Advertisement

ಎಲ್ಲೆಡೆ ಬ್ಲೂ ವೇಲ್‌ ಜಾಲ

07:25 AM Sep 17, 2017 | Team Udayavani |

ರಾಯು³ರ: ಬ್ಲೂವೇಲ್‌ನಂಥ ಮಾರಣಾಂತಿಕ ಆನ್‌ಲೈನ್‌ ಗೇಮ್‌ಗಳಿಗೆ ನಗರಪ್ರದೇಶಗಳ ಮಕ್ಕಳಷ್ಟೇ ಬಲಿಬೀಳುತ್ತಿದ್ದಾರೆ ಎಂಬುದನ್ನು ಸುಳ್ಳಾಗಿಸುವಂಥ ಹಾಗೂ ದೇಶದ ಮೂಲೆ ಮೂಲೆಗೂ ಈ ಅಪಾಯಕಾರಿ ಆಟವು ತಲುಪುತ್ತಿರುವಂಥ ಆತಂಕಕಾರಿ ವಿದ್ಯಮಾನ ವೊಂದು ಬೆಳಕಿಗೆ ಬಂದಿದೆ. ಛತ್ತೀಸ್‌ಗಢದ ನಕ್ಸಲ್‌ಪೀಡಿತ ದಂತೇವಾಡ ಜಿಲ್ಲೆಯಲ್ಲಿ ಬುಡ ಕಟ್ಟು ಸಮುದಾಯಕ್ಕೆ ಸೇರಿದ 30 ಮಕ್ಕಳನ್ನು ಬ್ಲೂವೇಲ್‌ನ ಜಾಲದಿಂದ ರಕ್ಷಿಸಲಾಗಿದೆ.

Advertisement

ದಂತೇವಾಡದ ಸಹಾಯಕ ಎಸ್ಪಿ ಅಭಿಷೇಕ್‌ ಪಲ್ಲವ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಇಲ್ಲಿನ ಹೈಸ್ಕೂಲ್‌ನಲ್ಲಿ ಕಲಿಯುವ 30 ಮಕ್ಕಳನ್ನು ರಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಮಕ್ಕಳು ತಮ್ಮ ತಮ್ಮ ಕೈಗಳ ಮೇಲೆ ಬ್ಲೇಡು ಹಾಗೂ ಚಾಕುವಿನಿಂದ ತಿಮಿಂಗಿಲದ ಚಿತ್ರಗಳನ್ನು ಬಿಡಿಸಿರುವುದನ್ನು ನೋಡಿದ ಶಾಲಾ ಆಡಳಿತವು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ, ಮಕ್ಕಳನ್ನು ರಕ್ಷಿಸಿ, ಕೌನ್ಸೆಲಿಂಗ್‌ಗೆ ಕಳುಹಿಸಿ ದ್ದೇವೆ. ಈ ಗೇಮ್‌ ಆಡುವುದರಿಂದ ತಮ್ಮ ವೈಯಕ್ತಿಕ ಸಮಸ್ಯೆಗಳೆಲ್ಲ ದೂರವಾಗುವುದು ಎಂದು ಮಕ್ಕಳು ನಂಬಿದ್ದರು ಎಂದಿದ್ದಾರೆ ಪಲ್ಲವ್‌.

ಗೇಮ್‌ ಆಡುತ್ತಿದ್ದ ಮಕ್ಕಳನ್ನು ಪ್ರಶ್ನಿಸಿದಾಗ ಒಬ್ಟಾತ, “ಇದನ್ನು ಆಡುವುದರಿಂದ ನನ್ನ ಅಪ್ಪ ಮದ್ಯಪಾನ ತ್ಯಜಿಸುತ್ತಾರೆ’ ಎಂದರೆ, ಮತ್ತೂಬ್ಬ, “ಹೆತ್ತವರು ನನ್ನನ್ನು ಒತ್ತಾಯ ಪೂರ್ವ ಕವಾಗಿ ಮದುವೆ ಮಾಡಿಸಲು ಹೊರಟಿದ್ದಾರೆ. ಅದ ರಿಂದ ತಪ್ಪಿಸಿಕೊಳ್ಳಲು ಬ್ಲೂವೇಲ್‌ ಆಡುತ್ತಿ ದ್ದೇನೆ’ ಎಂದಿದ್ದಾನೆ. ಪತ್ರಿಕೆಗಳು ಹಾಗೂ ಇಂಟರ್ನೆಟ್‌ ಮೂಲಕ ಮಕ್ಕಳು ಈ ಆಟದ ಬಗ್ಗೆ ಮಾಹಿತಿ ಪಡೆದಿರಬಹುದು. ಇದನ್ನು ಆಡುವಂತೆ ಒಬ್ಟಾತ ಎಲ್ಲರಿಗೂ ಮಾರ್ಗ ದರ್ಶನ ನೀಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next