Advertisement

ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರಗಳು

09:15 PM Sep 25, 2019 | mahesh |

ರಕ್ತದಾನ ಅಂದರೆ ಜೀವದಾನ ಎಂದೇ ಅರ್ಥ. ಆಯುರ್ವೇದದಲ್ಲೂ ರಕ್ತದ ಮಹತ್ವ ವರ್ಣಿಸುವಾಗ “ರಕ್ತಂ ಜೀವ ಇತಿ ಸ್ಥಿತಿಃ’ ಎಂದಿದ್ದಾರೆ. ಅಂದರೆ ರಕ್ತವನ್ನು ಜೀವ ಎಂದು ಉಲ್ಲೇಖೀಸಿದ್ದಾರೆ.

Advertisement

ರಕ್ತದಾನದ ಬಗ್ಗೆ ಇದ್ದ ಭಯ, ಆತಂಕ ದೂರ ಮಾಡುವ ಅನಿವಾರ್ಯ ಇಂದಿದೆ. ರಕ್ತದಾನದಿಂದ ರಕ್ತದ ಆವಶ್ಯಕತೆ ಇರುವವರಿಗೆ ಹಾಗೂ ರಕ್ತ ನೀಡುವ ವ್ಯಕ್ತಿಗೂ ಲಾಭ ಇದೆ ಎನ್ನುವ ಸತ್ಯಾಂಶಗಳನ್ನು ತಿಳಿ ಹೇಳುವ ಕಾರ್ಯ ನಡೆಯುತ್ತಿರುವುದು ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ.

ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ. ಹೃದಯಾಘಾತದ ಸಂಭವ ಕಡಿಮೆ ಯಾಗುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್‌ ಅಂಶ ಕಡಿಮೆಯಾಗು ತ್ತದೆ. ನಿಯಮಿತವಾಗಿ ರಕ್ತದಾನ ಮಾಡು ವುದ ರಿಂದ ಕೆಲವು ರೋಗ ಗಳನ್ನು ತಡೆಗಟ್ಟಬಹುದು ಎಂದು ಆಯುರ್ವೇದ ಹೇಳುತ್ತದೆ. ಒಟ್ಟಾರೆ ರಕ್ತದಾನ ದಿಂದ ರಕ್ತದಾನಿ ಮತ್ತು ರಕ್ತ ಪಡೆ ದವರು ಇಬ್ಬರಿಗೂ ಲಾಭವಾಗುವುದು ನಿಶ್ಚಿತ.

ಶಿಬಿರಗಳು ಸಾಥ್‌
ಅನೇಕ ಸಂಘ – ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಿ ಪ್ರೇರಣೆ ನೀಡುತ್ತಿವೆ. ಪ್ರಸಿದ್ಧ ಆಸ್ಪತ್ರೆಗಳು ಅಲ್ಲಲ್ಲಿ ಕ್ಯಾಂಪ್‌ ಆಯೋಜಿಸಿ ರಕ್ತದಾನಿಗಳನ್ನು ಪ್ರೋತ್ಸಾಹಿಸುತ್ತಿವೆ. ರೆಡ್‌ಕ್ರಾಸ್‌ ಯುವ ಘಟಕಗಳು ರಕ್ತದಾನ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಕಾಲೇಜು ವಿದ್ಯಾರ್ಥಿಗಳಲ್ಲಿ ರಕ್ತದಾನ ನೀಡುವ ಬಗ್ಗೆ ಜಾಗೃತಿ ಅಭಿಯಾನಗಳು ಅಲ್ಲಲ್ಲಿ ನಡೆಯುತ್ತಿವೆ. ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತದ ಘಟಕಗಳನ್ನು ಆವಶ್ಯಕತೆಗೆ ಅನುಗುಣವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದು. ಒಬ್ಬ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳ ಒಳಗೆ ಉಪಯೋಗಿಸಲು ಸಾಧ್ಯವಿದೆ. ರಕ್ತದಾನಕ್ಕೆ 350 ಮಿ.ಲೀ. ರಕ್ತವನ್ನು ದಾನಿಯಿಂದ ಸ್ವೀಕರಿಸಲಾಗುತ್ತದೆ ಮತ್ತು ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ.

ಶಸ್ತ್ರಚಿಕಿತ್ಸೆ, ಅಪಘಾತ, ರಕ್ತಹೀನತೆ ಮೊದಲಾದ ಸಂದರ್ಭಗಳಲ್ಲಿ ರಕ್ತ ವರ್ಗಾವಣೆ ಅಗತ್ಯವಿರುತ್ತದೆ. ಆದರೆ ಬೇಡಿಕೆಗೆತಕ್ಕಷ್ಟು ರಕ್ತ ಪೂರೈಕೆ ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಇರುವ ಭಯ, ಆತಂಕ. ಪ್ರತಿಯೊಬ್ಬ ರಕ್ತದಾನಿಯಿಂದ ರಕ್ತವನ್ನು ಪಡೆಯುವ ಮೊದಲು ವಯಸ್ಸು, ತೂಕ, ರಕ್ತದೊತ್ತಡ, ಹಿಮೋ ಗ್ಲೋಬಿನ್‌ ಪ್ರಮಾಣ, ಆರೋಗ್ಯ ಸ್ಥಿತಿ ಹೀಗೆ ಎಲ್ಲವನ್ನೂ ಪರೀಕ್ಷಿಸಿ ಎಲ್ಲವೂ ಸರಿಯಿದ್ದಲ್ಲಿ ರಕ್ತ ಪಡೆಯುವ ಕ್ರಿಯೆಗೆ ಮುಂದಾಗುತ್ತಾರೆ. ಹೀಗಾಗಿ ರಕ್ತದಾನಿಗಳು ನಿರ್ಭೀತಿಯಿಂದ ರಕ್ತ ನೀಡಬಹುದು.

Advertisement

ರಕ್ತದಾನ ಯಾರು ಮಾಡಬಹುದು?
18-60 ವರ್ಷದೊಳಗಿನ ಎಲ್ಲ ಆರೋಗ್ಯ ವಂತ ವ್ಯಕ್ತಿಗಳು ರಕ್ತದಾನ ಮಾಡ ಬಹುದು. 45 ಕೆ.ಜಿ.ಗಿಂತ ತೂಕ ಹೆಚ್ಚಿರಬೇಕು. ರಕ್ತದಲ್ಲಿ ಹಿಮೋ ಗ್ಲೋಬಿನ್‌ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು, ಆರೋಗ್ಯ ವಂತ ಪುರುಷರು ಮೂರು ತಿಂಗಳಿ ಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದು.

ಯಾರು ಮಾಡಬಾರದು?
ಯಕೃತ್‌, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮೊದಲಾದ ಸಮಸ್ಯೆ ಇರುವವರು, ಗರ್ಭಿಣಿ, ಋತು ಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು, ರಕ್ತ ಹೀನತೆ ಇರು ವವರು, ರಕ್ತ ವರ್ಗಾ ವಣೆ ಮಾಡಿಸಿ ಕೊಂಡ ವರು ಮೊದಲಾದ ತೊಂದರೆ ಗಳು ಇರುವವರು ರಕ್ತದಾನ ದಿಂದ ದೂರ ಇರಬೇಕು.

-   ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next