Advertisement

  ಶಿರಸಿ ವೈದ್ಯೆ ಸುಮನ್‌ ಹೆಗಡೆಯಿಂದ ಸ್ವಯಂ ರಕ್ತದಾನ ಮಾಡಿ ಜಾಗೃತಿ ಅಭಿಯಾನ

06:49 PM Apr 24, 2021 | Team Udayavani |

 ಶಿರಸಿ: ಕೇಂದ್ರ ಸರಕಾರ ಕೋವಿಡ್‌ 19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದೆ.

Advertisement

ಸರಕಾರಗಳಿಂದ ಕೋವಿಡ್‌ ನಿಯಂತ್ರಣಕ್ಕೆ ಇದು ಅತ್ಯಂತ ಮಹತ್ವದ ನಡೆ. ಈ ನಡೆಯ ಬೆನ್ನಿಗೇ ಶಿರಸಿ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ರಕ್ತದಾನ ಮಾಡಿ ಪ್ಲೀಸ್‌ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಏನಿದು ಅಡಚಣೆ?: ಕೋವಿಡ್‌ ನಿರೋಧಕ ಲಸಿಕೆ ಅಭಿಯಾನವು ಮೇ 1ರಿಂದ 18 ರಿಂದ 45 ವರ್ಷದವರಿಗಾಗಿ ಆರಂಭವಾಗುತ್ತದೆ.

ರಾಷ್ಟ್ರಿಯ ರಕ್ತ ಸಂಚರಣ ಪರಿಷತ್‌ (ಎಬಿಟಿಸಿ) ಪ್ರಕಾರ ಯಾವುದೇ ಲಸಿಕೆ ಪಡೆದ ನಾಲ್ಕು ವಾರಗಳ ತನಕ ರಕ್ತದಾನ ಮಾಡಲು ಅವಕಾಶ ಇಲ್ಲ. ಕೋವಿಡ್‌ ಲಸಿಕೆ ಎರಡು ಹಂತದಲ್ಲಿ ಪಡೆಯಬೇಕು. ಈ ಹಂತದಲ್ಲಿ ದೇಶದಲ್ಲಿ ರಕ್ತದ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕೊರೊನಾ ಭಯದದಲ್ಲಿ ಮೊದಲೇ ರಕ್ತದಾನಿಗಳ ಕೊರತೆ ಇದೆ. ಕಳೆದೊಂದು ವರ್ಷದಿಂದ ರಕ್ತದಾನ ಶಿಬಿರಗಳೂ ಹೆಚ್ಚು ನಡೆದಿಲ್ಲ.

ಪರಿಹಾರ ಏನು?: ಶಿರಸಿಯ ಪಂಡಿತ್‌ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್‌ಲೈನ್‌ ಬ್ಲಿಡ್‌ ಬ್ಯಾಂಕ್‌ ವೈದ್ಯಾಧಿಕಾರಿ ಡಾ| ಸುಮನ್‌ ದಿನೇಶ ಹೆಗಡೆ, ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂಬ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹಣಾ ಕೊರತೆ ನೀಗಿಸಲು ಇದೊಂದೇ ದಾರಿಯಾಗಿದೆ. ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ, ಮನವಿಗಳ ಮೂಲಕ 18ರಿಂದ 45 ವರ್ಷದೊಳಗಿನ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವಯಸ್ಸಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಒಮ್ಮೆ ರಕ್ತದಾನ ಮಾಡಿದರೆ ಒಬ್ಬ ಪುರುಷ ದಾನಿಗೆ 3, ಮಹಿಳಾ ದಾನಿಗೆ 4 ತಿಂಗಳ ಕಾಲ ಬಿಡುವು ಬೇಕಿದೆ ಎಂಬುದೂ ಉಲ್ಲೇಖನೀಯ.

ಡಾ| ಸುಮನ್‌ ಹೆಗಡೆ, ಪ್ರಥಮ ಹಂತದ ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಲಸಿಕೆ ಪಡೆಯಬಹುದು. ಅಥವಾ ಈಗ ಕೊಟ್ಟಿಲ್ಲ ಎಂದರೆ ಎರಡನೇ ಲಸಿಕೆ ಪಡೆಯುವ ಮುನ್ನವೂ ರಕ್ತದಾನ ಮಾಡಬಹುದು ಎಂದು ಸಲಹೆ ಮಾಡುತ್ತಾರೆ. ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ. ಈ ಸಂದೇಶವನ್ನು ವಾಟ್ಸಪ್‌ಗ್ಳಲ್ಲಿ ಹಾಕಿದಾಗ ದಾನಿಗಳೂ ಉತ್ಸುಕರಾಗಿ ಸ್ಪಂದಿಸುತ್ತಿದ್ದು, ತಾವೂ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವುದಾಗಿ ತಿಳಿಸಿದ್ದಾರೆ ಡಾ| ಸುಮನ್‌ ಹೆಗಡೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next