Advertisement

ಮೂರು ಕೊಠಡಿ, 30 ನಿಮಿಷ : ಲಸಿಕೆ ನೀಡುವುದಕ್ಕೆ ನೀಲನಕಾಶೆ ಸಿದ್ಧ

01:05 AM Dec 09, 2020 | mahesh |

ಹೊಸದಿಲ್ಲಿ: ಪ್ರತೀ 30 ನಿಮಿಷಕ್ಕೆ ಒಬ್ಬರಿಗೆ ಲಸಿಕೆ ನೀಡುವಿಕೆ ಪೂರ್ಣ- ಇದು ಕೇಂದ್ರ ಸರಕಾರಕ್ಕೆ ತಜ್ಞರ ಸಮಿತಿಯು ರೂಪಿಸಿಕೊಟ್ಟಿರುವ ನೀಲನಕ್ಷೆಯ ಮುಖ್ಯಾಂಶ. ಕೆಲವೇ ವಾರಗಳಲ್ಲಿ ಲಸಿಕೆ ಸಿಗಲಿದೆ ಎಂದು ಪ್ರಧಾನಿ ಮೋದಿ ಅವರು ಘೋಷಿಸಿದ ಬೆನ್ನಲ್ಲೇ ಲಸಿಕೆ ಕೇಂದ್ರಗಳ ಕಾರ್ಯವೈಖರಿಯ ರೂಪುರೇಷೆಯೂ ಸಿದ್ಧವಾಗಿದೆ. ಪ್ರತೀ ಹಂತದಲ್ಲಿ 100 ಮಂದಿಗೆ ತಲಾ ಒಂದು ಡೋಸ್‌ ಲಸಿಕೆ ನೀಡಲಾಗುತ್ತದೆ. ಪ್ರತೀ ಲಸಿಕೆ ಕೇಂದ್ರ 3 ಪ್ರತ್ಯೇಕ ಕೊಠಡಿಗಳನ್ನು ಹೊಂದಿರಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Advertisement

ಮೂರು ಕೊಠಡಿ ಏಕೆ?
ಮೊದಲ ಕೊಠಡಿಯು ಲಸಿಕೆ ಪಡೆಯುವವರು ಕಾಯುವುದಕ್ಕೆ. ಎರಡನೇ ಕೊಠಡಿಯಲ್ಲಿ ವ್ಯಕ್ತಿಗೆ ಲಸಿಕೆ ನೀಡಲಾಗುತ್ತದೆ. ಹೀಗೆ ಲಸಿಕೆ ಚುಚ್ಚಿಸಿ ಕೊಂಡವ ರನ್ನು 3ನೇ ಕೊಠಡಿಗೆ ಕಳು ಹಿಸ ಲಾಗುತ್ತದೆ. ಇದು ವೀಕ್ಷಣೆ ಕೊಠಡಿ.

ಕೋವಿಡ್‌ ಐಟಿ ಸಿಸ್ಟಂ
ಲಸಿಕೆ ನೀಡುವಿಕೆ ಯೋಜನೆಯನ್ನು “ಕೋವಿಡ್‌ ಐಟಿ ಸಿಸ್ಟಂ’ ಮೂಲಕ ನಿರ್ವಹಿಸ ಲಾಗುತ್ತದೆ. ಪ್ರತೀ ಲಸಿಕೆ ಅವಧಿಯಲ್ಲಿ 100 ಮಂದಿಗೆ ಮಾತ್ರವೇ ಲಸಿಕೆ ಭಾಗ್ಯ ಸಿಗಲಿದೆ. ವ್ಯಕ್ತಿಗೆ ಒಂದು ವೇಳೆ ಅಡ್ಡಪರಿಣಾಮ ಕಂಡುಬಂದರೂ ಕೋವಿಡ್‌ ಐಟಿ ಸಿಸ್ಟಂ ತಾಂತ್ರಿಕ ವ್ಯವಸ್ಥೆ ಅದನ್ನು ಪತ್ತೆಹಚ್ಚುತ್ತದೆ.

30 ನಿಮಿಷ ಕಾಯಬೇಕು!
ಲಸಿಕೆ ಪಡೆದಾತ ವೀಕ್ಷಣೆ ಕೊಠಡಿಯಲ್ಲಿ 30 ನಿಮಿಷ ಇರಬೇಕು. ಒಂದು ವೇಳೆ ವ್ಯಕ್ತಿಗೆ ಲಸಿಕೆ ಅಡ್ಡಪರಿಣಾಮ ಉಂಟುಮಾಡುತ್ತದಾದರೆ ಆರಂಭದ 30 ನಿಮಿಷಗಳಲ್ಲಿ ಅದು ತಿಳಿಯುತ್ತದೆ. ಆರಂಭದಲ್ಲಿ ಒಂದು ಕೋಟಿ ಆರೋಗ್ಯ ಯೋಧರಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಎಲ್ಲ ರಾಜ್ಯ ಸರಕಾರಗಳಿಂದ ಆರೋಗ್ಯ ಯೋಧರ ಪಟ್ಟಿ ತರಿಸಿಕೊಳ್ಳುವ ಪ್ರಕ್ರಿಯೆ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಕೋವಿಡ್ ಲಸಿಕೆ ವಿತರಣೆ ಆರಂಭವಾಗಿದೆ. ಉತ್ತರ ಅಯರ್ಲೆಂಡ್‌ನ‌ 90 ವರ್ಷದ ಅಜ್ಜಿ ಮಾರ್ಗರೆಟ್‌ ಕಿನಾನ್‌ ಫೈಜರ್‌ ಲಸಿಕೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next