Advertisement
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಕಾರಣಕ್ಕಾಗಿ ಮುಂಬಯಿ ಮಹಾನಗರ ಪಾಲಿಕೆಯು 4,45,000 ಮಂದಿಯನ್ನು ಗುರುತಿಸಿದ್ದು, ನ. 25ರ ವರೆಗೆ 9.28 ಕೋ. ರೂ. ದಂಡ ಸಂಗ್ರಹಿಸಿದೆ ಎಂದು ಬಿಎಂಸಿಯ ಅಂಕಿಂಶ ತಿಳಿಸಿದೆ. ನ. 6ರ ವರೆಗೆ ಸಿಕ್ಕಿಬಿದ್ದ 2,26,000 ಅಪರಾಧಿಗಳಿಗೆ ಹೋಲಿಸಿದರೆ ಉಲ್ಲಂಘಿಸುವವರ ಸಂಖ್ಯೆ ದ್ವಿಗುಣಗೊಂಡಿದ್ದು, ಬಳಿಕದ ದಿನಗಳಲ್ಲಿ 4.79 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ.
Related Articles
Advertisement
ಮಾಸ್ಕ್ ಧರಿಸದಿದ್ದಕ್ಕಾಗಿ 200 ರೂ.ಗಳ ದಂಡ ಪಾವ ತಿಸಲು ನಿರಾಕರಿಸಿದರೆ, ಅಂಥವರಿಂದ ಒಂದು ಗಂಟೆ ಕಾಲ ರಸ್ತೆಗಳನ್ನು ಗುಡಿಸುವುದು ಅಥವಾ ಸ್ವಚ್ಛಗೊಳಿಸುವಂತಹ ಸಾಮಾಜಿಕ ಸೇವೆ ಗಳನ್ನು ಮಾಡಲು ಬಿಎಂಸಿ ಪ್ರಾರಂಭಿಸಿದೆ. ಈ ಶಿಕ್ಷೆಯನ್ನು ಬಿಎಂಸಿಯ ಘನತ್ಯಾಜ್ಯ ನಿರ್ವಹಣ ಉಪ-ಕಾನೂನುಗಳ ಪ್ರಕಾರ ಜಾರಿಗೊಳಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಪೊಲೀಸರು ಮತ್ತು ಬಿಎಂಸಿ ಸಿಬಂದಿ ಮಾಸ್ಕ್ ಧರಿಸದವರಿಗೆ ಬಸ್ಕಿ ಹೊಡೆಸುವ ಶಿಕ್ಷೆಯನ್ನು ನೀಡುತ್ತಿದ್ದಾರೆ.
ಕೋವಿಡ್ ತಡೆಗೆ ಮಾಸ್ಕ್ ಕಡ್ಡಾಯ : ಮಾಸ್ಕ್ ಧರಿಸಿದವರು ಸಾಮಾಜಿಕ ಅಂತರ ವನ್ನು ಕಾಪಾಡಿಕೊಂಡರೆ ಕೋವಿಡ್ -19 ಸೋಂಕಿಗೆ ಒಳಗಾಗುವ ಸಾಧ್ಯತೆ ಶೇ. 10ರಷ್ಟು ಕಡಿಮೆ ಯಿರುತ್ತದೆ. ಆದ್ದರಿಂದ ಮಾಸ್ಕ್ ಧರಿಸುವುದು ನಾವು ಮಾಡಬಹುದಾದ ಕನಿಷ್ಠ ಜಾಗೃತೆಯಾಗಿದೆ. ಇದು ನಮ್ಮ ಬಗ್ಗೆ ಮಾತ್ರ ವಲ್ಲ ಇಡೀ ಸಸಮುದಾಯಕ್ಕೆ ಎಂದು ನಾಗರಿಕರು ಅರ್ಥಮಾಡಿ ಕೊಳ್ಳಬೇಕು. ಈ ಕಾರಣ ದಿಂದಾಗಿ ಮಾಸ್ಕ್ ಧರಿಸುವುದು ಜವಾಬ್ದಾರಿಯಾಗಿದೆ ಎಂದು ಡಾ| ಸಿದ್ದಾರ್ಥ್ ಪಾಲಿವಾಲ್ ಅವರು ಹೇಳಿದ್ದಾರೆ.
ನಿರ್ಲಕ್ಷಿಸಿದರೆ ಲಾಕ್‌ಡೌನ್ ಅನಿವಾರ್ಯ : ಮಾಸ್ಕ್ ಧರಿಸುವ ಮಹತ್ವವನ್ನು ಒತ್ತಿ ಹೇಳಿದ ಮುಂಬಯಿ ಮೇಯರ್ ಕಿಶೋರಿ ಪೆಡ್ನೆಕರ್, ಕೋವಿಡ್-19ಕ್ಕೆ ಲಸಿಕೆ ಇಲ್ಲದಿದ್ದುದರಿಂದ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮಾತ್ರ ಲಸಿಕೆ ಯಾಗಿದೆ. ಆದ್ದರಿಂದ ಜನರು ಸುರಕ್ಷಾ ಮಾನದಂಡ ಗಳನ್ನು ಅನುಸರಿಸದಿದ್ದರೆ ಮತ್ತೆ ಲಾಕ್ ಡೌನ್ ಘೋಷಿ ಸುವುದು ಅನಿವಾರ್ಯವಾಗಲಿದೆ ಎಂದರು.