Advertisement

ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನ: ಮುಸ್ಲಿಂ ಯುವಕನ ಬಂಧನ

12:06 PM Dec 16, 2021 | Team Udayavani |

ಉಜ್ಜಯಿನಿ/ಬೆಂಗಳೂರು: ದೇಶದ 12 ಜ್ಯೋತಿರ್ ಲಿಂಗ ಗಳಲ್ಲಿ ಒಂದಾದ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯ ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ 24 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಬುಧವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಬೆಂಗಳೂರಿನ ನಿವಾಸಿ ಮೊಹಮ್ಮದ್ ಯೂನುಸ್ ಬಂಧಿತನಾಗಿದ್ದಾನೆ.

ಪ್ರತಿದಿನವೂ ಮುಂಜಾನೆ 4 ಗಂಟೆಗೆ ನಡೆಯುವ ಎರಡು ಗಂಟೆಗಳ ಕಾಲ ನಡೆಯುವ ಭಸ್ಮ ಆರತಿಯ ವೇಳೆ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ.

ಅಭಿಷೇಕ್ ದುಬೆ ಎಂಬಾತನ ಆಧಾರ್ ಕಾರ್ಡ್ ಬಳಸಿ ವ್ಯಕ್ತಿ ಭಸ್ಮ ಆರತಿಗಾಗಿ ಪಾಸ್ ಪಡೆದಿದ್ದ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಪಲ್ಲವಿ ಶುಕ್ಲಾ ಹೇಳಿದ್ದಾರೆ.

ಐಡಿಯಲ್ಲಿನ ಚಿತ್ರಕ್ಕೂ ಬಂಧಿತನ ಚಹರೆಗೂ ಹೊಂದಿಕೆಯಾಗಲಿಲ್ಲ. ನಂತರ, ಭದ್ರತಾ ಸಿಬ್ಬಂದಿ ವ್ಯಕ್ತಿಯ ಬಯೋಮೆಟ್ರಿಕ್‌ಗಳನ್ನು ಸಹ ಪರಿಶೀಲಿಸಿದರು, ಅದು ಕಾರ್ಡ್‌ನಲ್ಲಿರುವವರಿಗೆ ಹೊಂದಿಕೆಯಾಗಲಿಲ್ಲ, ”ಎಂದು ಅವರು ಹೇಳಿದ್ದಾರೆ.

Advertisement

ಮೊಹಮ್ಮದ್ ಯೂನುಸ್ ಸ್ನೇಹಿತೆ ಖುಷ್ಬು ಯಾದವ್ ಅವರೊಂದಿಗೆ ಬಂದಿದ್ದು, ಅವರು ಯೂನುಸ್‌ಗೆ ಇನ್ನೊಬ್ಬ ವ್ಯಕ್ತಿಯ ಗುರುತಿನ ಚೀಟಿಯನ್ನು ವ್ಯವಸ್ಥೆ ಮಾಡಿದ್ದರು ಎಂದು ಶುಕ್ಲಾ ಹೇಳಿದ್ದಾರೆ.

ದೇವಸ್ಥಾನದ ಆಡಳಿತ ಸಮಿತಿಯ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 419 ಮತ್ತು 420 ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಹಾಕಾಲ್ ಪೊಲೀಸ್ ಠಾಣೆ ಪ್ರಭಾರಿ ಮುನೇಂದ್ರ ಗೌತಮ್ ಹೇಳಿದ್ದಾರೆ.

ಗೌತಮ್ ಪ್ರಕಾರ, ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆ ಜೊತೆ ನೀಡಲು ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next