Advertisement

ಯುವಕರು ರಕ್ತದಾನಕ್ಕೆ ಮುಂದಾಗಲಿ: ನ್ಯಾ|ಸಿದ್ರಾಮ

05:29 PM Oct 31, 2020 | Suhan S |

ಬೀದರ: ರಕ್ತದಾನ ದಾನಗಳಲ್ಲೇ ಸರ್ವಶ್ರೇಷ್ಠವಾಗಿದೆ. ಹೆರಿಗೆ, ಅಪಘಾತ ಸಂಭವಿಸಿದ  ಸಂದರ್ಭ ರಕ್ತದ ಬಹಳ ಅಗತ್ಯವಿರುತ್ತದೆ. ಹೀಗಾಗಿ ಯುವ ಜನಾಂಗ ಹೆಚ್ಚೆಚ್ಚು ರಕ್ತದಾನ ಮಾಡಬೇಕು ಎಂದು ಪ್ರಧಾನ ಸಿವಿಲ್‌ ನ್ಯಾಯಾ ಧೀಶರಾದ ಸಿದ್ರಾಮ ಟಿ.ಪಿ. ಕರೆ ನೀಡಿದರು.

Advertisement

ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಮಹ್ಮದ್‌ ಅಲಿಮೊದ್ದೀನ್‌ ಫೌಂಡೇಶನ್‌ ಹಾಗೂ ಮೂಮೆಂಟ್‌ ಆಫ್‌ ಜಸ್ಟೀಸ್‌ ಸಂಘಟನೆ ಆಶ್ರಯದಲ್ಲಿ ಈದ್‌ ಮಿಲಾದ್‌-ಉನ್‌ ನಬಿ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮದುವೆ-ಮುಂಜಿ, ಸಭೆ, ಸಮಾರಂಭ, ಜನ್ಮದಿನ, ಮಹಾತ್ಮರ ಜಯಂತಿ ಕಾರ್ಯಕ್ರಮಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

ಫೌಂಡೇಶನ್‌ ಎಂಡಿ ಮುಹಮ್ಮದ್‌ ಅಸದೊದ್ದೀನ್‌ ಮಾತನಾಡಿ, ಕಳೆದ 10 ವರ್ಷದಿಂದ ಈದ್‌ ಮಿಲಾದ್‌ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಒಂದು ಯೂನಿಟ್‌ ರಕ್ತದಿಂದ ಮೂವರ ಪ್ರಾಣ ಉಳಿಸಬಹುದು ಎಂದರು. ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಫೋರಂದಿಂದ ಶಿಬಿರ ಆಯೋಜಕ ಅಸದೊದ್ದೀನ್‌ ಅವರಿಗೆ ಪ್ರಸಂಶನೀಯ ಪತ್ರ ನೀಡಿ, ಗೌರವಿಸಲಾಯಿತು.

ಫೋರಂ ಯೋಜನಾಧಿಕಾರಿ ಡಾ. ದೀಪಾ ಖಂಡ್ರೆ, ಪಿ.ಎಸ್‌.ಐ ಸಿದ್ಧಲಿಂಗ, ವೈದ್ಯಾ ಧಿಕಾರಿ ಡಾ. ಸೊಹೇಲ್‌, ಸರಫರಾಜ ಹಾಷ್ಮಿ, ಶೇಖ ಅನ್ಸಾರ್‌ ರೀಗಲ್‌, ಅಯೂಬ್‌ ಅಲಿ, ನಾರಾಯಣ ಗಣೇಶ ಸೇರಿದಂತೆ ಸಂಘಟನೆಯ ಪ್ರಮುಖರು ಇದ್ದರು.

ಕನ್ನಡದ ಕೆಲಸಕ್ಕೆ  ಬದ್ಧ : ಸಿದ್ರಾಮಪ್ಪ

Advertisement

ಬೀದರ: ಕನ್ನಡ ನಾಡು, ನುಡಿ ಸಂಬಂಧಿತ ಯಾವುದೇ ಕೆಲಸಕ್ಕೂ ಸದಾ ಕಂಕಣಬದ್ಧವಾಗಿದ್ದೇನೆ ಎಂದು ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿ ಯಾಗಿ ಪ್ರೊ. ಮಾಸಿಮಾಡೆ ಅವರು ನೇಮಕಗೊಂಡ ಪ್ರಯುಕ್ತ ಜಿಲ್ಲಾ ಕಸಾಪದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತುಕನ್ನಡಿಗರ ಅಸ್ಮಿತೆ ಸಂಸ್ಥೆಯಾಗಿದ್ದು, ಕೇಂದ್ರ ಕಸಾಪದ ಕಾರ್ಯಕಾರಿ ಸಮಿತಿಯ ಸಹಭಾಗಿತ್ವ ದೊರೆತದ್ದು ಸಂತಸವಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಹಿರಿಯರಾದ ಪ್ರೊ.  ಮಾಸಿಮಾಡೆ ಅವರು ಈ ಭಾಗದಲ್ಲಿ ಅತ್ಯುತ್ತಮ ಕಾರ್ಯ ಮಾಡಿದ್ದು, ಅನೇಕ ಕವಿ ಸಾಹಿತಿಗಳನ್ನ ಬೆಳಕಿಗೆ ತಂದಿದ್ದಾರೆ. ಪುನಃ ಪರಿಷತ್ತಿಗೆ ಬಂದಿದ್ದು, ಹೆಚ್ಚಿನ ಬಲ ತಂದಿದೆ. ಗಡಿಭಾಗದಲ್ಲಿ ಎಲ್ಲರೂ ಸೇರಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಎಂ. ಎಸ್‌.

ಮನೋಹರ, ಜಯದೇವಿ ಯದಲಪುರೆ, ಸಚಿನ ಮಠಪತಿ ಮಾತನಾಡಿದರು. ಸಾಹಿತಿಗಳಾದ ರಮೇಶ ಬಿರಾದಾರ, ಶಿವಕುಮಾರ ಕಟ್ಟೆ, ರಜಿಯಾ ಬಳಬಟ್ಟಿ, ವಿದ್ಯಾವತಿ ಬಲ್ಲೂರ, ಶಂಭುಲಿಂಗವಾಲ್ಗೊಡ್ಡಿ, ಪ್ರತಿಭಾ ಚಾಮಾ, ಶ್ರೀಕಾಂತ ಬಿರಾದಾರ, ಉಮಾಕಾಂತ ಮೀಸೆ, ರಾಮಕೃಷ್ಣ ಸಾಳೆ, ವಿಜಯಕುಮಾರ ಗೌರೆ, ಸಿದ್ರಾಮಪ್ಪ ಸಪಾಟೆ, ಸಂತೋಷ ಮಂಗಳೂರೆ, ಸತ್ಯಮೂರ್ತಿ, ಪರಮೇಶ್ವರ ಬಿರಾದಾರ, ಸಿದ್ಧಾರೂಢ ಭಾಲ್ಕೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next