ನವದೆಹಲಿ: ಇತ್ತೀಚೆಗಷ್ಟೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚಾಲ್ತಿಗೆ ಬಂದಿರುವ ರಕ್ತ ಪರೀಕ್ಷೆಯಿಂದಲೇ ಸ್ತನ ಕ್ಯಾನ್ಸರ್ ( ಬ್ರೆಸ್ಟ್ ಕ್ಯಾನ್ಸರ್)ಪತ್ತೆ ಹಚ್ಚುವ ಆಧುನಿಕ ವೈದ್ಯಕೀಯ ಪದ್ಧತಿ ಈಗ ಭಾರತಕ್ಕೂ ಕಾಲಿಟ್ಟಿದೆ.
ಈ ಆಧುನಿಕ ಪರೀಕ್ಷಾ ಪದ್ಧತಿಯನ್ನು ಈಸಿ ಚೆಕ್ ಬ್ರೆಸ್ಟ್ ಎಂದು ಹೆಸರಿಡಲಾಗಿದೆ. ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈಗಾಗಲೇ ಈ ಪದ್ಧತಿಯನ್ನು ಪರಿಚಯಿಸಲಾಗಿದೆ. ಭಾರತದಲ್ಲಿ ಈಗಷ್ಟೇ ಈ ವಿಧಾನ ಕಾಲಿಟ್ಟಿದ್ದು , ಪ್ರತಿ ಪರೀಕ್ಷೆಗೆ 6 ಸಾವಿರ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ.
40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸ್ಟೇಜ್ ಝೀರೋ ಹಾಗೂ ಸ್ಟೇಜ್ 1ರಲ್ಲಿರುವ ಸ್ತನ ಕ್ಯಾನ್ಸರ್ ಗಡ್ಡೆಗಳನ್ನು ಶೇ. 99ರಷ್ಟು ಖಚಿತವಾಗಿ ಈ ಹೊಸ ವ್ಯವಸ್ಥೆಯಲ್ಲಿ ಪತ್ತೆ ಹಚ್ಚಬಹುದು.
ಇದನ್ನೂ ಓದಿ:ಅಸ್ಸಾಂ ಇನ್ನೂ ಅಸ್ಥಿರ:ಈವರೆಗೆ 108 ಸಾವು: ಬ್ರಹ್ಮಪುತ್ರಾ ಇನ್ನಿತರ ನದಿಗಳಲ್ಲಿ ಇಳಿಯದ ಉಬ್ಬರ
ಬಹು ಬೇಗನೇ ಈ ಕಾಯಿಲೆ ಪತ್ತೆಯಾದರೆ ಹಲವಾರು ಮಂದಿಯನ್ನು ಕಾಪಾಡಬಹುದು ಎಂದು ತಜ್ಞರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.