ಸೈದಾಪುರ: ಸದೃಢ ಸಮಾಜ ನಿರ್ಮಾಣಕ್ಕೆ ಯುವಕರು ಮಹಾತ್ಮರ ಜೀವನಾದರ್ಶ ಮೈಗೂಡಿಸಿಕೊಳ್ಳಬೇಕು ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಮಿತ್ರ ಚಾರಿಟೇಬಲ್ ಟ್ರಸ್ಟ್ ಹಾಗೂ ಡಾ| ಸುರಗಿಮಠ ರಕ್ತ ನಿಧಿ ಕೇಂದ್ರ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಜನ್ಮದಿನ ಪ್ರಯುಕ್ತ ಸರ್ಕಾರಿ ಮಾದರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಯವರಂತಹ ಮಹಾನ್ ನಾಯಕರ ಜೀವನಾದರ್ಶಗಳು ಯುವಕರಿಗೆ ಸ್ಪೂರ್ತಿಯಾಗಲಿ ಎಂದ ಅವರು, ರಕ್ತದಾನ ಶಿಬಿರ ಹಮ್ಮಿಕೊಂಡ ಮಿತ್ರ ಚಾರಿಟೇಬಲ್ ಗೆಳೆಯರ ಬಳಗದ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಡಾ| ಎಸ್.ಆರ್. ಸುರಗಿಮಠ ಪ್ರಾಸ್ತವಿಕ ಮಾತನಾಡಿದರು. ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೋವಿಡ್ ವಾರಿಯರ್ ಆದ ವೈದ್ಯರು, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ವಿಜಯಕುಮಾರ ದೇವರು, ಸಿದ್ದರಾಮ ದೇವರು, ಚಂದ್ರಶೇಖರ ದೇವರು, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ತಾಪಂ ಸದಸ್ಯ ಚಂದಪ್ಪ ಕಾವಲಿ ಬಾಲಚೇಡ, ಆಯುಷ್ ವೈದ್ಯಾಧಿಕಾರಿ ಡಾ| ಪ್ರಮೋದ ಕುಲಕರ್ಣಿ, ಪಿಎಸ್‌ಐ ಸುವರ್ಣ ಮಾಲಶೆಟ್ಟಿ ಸೇರಿ ಅನೇಕರು ಉಪಸ್ಥಿತರಿದ್ದರು.
ನಾಲ್ವರು ಶ್ರೀಗಳಿಂದ ರಕ್ತದಾನ: ಮಿತ್ರ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡ ಪ್ರಥಮ ರಕ್ತದಾನ ಶಿಬಿರದಲ್ಲಿ ತಾವೇ ಮೊದಲು ರಕ್ತದಾನ ಮಾಡುವುದಾಗಿ ತಿಳಿಸಿದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಪೀಠಾಧಿ ಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ, ವಿಜಯಕುಮಾರ ದೇವರು, ಸಿದ್ದರಾಮ ದೇವರು, ಚಂದ್ರಶೇಖರ ದೇವರು ಸೇರಿದಂತೆ ಸುಮಾರು 100ಕ್ಕೂ ಅ ಧಿಕ ಯುವಕರು ರಕ್ತದಾನ ಮಾಡಿದರು.