ಕಾಸರಗೋಡು: ನಿತ್ಯೋಪ ಯೋಗಿ ಸಾಮಗ್ರಿಗಳ ಬೆಲೆಯೇರಿಕೆ ಖಂಡಿಸಿ ಹಾಗೂ ಕೇರಳ ಎಡರಂಗ ಸರಕಾರದ ದುರಾಡಳಿತದ ವಿರುದ್ಧ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ನೇತೃತ್ವ ದಲ್ಲಿ ಮಾ.15ರಂದು ಬೆಳಗ್ಗೆ ಎಲ್ಲ ತಾಲೂಕು ಕಚೇರಿಗಳಿಗೆ ಪ್ರತಿಭಟನ ಜಾಥಾ ನಡೆಯಿತು. ಈ ಪ್ರಯುಕ್ತ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲೂಕು ಕಚೇರಿಗಳಿಗೆ ಪ್ರತಿಭಟನ ಮೆರವಣಿಗೆಯನ್ನು ಏರ್ಪಡಿಸಲಾಯಿತು.
ಕಾಸರಗೋಡು ತಾಲೂಕು ಕಚೇರಿಗೆ ನಡೆದ ಬಿ.ಎಂ.ಎಸ್. ಜಾಥಾ ಮತ್ತು ಧರಣಿಯನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್ ಉದ್ಘಾಟಿಸಿ ಮಾತನಾಡಿದರು.
ಕೇರಳ ಸರಕಾರದ ದುರಾಡಳಿತದಿಂದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿತ್ಯೋಪ ಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿ ದ್ದರೂ, ಬೆಲೆ ನಿಯಂತ್ರಣಕ್ಕೆ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಶ್ರೀನಿವಾಸನ್ ಆರೋಪಿಸಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಎಂ. ಬಾಬು, ಪಿ. ಗೋಪಾಲನ್ ನಾಯರ್, ಪಿ. ಪ್ರಿಯಾ, ಎ. ಓಮನಾ ಮೊದಲಾದವರು ಮಾತನಾಡಿದರು. ರತೀಶ್ ಕೆ. ಸ್ವಾಗತಿಸಿದರು. ಲೀಲಾ ಕೃಷ್ಣನ್ ಮುಳ್ಳೇರಿಯ ವಂದಿಸಿದರು.
ಆಹಾರ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಏಜೆನ್ಸಿಗಳನ್ನು ಹೊರತುಪಡಿಸಿ ಅಂತಾರಾಜ್ಯ ಮಾರುಕಟ್ಟೆಗಳೊಂದಿಗೆ ಸರಕಾರ ನೇರವಾಗಿ ವ್ಯವಹರಿಸಬೇಕು, ರೇಶನ್ ವಿತರಣೆ ಸುಗಮಗೊಳಿಸಬೇಕು. ಜೀವ ರಕ್ಷಾ ಔಷಧಿಗಳ ಲಭ್ಯತೆಯನ್ನು ಖಚಿತಗೊಳಿಸಬೇಕು, ಸಾವಿ ರಾರು ಮಂದಿಯ ಕ್ಷೇಮನಿಧಿ ಪಿಂಚಣಿ ಗಳನ್ನು ಹೊರತುಪಡಿಸುವ ಕ್ರಮ, ಕ್ಷೇಮ ನಿಧಿ ಪಿಂಚಣಿ, ಪಿ.ಎಫ್. ಪಿಂಚಣಿಯನ್ನು ಪಡೆಯುವ ಸಾಮೂಹಿಕ ಪಿಂಚಣಿಯಿಂದ ಹೊರತುಪಡಿಸುವ ಸರಕಾರದ ಕ್ರಮವನ್ನು ಕೈಬಿಡಬೇಕು, ನಿಶ್ಚಲಗೊಂಡಿರುವ ಕ್ಷೇಮ ಪಿಂಚಣಿ ವಿತರಣೆಯನ್ನು ಸುಗಮಗೊಳಿಸ ಬೇಕು, ಕ್ಷೇಮ ನಿಧಿ ಕಚೇರಿಗಳಲ್ಲಿ ಉಳಿದು ಕೊಂಡಿರುವ ಅರ್ಜಿಗಳಿಗೆ ತುರ್ತು ತೀರ್ಮಾನ ತೆಗೆದುಕೊಳ್ಳಬೇಕು, ಎಲ್ಲ ಕ್ಷೇಮ ನಿಧಿ ಪಿಂಚಣಿಯನ್ನು 3,000 ರೂ.ಗೇರಿಸಬೇಕು, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಉಚಿತ ರೇಶನ್ ನೀಡಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟು ಜಾಥಾ ಮತ್ತು ಧರಣಿಯನ್ನು ಬಿಎಂಎಸ್ ಆಯೋಜಿಸಿತ್ತು.