Advertisement
ದೆಹಲಿ ಪಬ್ಲಿಕ್ ಸ್ಕೂಲ್‌ನ (ಡಿಪಿಎಸ್) ದ್ವಾರಕಾ ಮತ್ತು ವಸಂತ್ ಕುಂಜ್ ಘಟಕಗಳು, ಪೂರ್ವ ಮಯೂರ್ ವಿಹಾರ್‌ನ ಮದರ್ ಮೇರಿ ಸ್ಕೂಲ್, ಸಂಸ್ಕೃತ್ ಶಾಲೆ, ಪುಷ್ಪ್ ವಿಹಾರ್‌ನ ಅಮಿಟಿ ಸ್ಕೂಲ್ ಮತ್ತು ನೈಋತ್ಯ ದೆಹಲಿಯ ಡಿಎವಿ ಶಾಲೆಗೆ ಬಾಂಬ್ ಬೆದರಿಕೆ ಬಂದಿತ್ತು. .ಡಿಪಿಎಸ್ ನೋಯ್ಡಾಕ್ಕೂ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Related Articles
Advertisement
“ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಲ್ಲಿ ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಿದ್ದೇವೆ” ಎಂದು ಡಿಪಿಎಸ್ ನೋಯ್ಡಾದ ಪ್ರಾಂಶುಪಾಲರು ಹೇಳಿದ್ದಾರೆ.
ಇಮೇಲ್ ಬಂದ ಐಪಿ ವಿಳಾಸವು ದೇಶದ ಹೊರಗಿನದು ಎಂದು ತಿಳಿದು ಬಂದಿದ್ದು, ವಿಪಿಎನ್ ಮೂಲಕ ಐಪಿ ವಿಳಾಸವನ್ನು ಮರೆಮಾಚಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ.