Advertisement

ವಿದೇಶಿ ಬಂಡವಾಳದ ಹೊರಹರಿವು ಎಫೆಕ್ಟ್; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 559 ಅಂಕ ಕುಸಿತ

11:24 AM Jun 07, 2022 | Team Udayavani |

ಮುಂಬಯಿ: ವಿದೇಶಿ ಬಂಡವಾಳದ ಹೊರಹರಿವು, ಮುಂದುವರಿದ ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ಮಂಗಳವಾರ(ಜೂನ್ 07)ವೂ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 550ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

Advertisement

ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಾಧು ಸಿಂಗ್ ಬಂಧನ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 559.46 ಅಂಕ ಇಳಿಕೆಯೊಂದಿಗೆ 55,115.86 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 161.05 ಅಂಕಗಳಷ್ಟು ಕುಸಿತದೊಂದಿಗೆ 16,408.50 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಸತತ ಮೂರನೇ ವಹಿವಾಟಿನಲ್ಲೂ ಸೆನ್ಸೆಕ್ಸ್ ಕುಸಿತಗೊಂಡ ಪರಿಣಾಮ ಟೈಟಾನ್, ಡಾ.ರೆಡ್ಡೀಸ್, ಎಚ್ ಯುಎಲ್, ಏಷಿಯನ್ ಪೇಂಟ್ಸ್, ನೆಸ್ಲೆ, ಸನ್ ಫಾರ್ಮಾ, ಮಾರುತಿ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಭಾರೀ ನಷ್ಟ ಕಂಡಿವೆ.

ಮತ್ತೊಂದೆಡೆ ಎನ್ ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮಾತ್ರ ಲಾಭಗಳಿಸಿದೆ. ಇನ್ನುಳಿದಂತೆ ಟೋಕಿಯೋ, ಶಾಂಘೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ಕಂಡಿದ್ದು, ಹಾಂಗ್ ಕಾಂಗ್, ಸಿಯೋಲ್ ಷೇರುಪೇಟೆ ಸೆನ್ಸೆಕ್ಸ್ ಇಳಿಕೆಯಲ್ಲಿ ವಹಿವಾಟು ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next