Advertisement

ಹಸಿರು, ಬಿಳಿ ಬಳಿಕ ಈಗ ನೀಲಿ ಕ್ರಾಂತಿ: ವೆಂಕಯ್ಯ ನಾಯ್ಡು

06:55 AM Sep 01, 2018 | |

ಬೀದರ: ಭಾರತ ಹಸಿರು ಮತ್ತು ಬಿಳಿ ಕ್ರಾಂತಿಗಳೆರಡನ್ನೂ ಸಾಧಿಸಿದೆ. ಇದೀಗ ನೀಲಿ ಕ್ರಾಂತಿ ನಡೆಸಬೇಕಾಗಿದ್ದು,ಇದು ಸರ್ಕಾರದ ಚಿಂತನೆ ಕೂಡ ಆಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

Advertisement

ಶುಕ್ರವಾರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೃಷಿ ನೆಚ್ಚಿದ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ.ಆದರೆ, ಪಶುಪಾಲನೆ, ಮೀನುಗಾರಿಕೆ, ಕೋಳಿ,ಕುರಿ ಸಾಕಾಣಿಕೆ ಮಾಡುವವರು ಆರ್ಥಿಕ ಹೊರೆ ಹೆಚ್ಚಾಗಿ ಸಾವಿಗೆ ಶರಣಾದ ಘಟನೆಗಳು ಇಲ್ಲ.

ಹೈನೋದ್ಯಮ ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಯಶಸ್ವಿಯಾಗುವತ್ತ ದಾಪುಗಾಲಿಡುತ್ತಿದೆ. 2014 - 15ರ ಸರ್ವೇ ಪ್ರಕಾರ ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ ಎಂದರು.

ನಾನೂ ಕೃಷಿ ಕುಟುಂಬದ ಕುಡಿ: “ನಾನು ನೆರೆಯ ರಾಜ್ಯದಿಂದ ಬಂದಿದ್ದರೂ ಕೂಡ ನನಗೆ ಕರ್ನಾಟಕದೊಂದಿಗೆ ಭಾವನಾತ್ಮಕ ವಾಗಿ ಸಂಬಂಧವಿದೆ. ಅಲ್ಲದೆ, ಕೃಷಿಕುಟುಂಬದಿಂದ ಬಂದವನು ನಾನು. ಇವತ್ತು  ದೇಶದ ಉಪರಾಷ್ಟ್ರಪತಿಯಾಗಿದ್ದೇನೆ. ಚಹಾ ಮಾರುವ ಬಾಲಕ ಇಂದು ದೇಶದ ಪ್ರಧಾನಿಯಾಗಿದ್ದಾರೆ’ ಎಂದರು. ಇದಕ್ಕೂ ಮೊದಲು ಕನ್ನಡದಲ್ಲೇ ತಮ್ಮ ಭಾಷಣ ಪ್ರಾರಂಭಿಸಿದರು.

Advertisement

11 ಚಿನ್ನದ ಪದಕ ಪಡೆಯಲು ನನ್ನ ತಂದೆ ಅಶೋಕ, ತಾಯಿ ಕಸ್ತೂರಿ ಅವರ ಪಾತ್ರ ಮಹತ್ವದ್ದಾಗಿದೆ. ನಾನು ಮುಂದಿನ ದಿನಗಳಲ್ಲಿ ಐಎಎಸ್‌ ಅಧಿಕಾರಿ ಆಗುವ ಹಂಬಲ ಹೊಂದಿದ್ದು, ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕು ಎಂಬುದು ನನ್ನ ಜೀವನದ ಆಸೆಯಾಗಿದೆ.
– ಅಶ್ವಿ‌ನಿ, ಮೈಸೂರು ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next