Advertisement

ಅಪ್ಸರಕೊಂಡ ಕಡಲ ತೀರದಲ್ಲಿ ಹೆಚ್ಚುತ್ತಿದೆ ಜನದಟ್ಟಣೆ

07:19 PM Nov 11, 2020 | Suhan S |

ಹೊನ್ನಾವರ: ದಶಕಗಳಿಂದ ಆಕರ್ಷಣೆಯ ಕೇಂದ್ರವಾಗಿರುವ ಕಾಸರಕೋಡ ಇಕೋ ಬೀಚ್‌ ಬೇರೆ ಅದಕ್ಕೆ ಹೊಂದಿಕೊಂಡು ಇತ್ತೀಚೆ ಬ್ಲ್ಯೂ ಫ್ಲ್ಯಾಗ್‌ ಪಡೆದ ಸೌಲಭ್ಯಗಳು ಬೇರೆ. ಎರಡೂ ಒಂದೇ ಅಲ್ಲ,ಹಿಂದಿನವರು ಕಷ್ಟಪಟ್ಟು ಮಾಡಿದ್ದನ್ನು, ಇಂದಿನವರು ಮಾಡಿದ್ದನ್ನು ಇಲ್ಲಿ ಹೇಳಬೇಕಾಗಿದೆ.

Advertisement

ಹಿಂದೆ ಡಿಎಫ್‌ಒ ಆಗಿದ್ದ ಕೃಷ್ಣ ಉದುಪುಡಿ ಇವರ ಕಲ್ಪನೆ ಸಾಕಾರಗೊಂಡು ಸಮುದ್ರ ತೀರಕ್ಕೆ ಹೊಂದಿಕೊಂಡ ಗಾಳಿತೋಪಿನಲ್ಲಿ ವಿವಿಧ ರೀತಿಯ ಪ್ರಾಣಿಯ ಪ್ರತಿರೂಪ, ವಿಶ್ರಾಂತಿಗೆ ಬೆಂಚು, ಕೋಣೆಗಳು, ಸ್ನಾನದ ಮನೆ, ಮಕ್ಕಳಿಗೆ ಆಟಿಕೆ, ಜೋಕಾಲಿ ಒದಗಿಬಂತು. ಗ್ರಾಮ ಅರಣ್ಯ ಸಮಿತಿಗೆ ಇದನ್ನು ಆದಾಯ ಮೂಲವಾಗಿ ಕೊಟ್ಟರು. ನಂತರ ಬಂದ ಡಿಎಫ್‌ಒ ವಸಂತ ರೆಡ್ಡಿ ಇದನ್ನು ಅಭಿವೃದ್ಧಿಪಡಿಸಿದರು. ಸಂಜೆ ಮತ್ತು ರಜಾದಿನಗಳಲ್ಲಿ ಸಾವಿರಾರು ಜನ ಬಂದು ಇಲ್ಲಿ ಆನಂದಿಸಿದರು, ಕಡಲತೀರದಲ್ಲಿ ಓಡಾಡಿದರು.ಇದಕ್ಕೆ ಇಕೋ ಬೀಚ್‌ ಎಂದು ಹೆಸರಿಟ್ಟು ಇದರ ಮುಂದುವರಿದ ಭಾಗವಾಗಿ ಅಪ್ಸರಕೊಂಡದವರೆಗೆ, ಇಡಗುಂಜಿ ತಿರುವಿನಲ್ಲಿ, ರಾಮತೀರ್ಥ ಗುಡ್ಡದ ಮೇಲೆ ವಿವಿಧ ವನಗಳು ತಲೆ ಎತ್ತಿ ಜನಾಕರ್ಷಣೆಯ ಕೇಂದ್ರವಾದವು. ಈಗ ಸರಿಯಾಗಿ ನಿರ್ವಹಣೆಯಿಲ್ಲದೆ ಇದು ಸೊರಗಿದೆ.

ಇದಕ್ಕೆ ಹೊಂದಿಕೊಂಡು ಸಮುದ್ರ ತೀರದಲ್ಲಿ ಬಣ್ಣ ಬಣ್ಣದ ಇಂಟರ್‌ಲಾಕ್‌ ಜೋಡಿಸಿ ಫುಟ್ಪಾತ್ ನಿರ್ಮಿಸಿ ಬೀದಿದೀಪ ವ್ಯವಸ್ಥೆ ಮಾಡಲಾಗಿದೆ. ಫ್ರೈವುಡ್‌ ಮತ್ತು ಬಿದಿರು ಬಳಸಿ 6 ಶೆಡ್‌ ಗಳನ್ನು ನಿರ್ಮಿಸಿ ಕಾರ್ಯಾಲಯಕ್ಕೆ, ಪ್ರಥಮ ಚಿಕಿತ್ಸೆಗೆ, ಕುಡಿಯುವ ನೀರಿಗೆ, ಶೌಚಾಲಯಕ್ಕೆಒಂದೊಂದು ಕೋಣೆಯನ್ನಿಟ್ಟಿದ್ದು ಉಳಿದವುಗಳನ್ನುಬಯಲು ಸ್ನಾನಗೃಹವನ್ನಾಗಿ ಮಾಡಿ ಸಮುದ್ರ ಸ್ನಾನ ಮಾಡಿದವರಿಗೆ ಸಿಹಿನೀರಿನ ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ಬದಿಗೆ ಬಿದಿರು, ಬೆತ್ತ, ಹುಲ್ಲುಬಳಸಿ 4 ಪ್ಯಾರಾಗೋಲಾವನ್ನು ನಿಲ್ಲಿಸಿ ಮಕ್ಕಳ ಆಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವೀಕ್ಷಣಾಗೋಪುರ ನಿರ್ಮಾಣವಾಗಿದೆ. ಸ್ವತ್ಛತೆ ನಿರ್ವಹಣೆಗೆ 38 ಸಿಬ್ಬಂದಿ ನೇಮಿಸಲ್ಪಟ್ಟಿದ್ದು ಸ್ನಾನ ಶೌಚಾಲಯ ಬಳಕೆಗೆ ತಲಾ 10 ರೂ. ಪಡೆಯಲಾಗುತ್ತಿದೆ. ಇದಕ್ಕೆ ಬ್ಲ್ಯೂಫ್ಲ್ಯಾಗ್‌ ಬಂದಿದ್ದು ಇಕೋ ಬೀಚ್‌ಗೆ ಬಂತು ಎಂದು ಭಾರೀ ಪ್ರಚಾರದ ಹಿನ್ನೆಲೆಯಲ್ಲಿ ಜನ ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಿಆರ್‌ಝಡ್‌ ಕಾನೂನಿನಂತೆ ಎಲ್ಲವೂ ತಾತ್ಪೂರ್ತಿಕನಿರ್ಮಾಣಗಳು. ಇದಕ್ಕೆ 8 ಕೋಟಿ ರೂಪಾಯಿ ವೆಚ್ಚವಾಗಿದೆ.

ಅರಣ್ಯ ಇಲಾಖೆ ಕಾರ್‌ ಪಾರ್ಕಿಂಗ್‌ಗೆ 40ರೂ. ಪಡೆಯುತ್ತಿರುವುದು ಹೆಚ್ಚಾಯಿತು. ಇಕೋ ಬೀಚ್‌ ಒಳಗೆ ಹೋಗಲು 10 ರೂ, ಅಷ್ಟೇ ಪಡೆದರೆ ಸಾಕಿತ್ತು.ಈ ಎಲ್ಲ ವ್ಯವಸ್ಥೆ ಗುತ್ತಿಗೆ ಕೊಡಲಾಗಿದೆ. ಬ್ಲ್ಯೂ ಫ್ಲ್ಯಾಗ್‌ ಪ್ರಚಾರದ ಅಬ್ಬರ ಬಳಸಿಕೊಂಡು ಅಲ್ಲಿ ಜನ ತೃಪ್ತಿಪಡದಿದ್ದರೆ ಅರಣ್ಯ ಇಲಾಖೆ ಇಕೋ ಬೀಚ್‌ನಿಂದ ಖುಷಿ ಪಡುತ್ತಾರೆ. ಕಸಕಡ್ಡಿ ಸ್ವತ್ಛ ಮಾಡಿ ಸ್ನಾನಗೃಹ, ಶೌಚಾಲಯವನ್ನು ದುರಸ್ತಿಗೊಳಿಸಿ, ಇನ್ನೊಂದೆರಡುಕ್ಯಾಂಟೀನ್‌ಗೆ ಅವಕಾಶ ನೀಡಿ ಬಾಯಿರುಚಿ ತೃಪ್ತಿಪಡಿಸುವ ವ್ಯವಸ್ಥೆ ಆದರೆ, ಆಟಿಕೆಗಳಿಗೆ ಮತ್ತು ಡಾಲ್ಫಿನ್‌ ಮೊದಲಾದ ಸಿಮೆಂಟ್‌ ಮೊದಲಾದ ಕಲಾಕೃತಿಗಳಿಗೆ ಬಣ್ಣಹಚ್ಚಿದ್ದರೆ ಅರಣ್ಯ ಇಲಾಖೆಗೆ ಆದಾಯ ಹೆಚ್ಚಾಗುತ್ತಿತ್ತು. ಇಕೋಬೀಚ್‌ ಕಡಲ ಸಹಜ ಸೌಂದರ್ಯಕ್ಕೆ ಅಡ್ಡವಾಗಿರಲಿಲ್ಲ. ಬ್ಲ್ಯೂಫ್ಲ್ಯಾಗ್‌ ಸಹಜ ಸುಂದರಿಗೆ ಕೃತಕ ಆಭರಣದಿಂದ ಅಲಂಕರಿಸಿದಂತಿದೆ. ಈಗ ಜನಕ್ಕೆ ಬೇಕಾದದ್ದು ಅದೇ ಅಲ್ಲವೇ ?

 

Advertisement

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next