ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯು ಸುಮಾರು 1,500 ಡೀಸೆಲ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ರಸ್ತೆಗಿಳಿಸಲು ನಿರ್ಧರಿಸಿದ್ದು,ಈ ಮೂಲಕ ಖಾಸಗೀಕರಣಕ್ಕೆ ಮುನ್ನುಡಿ ಬರೆದಿದೆ.ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ ಮಾದರಿಯಲ್ಲಿ ಬೆಂಗಳೂರುನಗರದಲ್ಲಿ ಡೀಸೆಲ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿಕಾರ್ಯಾಚರಣೆಗೊಳಿಸಲು ಆಸಕ್ತ ಮತ್ತು ಅರ್ಹ ಬಿಡ್‌ದಾರರಿಂದ ಅಥವಾ ಒಕ್ಕೂಟದಿಂದ ಟೆಂಡರ್ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಏ.12 ಕೊನೆ ದಿನವಾಗಿದ್ದು, 23ರಂದುಬೆಳಗ್ಗೆ 11.30ಕ್ಕೆ ಆರ್ಥಿಕ ಬಿಡ್ ತೆರೆಯಲಾಗುವುದು ಎಂದುಟೆಂಡರ್ ಅಧಿಸೂಚನೆಯಲ್ಲಿ ಬಿಎಂಟಿಸಿ ಸ್ಪಷ್ಟಪಡಿಸಿದೆ.ಈ ಗುತ್ತಿಗೆ ಮಾದರಿಯಂತೆ ಬಿಎಂಟಿಸಿಯುಖಾಸಗಿಯವರಿಂದ ಬಸ್‌ಗಳನ್ನು ಪಡೆಯುತ್ತದೆ. ಆಬಸ್‌ಗೆ ಪ್ರತಿ ಕಿ.ಮೀ. ಇಂತಿಷ್ಟು ಹಣ ನಿಗದಿಪಡಿಸಲಾಗುತ್ತದೆ.ಆದರೆ, ಖಾಸಗಿ ಸಂಸ್ಥೆಗಳು ಸಲ್ಲಿಸುವ ಬಿಡ್ ಆಧರಿಸಿ ಈದರ ನಿರ್ಧಾರ ಆಗಲಿದೆ.
ಬಸ್ ಪೂರೈಸುವ ಸಂಸ್ಥೆಯೇಅವುಗಳ ನಿರ್ವಹಣೆ ಮಾಡಲಿದ್ದು, ಬಸ್ ಸೇವೆಯಲ್ಲಿಸಂಗ್ರಹವಾಗುವ ಪ್ರಯಾಣ ಶುಲ್ಕವು ಬಿಎಂಟಿಸಿಪಡೆಯುತ್ತದೆ. ಈ ಟೆಂಡರ್ ಆಹ್ವಾನದ ಬೆನ್ನಲ್ಲೇ ನೌಕರರಲ್ಲಿಆತಂಕ ಸೃಷ್ಟಿಯಾಗಿದೆ.ಒಂದೆಡೆ ತಾತ್ಕಾಲಿಕ ಪರ್ಮಿಟ್ ನೀಡಲು ಖಾಸಗಿಮ್ಯಾಕ್ಸಿಕ್ಯಾಬ್ ಮತ್ತು ಬಸ್‌ಗಳಿಂದ ಅರ್ಜಿ ಆಹ್ವಾನಿಸಿದೆ.ಮತ್ತೂಂದೆಡೆ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿರಸ್ತೆಗಿಳಿಸಲು ಟೆಂಡರ್ ಕರೆದಿದೆ. ನಗರದ “ಸಂಚಾರನಾಡಿ’ ಆಗಿರುವ ಒಂದು ಸಂಸ್ಥೆಯಲ್ಲಿ ನಿತ್ಯ 35 ಲಕ್ಷ ಜನಸಂಚರಿಸುತ್ತಾರೆ.
ಅದನ್ನು ಹೀಗೆ ಖಾಸಗಿಗೆ ವಹಿಸುವುದುಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ನಗರಘಟಕದ ಉಪಾಧ್ಯಕ್ಷ ಬಿ.ಟಿ. ನಾಗಣ್ಣ ಸುದ್ದಿಗೋಷ್ಠಿಯಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂಪಡೆಯದಿದ್ರೆಹೋರಾಟದ ಎಚ್ಚರಿಕೆಗುತ್ತಿಗೆ ಆಧಾರದಲ್ಲಿ ಬಸ್‌ಗಳ ಕಾರ್ಯಾಚರಣೆಹಿಂದೆ ಖಾಸಗೀಕರಣದ ಹುನ್ನಾರ ಅಡಗಿದ್ದು,ಸರ್ಕಾರವು ತಕ್ಷಣ ಈ ನಿರ್ಧಾರ ಹಿಂಪಡೆಯಬೇಕುಎಂದು ಸಾರಿಗೆ ನೌಕರರ ಫೆಡರೇಷನ್(ಸಿಐಟಿಯು) ಒತ್ತಾಯಿಸಿದೆ.
ಈ ನಿರ್ಧಾರದಿಂದಸರ್ಕಾರ ಹಿಂದೆ ಸರಿಯದಿದ್ದಲ್ಲಿ ತೀವ್ರ ಸ್ವರೂಪದಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದಸಿಐಟಿಯು, ಬೆಂಗಳೂರಿನ ದುಡಿಯುವ ಜನ,ವಿದ್ಯಾರ್ಥಿಗಳು ಈ ಹೋರಾಟಕ್ಕೆಕೈಜೋಡಿಸಬೇಕು ಎಂದು ಮನವಿ ಮಾಡಿದೆ.ಲಕ್ಷಾಂತರ ವಿದ್ಯಾರ್ಥಿಗಳಿಗೆ ರಿಯಾಯಿತಿಪಾಸುಗಳನ್ನು ಬಿಎಂಟಿಸಿ ನೀಡಿದೆ. ವಿವಿಧವರ್ಗಗಳಿಗೆ ಹಲವು ರೀತಿಯ ರಿಯಾಯಿತಿಪಾಸುಗಳನ್ನೂ ಒದಗಿಸಲಾಗಿದೆ. ಇದರ 3,400ಕೋಟಿ ರೂ. ಬಾಕಿಯನ್ನು ಸರ್ಕಾರ ನೀಡುತ್ತಿಲ್ಲ.ಅಷ್ಟೇ ಅಲ್ಲ, ನಗರದಲ್ಲಿ 1,250 ಎಕರೆ ಜಾಗವನ್ನುಬಿಎಂಟಿಸಿ ಹೊಂದಿದೆ.
ಹತ್ತಾರು ಟಿಟಿಎಂಸಿಕಟ್ಟಡಗಳು, ಬಸ್ ನಿಲ್ದಾಣಗಳು, 50 ಡಿಪೋಗಳು,6,500 ಬಸ್‌ಗಳು, 35 ಸಾವಿರ ಕಾರ್ಮಿಕರನ್ನುಸಂಸ್ಥೆ ಹೊಂದಿದೆ. ಆದರೆ, ಸಂಸ್ಥೆಯನ್ನುಖಾಸಗೀಕರಣ ಮಾಡಲು ಹೊರಟಿರುವುದುಜನರಿಗೆ ಸರ್ಕಾರ ಮಾಡುತ್ತಿರುವ ದ್ರೋಹ ಎಂದುಪ್ರಕಟಣೆಯಲ್ಲಿ ಆರೋಪಿಸಿದೆಹಿಂದೆ ಪ್ರಯೋಗ ಆಗಿತ್ತು?ಒಂದೂವರೆ ದಶಕದ ಹಿಂದೆ ಈ ಪ್ರಯೋಗನಡೆದಿತ್ತು. ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನುಗುತ್ತಿಗೆ ಪಡೆದು, ಸೇವೆ ನೀಡಲಾಗಿತ್ತು.
ಆದರೆ, ಈಕ್ರಮದಿಂದ ಬಿಎಂಟಿಸಿ ಮತ್ತು ಖಾಸಗಿ ಸಂಸ್ಥೆಗಳಿಗೆಯಾವುದೇ ಲಾಭ ವಾಗದ ಕಾರಣರದ್ದುಗೊಳಿಸಲಾಗಿತ್ತು. ಈಗ ಮತ್ತದೆ ಮಾದರಿಯನ್ನು ಕೆಲವು ಮಾರ್ಪಾಡುಗಳೊಂದಿಗೆಪರಿಚಯಿಸಲಾ ಗುತ್ತಿದೆ. ಈ ಮಧ್ಯೆ ಕೇಂದ್ರಸರ್ಕಾರದ ಫೇಮ್-2 ಯೋಜನೆ ಅನುದಾನದಡಿಗುತ್ತಿಗೆ ಆಧಾರದಲ್ಲಿ 300 ವಿದ್ಯುತ್ ಚಾಲಿತ ಬಸ್‌ಗಳನ್ನು ಪರಿಚಯಿಸಲು ಉದ್ದೇಶಿ ಸಿದ್ದು, ಈಸಂಬಂಧದ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.