Advertisement

ಧಾರಾವಿಯಲ್ಲಿ ಕ್ವಾರಂಟೈನ್‌ ಸೌಲಭ್ಯ ಹೆಚ್ಚಿಸಲು ಬಿಎಂಸಿ ಚಿಂತನೆ

07:09 AM May 20, 2020 | Suhan S |

ಮುಂಬಯಿ, ಮೇ 19: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಹರಡುವಿಕೆಯ ಬಗ್ಗೆ ಕೇಂದ್ರದ ಟೀಕೆಗೆ ಗುರಿಯಾಗಿರುವ ಬಿಎಂಸಿ ತನ್ನ ಕಾಂಟ್ರಾಕ್ಟ್ ಟ್ರೇಸಿಂಗ್‌ ಪ್ರೋಗ್ರಾಂ ಮತ್ತು ಧಾರಾವಿಯಲ್ಲಿ ಕ್ವಾರಂಟೈನ್‌ ವ್ಯವಸ್ಥೆಗಳನ್ನು ಹೆಚ್ಚಿಸಿ ಏಷ್ಯಾದ ಅತಿದೊಡ್ಡ ಕೊಳೆಗೇರಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.

Advertisement

ಬಿಎಂಸಿಯು ಇಲ್ಲಿಯವರೆಗೆ ಹೆಚ್ಚಿನ ಅಪಾಯ ಸಂಪರ್ಕದ 6,533 ಮಂದಿಯನ್ನು ವಿವಿಧ ಸಾಂಸ್ಥಿಕ ಸೌಲಭ್ಯಗಳಲ್ಲಿ ಪ್ರತ್ಯೇಕಿಸಿದ್ದು ಕೋವಿಡ್ ಸಕಾರಾತ್ಮಕ ರೋಗಿಗಳ ಅನುಪಾತವನ್ನು ಸಾಂಸ್ಥಿಕ ಸಂಪರ್ಕ ತಡೆಯ 1:5.45 ಅನುಪಾತಕ್ಕೆ ತಂದು ನಿಲ್ಲಿಸಿದೆ. ಈ ತಿಂಗಳ ಆರಂಭದಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌ ಅವರು ಧಾರಾವಿಗೆ ಭೇಟಿ ನೀಡಿ, ಕಳಪೆ ಪ್ರತ್ಯೇಕತೆಯ ಅನುಪಾತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಕೋವಿಡ್ ಪಾಸಿಟಿವ್‌ ರೋಗಿಗೆ ಕನಿಷ್ಠ 10 ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಬೇರ್ಪಡಿಸಲು ಕೇಂದ್ರ ತಂಡವು ಬಿಎಂಸಿಗೆ ಸೂಚಿಸಿತ್ತು. ಮೇ 7ರಂದು ಅಗರ್ವಾಲ್‌ ಧಾರಾವಿಗೆ ಭೇಟಿ ನೀಡಿದಾಗ ಕೊಳೆಗೇರಿಯಲ್ಲಿ 1: 3.38 ರ ಪ್ರತ್ಯೇಕತೆಯ ಅನುಪಾತವಿತ್ತು. ಬಳಿಕ ಹೆಚ್ಚಿನ ಜನರನ್ನು ಸಾಂಸ್ಥಿಕ ಮತ್ತು ಮನೆಗಳಲ್ಲಿ ನಿರ್ಬಂಧಿಸಲಾಗಿದೆ.

ಜಿ ನಾರ್ತ್‌ ವಾರ್ಡ್‌ನ ಸಹಾಯಕ ಮುನ್ಸಿಪಲ್‌ ಕಮಿಷನರ್‌ ಕಿರಣ್‌ ಮಾತನಾಡಿ, ನಾವು ಪಾಸಿಟಿವ್‌ ಪ್ರಕರಣಗಳ ಸಂಪರ್ಕತಡೆಯನ್ನು ಹೆಚ್ಚಿಸಿದ್ದೇವೆ. ಶನಿವಾರದ ಹೊತ್ತಿಗೆ ನಾವು 1,198 ಪ್ರಕರಣಗಳನ್ನು ಹೊಂದಿದ್ದೇವೆ. 6,528 ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಮತ್ತು 29,006 ಕಡಿಮೆ ಅಪಾಯದ ಸಂಪರ್ಕಗಳನ್ನು ನಾವು ಗುರುತಿಸಿದ್ದೇವೆ. ನಾವು ಈಗಾಗಲೇ 6,533 ಜನರನ್ನು ಸಾಂಸ್ಥಿಕ ಸಂಪರ್ಕತಡೆಯಲ್ಲಿ ಮತ್ತು 31,766 ಜನರನ್ನು ಮನೆ ಸಂಪರ್ಕತಡೆಯಲ್ಲಿ ಇರಿಸಿದ್ದೇವೆ. ಇವರೆಲ್ಲರೂ ಮನೆಯಲ್ಲಿಯೆ ಶೌಚಾಲಯವನ್ನು ಹೊಂದಿದ್ದಾರೆ. ಈವರೆಗೆ 345 ಜನರನ್ನು ಬಿಡುಗಡೆ ಮಾಡಲಾಗಿದೆ. ಧಾರಾವಿಯಲ್ಲಿ ಸೋಮವಾರ 44 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.

ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಧಾರಾವಿಯಲ್ಲಿ ಈಗ ಒಟ್ಟು 1,242 ಪ್ರಕರಣಗಳಿವೆ. ಧಾರಾವಿಯಲ್ಲಿ ಈವರೆಗೆ ಕನಿಷ್ಠ 50 ಮಂದಿ ಸೋಂಕಿಗೆ ಸಾವನ್ನಪ್ಪಿದ್ದಾರೆ. ಹೊಸ ಬಿಎಂಸಿ ಮುಖ್ಯಸ್ಥರಿಂದ ಹೆಚ್ಚು ಹೆಚ್ಚು ಜನರನ್ನು ಪರೀಕ್ಷಿಸಲಾಗುತ್ತಿದೆ. ಅಗರ್ವಾಲ್‌ ಅವರ ಭೇಟಿಯ ಅನಂತರ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಬಿಎಂಸಿ ಮುಖ್ಯಸ್ಥ ಪ್ರವೀಣ್‌ ಪರ್ದೇಶಿ ಅವರನ್ನು ಬದಲಾಯಿಸಿ ಇಕ್ಬಾಲ್‌ ಚಹಲ್‌ ಅವರ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಮರುದಿನ ಚಹಲ್‌ ಧಾರಾವಿಗೆ ಭೇಟಿ ನೀಡಿ ಕೊರೊನಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಪರೀಕ್ಷಾ ವಿಧಾನದಲ್ಲಿ ಆಕ್ರಮಣಕಾರಿ ಪತ್ತೆಹಚ್ಚುವ ಮೂಲಕ ಸಾಂಸ್ಥಿಕ ಸಂಪರ್ಕತಡೆಯನ್ನು ವಾಸಿಸುವ ಜನರ ಸಂಖ್ಯೆಯನ್ನು ಹೆಚ್ಚಿಸಲು ಬಿಎಂಸಿ ಅಧಿಕಾರಿಗಳನ್ನು ಕೇಳಿಕೊಂಡಿದ್ದರು. ಹಿರಿಯ ನಾಗರಿಕ ಅಧಿಕಾರಿಯೊಬ್ಬರ ಪ್ರಕಾರ, ಪ್ರತಿ ಕೋವಿಡ್ ಪಾಸಿಟಿವ್‌ ಪ್ರಕರಣಕ್ಕೆ ಕನಿಷ್ಠ 10 ಜನರನ್ನು ಸಾಂಸ್ಥಿಕ ಸಂಪರ್ಕತಡೆಯಲ್ಲಿ ಇರಿಸಬೇಕೆಂದು ಚಹಲ್‌ ಬಿಎಂಸಿ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next