Advertisement

ಮನುಷ್ಯರ ಜೀವ ಉಳಿವಿಗೆ ರಕ್ತದಾನ ಅವಶ್ಯ; ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌

05:58 PM Jun 23, 2022 | Team Udayavani |

ದೇವನಹಳ್ಳಿ: ರಕ್ತದಾನದಂತಹ ಪವಿತ್ರ ಕಾರ್ಯದಿಂದ ಮಾತ್ರ ಮನುಷ್ಯರ ಜೀವ ಉಳಿಸಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ಕುಂದಾಣ-ತಿಂಡ್ಲು ಸರ್ಕಲ್‌ ಬಳಿಯ ಕೇಂಬ್ರಿಡ್ಜ್ ತಾಂತ್ರಿಕ ಮಹವಿದ್ಯಾಲಯ ಪಾರ್ಕ್‌ ಕ್ಯಾಂಪಸ್‌ನಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿ, ಬೆಂಗಳೂರು ರಕ್ತನಿಧಿ ಕೇಂದ್ರ ಸರ್‌.ಸಿ.ವಿ. ರಾಮನ್‌ ಆಸ್ಪತ್ರೆ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ
ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿರುತ್ತದೆ ಎಂದರು.

ಎಲ್ಲರೂ ಕೈಜೋಡಿಸಿ: ದೇಶ ಕಾಯುವ ಸೈನಿಕರಿಗೆ ಮತ್ತು ಅಪಘಾತದಲ್ಲಿ ಸಾವು-ನೋವಿನ ಮಧ್ಯೆ ಹೋರಾಟ ನಡೆಸುವ ಮತ್ತು ಹಲವಾರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಈ ಪುಣ್ಯದ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

200 ಯೂನಿಟ್‌ ರಕ್ತ ಸಂಗ್ರಹ: ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉದಯಕುಮಾರ್‌ ಮಾತನಾಡಿ, ಕಳೆದ ವರ್ಷದಿಂದ ನಿರಂತರವಾಗಿ ಕಾಲೇಜಿ ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಮೂಡಿಬರುತ್ತಿದ್ದು, ಕಾಲೇಜಿನಲ್ಲಿ ಕಳೆದ ಬಾರಿ 150 ಯುನಿಟ್‌ ರಕ್ತ ಸಂಗ್ರಹಣ ಆಗಿತ್ತು. ಇದೀಗ 200 ಯೂನಿಟ್‌ ರಕ್ತ ಸಂಗ್ರಹವಾಗಿದೆ. ಕಾಲೇಜಿನ ಪ್ರತಿ ಯುವಕ, ಯುವತಿಯರು ಸ್ವಯಂಪ್ರೇರಿತರಾಗಿ ರಕ್ತವನ್ನು
ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.

ವಿದ್ಯಾರ್ಥಿಗಳಿಂದ ರಕ್ತದಾನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ತಿಪ್ಪೇಸ್ವಾಮಿ ಮಾತನಾಡಿ, ಡೆಂ à, ಮಲೇರಿಯಾ, ಇತರೆ ಜ್ವರಗಳಿಂದ ಬಳಲುತ್ತಿರುವವರಿಗೆ ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ ಕೊರತೆ ಇರುತ್ತದೆ. ಆ ಸಂದರ್ಭದಲ್ಲಿ ರಕ್ತದಾನ ಮಾಡಿರುವ ರಕ್ತವು ಪರಿಣಾಮಕಾರಿಯಾಗಿ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಿದ್ದು ಗಮನ ಸೆಳೆಯಿತು.

Advertisement

ಕಾಲೇಜಿನ ಪ್ರಾಂಶುಪಾಲ ಡ. ಸತ್ಯನಾರಾಯಣರೆಡ್ಡಿ, ಜಿಲ್ಲಾ ಕ್ಷಯ ಮತ್ತು ಏಡ್ಸ್‌ ರೋಗ ನಿಯಂತ್ರಣಧಿಕಾರಿ ಡಾ. ನಾಗೇಶ್‌, ದೇವನಹಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ. ಪಿ. ಸಂಜಯ, ಬೆಂಗಳೂರು ರಕ್ತನಿಧಿ ಕೇಂದ್ರ ಸರ್‌.ಸಿ.ವಿ. ರಾಮನ್‌, ರಕ್ತನಿಧಿ ವೈದ್ಯಾಧಿಕಾರಿ ಡಾ ಶೀಲಾ, ಕುಂದಾಣ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಪ್ರಸಾದ್‌, ಎಂ.ಎಂ. ಗ್ರಾಮಲೆಕ್ಕಿಗ ಲಾವಣ್ಯ, ಕಾಲೇಜಿನ ಉಪನ್ಯಾಸಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next