Advertisement

ರಕ್ತದಾನ ಮಾಡಿ, ಜೀವ ಉಳಿಸಿ

01:26 PM Aug 15, 2020 | Suhan S |

ಶಿಡ್ಲಘಟ್ಟ: ಆರೊಗ್ಯವಂತರು ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂದು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಲಕ್ಷ್ಮೀನಾರಾಯಣ ಗುಪ್ತ ಸಲಹೆ ನೀಡಿದರು.

Advertisement

ನಗರದಲ್ಲಿನ ಸಿದ್ದೇಶ್ವರದಾಯ ಭವನದಲ್ಲಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಮಂಡಲ, ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಿಂದ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ ಇಂದಿಗೂ ತಪ್ಪು ಕಲ್ಪನೆ ಸೇರಿ ಮತ್ತಿತರರ ಕಾರಣಗಳ ಹಿನ್ನೆಲೆಯಲ್ಲಿ ಅನೇಕರು ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಇದರಿಂದ ಶಸ್ತ್ರಚಿಕಿತ್ಸೆಗೊಳಾಗದವರು, ಗಾಯಾಳುಗಳು ರಕ್ತ ಸಿಗದೇ ಜೀವ ಕಳೆದುಕೊಳ್ಳಲು ಪರದಾಡುವಂತಾಗಿದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ 3 ಬಾರಿ ರಕ್ತದಾನ ಮಾಡಲು ಮುಂದಾಗ ಬೇಕು ಎಂದರು.

ಭಗತ್‌ಸಿಂಗ್‌ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಸಂದೀಪ್‌ರೆಡ್ಡಿ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ಹೊಸ ಚೈತನ್ಯ ಬರುತ್ತದೆ. ಹೃದ್ರೋಗ, ರಕ್ತದೊತ್ತಡ ಸೇರಿ ಅನಾರೋಗ್ಯದ ಹಲವು ಸಮಸ್ಯೆಗಳು ದೂರವಾಗುತ್ತವೆ ಎಂದರು.

ಯುವ ಮೋರ್ಚಾ ಮಾಜಿ ಅಧ್ಯಕ್ಷ ಎಸ್‌.ಆರ್‌.ಎಸ್‌.ದೇವರಾಜ್‌ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು. ನಗರಸಭೆಯ ಮಾಜಿ ಅಧ್ಯಕ್ಷ ಮಂಜು, ಮಾಜಿ ಸದಸ್ಯ ಎನ್‌.ಬಾಲಕೃಷ್ಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ವಿ. ಶ್ರೀನಿ ವಾಸ್‌, ಗ್ರಾಮೀಣ ಮಂಡಲ ಅಧ್ಯಕ್ಷ ಕೆ. ಎಸ್‌.ಕೃಷ್ಣಾರೆಡ್ಡಿ, ಮುಖಂಡ ರಾದ ಸಿ.ಬಿ.ಕಿರಣ್‌, ಮುಖಂಡರಾದ ಬೈರೇ ಗೌಡ, ಎಲ್‌.ಎಂ.ಎಲ್‌ ಶೇಖರ್‌, ಅಂಬರೀಶ್‌, ಆರ್‌.ಎಸ್‌.ಎಸ್‌ನ ದೇವರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next