Advertisement

ಮತ್ತೆ ತಂಡದಿಂದ ದೂರಾದ ಧವನ್‌

08:22 AM Sep 15, 2017 | |

ಹೊಸದಿಲ್ಲಿ: ಎಡಗೈ ಆರಂಭಕಾರ ಶಿಖರ್‌ ಧವನ್‌ ಮತ್ತೆ ಭಾರತ ತಂಡದಿಂದ ಬೇರ್ಪಟ್ಟಿದ್ದಾರೆ. ಅವರು  ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೊದಲ 3 ಏಕದಿನ ಪಂದ್ಯಗಳಿಗಾಗಿ ಆಯ್ಕೆಯಾಗಿದ್ದರು. ಆದರೆ ಅನಂತರ ಕೌಟುಂಬಿಕ ಕಾರಣಗಳಿಂದ ಈ 3 ಪಂದ್ಯಗಳಿಂದ ಹೊರಗುಳಿಯಲು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು.

Advertisement

ಧವನ್‌ ಅವರ ಮನವಿಯನ್ನು  ಬಿಸಿಸಿಐ ಪುರಸ್ಕರಿಸಿದ್ದು, ಬದಲಿ ಆಟಗಾರ ನನ್ನು ಸೇರಿಸಿಕೊಳ್ಳದಿರಲು ನಿರ್ಧರಿಸಿದೆ. ಹೀಗಾಗಿ ಭಾರತ ತಂಡದ ಸದಸ್ಯರ ಸಂಖ್ಯೆ 15ಕ್ಕೆ ಸೀಮಿತಗೊಳ್ಳಲಿದೆ. ಶಿಖರ್‌ ಧವನ್‌ ಹೊರಗುಳಿಯಲು ಪತ್ನಿಯ ಅನಾ ರೋಗ್ಯವೇ ಕಾರಣ. ಕಳೆದ ಶ್ರೀಲಂಕಾ ಪ್ರವಾಸದ ವೇಳೆ ತಾಯಿಯ ಅನಾರೋಗ್ಯದಿಂದ ಧವನ್‌ ನಡುವಲ್ಲೇ ಭಾರತಕ್ಕೆ ವಾಪಸಾಗಿದ್ದರು. ಇದರಿಂದ ಅಂತಿಮ ಏಕದಿನ ಹಾಗೂ ಏಕೈಕ ಟಿ-20 ಪಂದ್ಯವನ್ನು ತಪ್ಪಿಸಿಕೊಂಡಿದ್ದರು. 

ಶ್ರೀಲಂಕಾದಲ್ಲಿ ಪ್ರಚಂಡ ಬ್ಯಾಟಿಂಗ್‌ ಪ್ರದ ರ್ಶಿಸಿದ್ದ ಧವನ್‌, ಆಸ್ಟ್ರೇಲಿಯ ವಿರುದ್ಧದ ತವರಿನ ಸರಣಿಯಲ್ಲೂ ಮಿಂಚುವ ನಿರೀಕ್ಷೆ ಇಡಲಾಗಿತ್ತು. ಈಗ ರೋಹಿತ್‌ ಶರ್ಮ ಜತೆ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. “ಆಸ್ಟ್ರೇಲಿಯ ವಿರುದ್ಧದ ಮೊದಲ 3 ಏಕದಿನ ಪಂದ್ಯಗಳಿಂದ ತನ್ನನ್ನು ಬಿಡುಗಡೆ ಮಾಡುವಂತೆ  ಶಿಖರ್‌ ಧವನ್‌ ಮನವಿ ಸಲ್ಲಿಸಿದ್ದಾರೆ. ಅವರ ಪತ್ನಿಯ ಅನಾ ರೋಗ್ಯವೇ ಇದಕ್ಕೆ ಕಾರಣ. ಧವನ್‌ ಮನವಿ ಯನ್ನು ಪುರಸ್ಕರಿಸಿ ಅವರನ್ನು ತಂಡದಿಂದ ಬಿಡುಗಡೆ ಗೊಳಿಸಲಾಗಿದೆ. ಅನಂತರ ಚರ್ಚೆ ನಡೆಸಿದ ರಾಷ್ಟ್ರೀಯ ಆಯ್ಕೆ ಸಮಿತಿ, ಬದಲಿ ಆಟಗಾರನ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ’ ಎಂದು ಬಿಸಿಸಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next