Advertisement
ಹಾಸಿಗೆಗಳನ್ನು ಹಂಚುವ ಮೊದಲು ರೋಗಲಕ್ಷಣವಿರುವ ಕೋವಿಡ್ ರೋಗಿ ಗಳ ವೈದ್ಯಕೀಯ ತಪಾಸಣೆಯ ಮಾನ ದಂಡಗಳು ಹಾಸಿಗೆಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಲು ಕಾರಣವಾಗಿದ್ದು, ಐಸಿಯು, ಆಮ್ಲಜನಕ ಮತ್ತು ವೆಂಟಿಲೇಟರ್ ಹಾಸಿಗೆಗಳನ್ನು ನಿರ್ಣಾಯಕ ರೋಗಿಗಳಿಗೆ ಮಾತ್ರ ಉಳಿಸಲಾಗುತ್ತಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Related Articles
Advertisement
ಎಲ್ಲ 24 ವಾರ್ಡ್‌ಗಳಿಗೆ ಸ್ಟ್ಯಾಂಡ್‌ಬೈನಲ್ಲಿ ಪ್ರತೀ ವಾರ್ಡ್‌ಗೆ 10 ಆ್ಯಂಬುಲೆನ್ಸ್‌ಗಳಿರುವ 10 ತಂಡಗಳನ್ನು ಹೊಂದಲು ನಿರ್ದೇಶಿಸಲಾಗಿದೆ. ಇವರಲ್ಲಿ ವೈದ್ಯರು ಸಹಿತ ಸಿಬಂದಿಯು ರೋಗಿಗಳಿರುವ ಮನೆಗಳಿಗೆ ಭೇಟಿ ನೀಡುತ್ತಾರೆ. ಈ ರೋಗಿಗಳಿಗೆ ಅವರ ಅಗತ್ಯತೆ ಮತ್ತು ವೈದ್ಯಕೀಯ ಸ್ಥಿತಿಗೆ ಅನುಗುಣವಾಗಿ ಅವರ ವೈದ್ಯಕೀಯ ಸ್ಥಿತಿಯ ವಿವರಣೆಗಳೊಂದಿಗೆ ಹಾಸಿಗೆಗಳನ್ನು ನೀಡಲಾಗುತ್ತದೆ.
ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ :
ನಾವು ಹಾಸಿಗೆಗಳ ಸಂಪೂರ್ಣ ವ್ಯವಸ್ಥೆ ಯನ್ನು ಜಾರಿಗೆ ತರಲು ಬಯಸಿದ್ದೇವೆ. ಹಾಸಿಗೆಗಳ ಪ್ರಕಾರಗಳನ್ನು ಸೂಕ್ಷ್ಮವಾಗಿ ಗಮನಿಸು ತ್ತಿದ್ದೇವೆ. ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ರೋಗಲಕ್ಷಣಗಳನ್ನು ಉಲ್ಲೇಖೀಸಿ ಹಾಸಿಗೆಗಳನ್ನು ಕೋರುವ ಮೊದಲು ಪಾಸಿಟಿವ್ ಪರೀಕ್ಷೆಗೆ ಒಳಗಾದ ರೋಗಿ ಗಳಿಗೆ ಪ್ರತ್ಯೇಕ ಹಾಸಿಗೆಗಳನ್ನು ವ್ಯವಸ್ಥೆ ಮಾಡ ಲಾಗಿದೆ. ರೋಗಲಕ್ಷಣ ಇರುವ ರೋಗಿಗಳ ವೈದ್ಯಕೀಯ ತಪಾಸಣೆ ನಡೆಸುವುದು ಪರಿ ಹಾರ ಎಂದು ನಾವು ಭಾವಿಸಿದ್ದೇವೆ ಎಂದು ಬಿಎಂಸಿ ಆರೋಗ್ಯ ವಿಭಾಗದ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದ್ದಾರೆ.
ಹೊಸ ಮಾರ್ಗಸೂಚಿ :
ಪರಿಣಾಮಕಾರಿ ಹಾಸಿಗೆ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರೋಗಿಗಳನ್ನು ಅವರ ಮನೆಯಲ್ಲಿಯೇ ವೈದ್ಯಕೀಯ ಸಿಬಂದಿ ಪರೀಕ್ಷಿಸಿದ ಬಳಿಕವೇ ರೋಗಲಕ್ಷಣವಿರುವ ಕೋವಿಡ್ ರೋಗಿಗಳಿಗೆ ಹಾಸಿಗೆಯನ್ನು ಒದಗಿಸಲು ಮುಂಬಯಿ ಮಹಾನಗರ ಪಾಲಿಕೆ ಕಳೆದ ಶುಕ್ರವಾರ ನಿರ್ಧರಿಸಿದೆ. ಇದಕ್ಕಾಗಿ ಎ. 25ರಿಂದ ಜಾರಿಗೆ ಬರುವಂತೆ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಲು ಬಿಎಂಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.
ಪ್ರತೀ ವಾರ್ಡ್‌ಗಳಿಗೆ ಒಟ್ಟು ಹತ್ತು ತಂಡಗಳು ಅಂದರೆ 240 ವೈದ್ಯಕೀಯ ಸಿಬಂದಿಯನ್ನು ನಿಯೋಜಿಸಲಾಗಿದೆ. ಹಾಸಿಗೆಗಳನ್ನು ಹಂಚುವ ಮೊದಲು ರೋಗಲಕ್ಷಣವಿರುವ ಪ್ರತಿ ರೋಗಿಯ ವೈದ್ಯಕೀಯ ತಪಾಸಣೆಗಾಗಿ ಮನೆಗೆ ಭೇಟಿ ನೀಡಲಾಗುತ್ತಿದೆ. ಅಂದರೆ ದಿನಕ್ಕೆ ಸುಮಾರು 1,000 ಅಥವಾ ಹೆಚ್ಚಿನ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಆ ಸಂದರ್ಭ ರೋಗಿ ತುರ್ತು ಸ್ಥಿತಿಯಲ್ಲಿದ್ದರೆ ತಂಡವು ಅವರನ್ನು ಪರೀಕ್ಷಿಸುವಾಗ ನಿರ್ಣಾಯಕ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ತುರ್ತು ಅಗತ್ಯವಿರುವವರಿಗೆ ಬಿಎಂಸಿ ತುರ್ತು ಸಂದರ್ಭದಲ್ಲಿ ವಿನಾಯಿತಿಗಳನ್ನು ನೀಡಬೇಕಾಗುತ್ತದೆ.–ಡಾ| ಯು. ಎ. ಮೆಹ್ತಾ, ನಗರದ ವೈದ್ಯ
ಹಾಸಿಗೆ ಹಂಚಿಕೆಗಾಗಿ ಹೊಸ ಮಾರ್ಗಸೂಚಿ ಜಾರಿಗೆ ತಂದ ಕೆಲವೇ ದಿನಗಳಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಹಾಸಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಐಸಿಯು ಹಾಸಿಗೆಗಳ ಬೇಡಿಕೆಯು ಕ್ರಮೇಣ ಕ್ಷೀಣಿಸುತ್ತಿದೆ. ರೋಗಿಗಳು ಮತ್ತು ಅವರ ಸಂಬಂಧಿಕರು ಐಸಿಯು ಹಾಸಿಗೆಗಳಿಗೆ ಆದ್ಯತೆ ನೀಡಿದರೂ ಅವರನ್ನು ಕೂಲಂಕುಷವಾಗಿ ಪರೀಕ್ಷಿಸಿದ ಬಳಿಕ ಹಾಸಿಗೆಗಳನ್ನು ನಿರ್ಧರಿಸಲಾಗುತ್ತಿದೆ. ಎಲ್ಲಿ ಸಮಸ್ಯೆಗಳಿವೆ ಎಂಬುದನ್ನು ಗಮನಿಸಿ ಅದನ್ನು ಸರಿಪಡಿಸಲಾಗುತ್ತಿದೆ. ರೋಗಿಗಳಿಗೆ ಅವರ ಹಾಸಿಗೆ ಲಭ್ಯವಾಗುವಂತೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.–ಸುರೇಶ್ ಕಾಕಾನಿ, ಹೆಚ್ಚುವರಿ ಆಯುಕ್ತರು, ಮುಂಬಯಿ ಮಹಾನಗರ ಪಾಲಿಕೆ