ವ್ಯವಸ್ಥೆ ಜಾರಿಗೊಳಿಸಿದರೆ, ಆ ಸಿಬ್ಬಂದಿಗೂ ಜೇಷ್ಠತೆ ನೀಡಬೇಕಾಗುತ್ತದೆ.ಇದರಿಂದ ಉಳಿದವರಿಗೆ ಅನ್ಯಾಯವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ತಡೆ ನೀಡಬೇಕು. – ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ
– ವಿಜಯಕುಮಾರ್ ಚಂದರಗಿ