Advertisement

ರಕ್ತದಾನ ಶಿಬಿರ ಉದ್ಘಾಟನೆ

07:44 PM Apr 30, 2019 | Team Udayavani |

ಗಂಗೊಳ್ಳಿ: ಶ್ರೀ ಇಂದುಧರ ಯುವಕ ಮಂಡಲ, ಯಕ್ಷಾಭಿಮಾನಿ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಕ್ತನಿಧಿ  ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಸರಸ್ವತಿ ವಿದ್ಯಾಲಯ ಹಿ. ಪ್ರಾ. ಶಾಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

Advertisement

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರೆಡ್‌ಕ್ರಾಸ್‌ ಸಂಸ್ಥೆಯ ಚೇರ್‌ವೆುನ್‌ ಎಸ್‌. ಜಯಕರ ಶೆಟ್ಟಿ, ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರಕುತ್ತದೆ.ರಕ್ತದಾನ ಮಾಡುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಉಂಟಾಗದಂತೆ ಮಾಡಬಹುದು ಎಂದರು.

ಮತ್ಯೋÕದ್ಯಮಿ ಮಂಜುನಾಥ ಜಿ.ಟಿ. ಉದ್ಘಾಟಿಸಿದರು. ರೆಡ್‌ಕ್ರಾಸ್‌ ಸಂಸ್ಥೆಯ ಸದಸ್ಯ ಗಣೇಶ ಆಚಾರ್ಯ, ಗ್ರಾ.ಪಂ. ಸದಸ್ಯ ಬಿ. ಗಣೇಶ ಶೆಣೈ, ಮಹಮ್ಮದ್‌ ತಬ್ರೇಜ್‌, ಗುರುಚರಣ್‌ ಖಾರ್ವಿ, ಶಾಹಿ ಮಸೀದಿ ಅಧ್ಯಕ್ಷ ಮಹಮ್ಮದ್‌ ಅಫ್ಜಲ್‌, ಯಕ್ಷಾಭಿಮಾನಿ ಬಳಗದ ಗಣೇಶ ಪೂಜಾರಿ, ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಸುಂದರ ಬಿ., ಉಪಾಧ್ಯಕ್ಷ ಸುರೇಶ ಜಿ., ಕಾರ್ಯದರ್ಶಿ ವಾಸು ಬಿ., ಯುವಕ ಮಂಡಲದ ಅಧ್ಯಕ್ಷ ಸುದೀಪ ಜಿ.ಎಸ್‌., ಗೌರವಾಧ್ಯಕ್ಷ ಗುರುರಾಜ್‌ ಜಿ., ಗಣೇಶ ಖಾರ್ವಿ, ರಾಜ ಖಾರ್ವಿ, ಸಂದೇಶ ಜಿ.ಎಂ., ಬಾಬು ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.ಸುಂದರ ಬಿ. ಸ್ವಾಗತಿಸಿದರು. ಸುರೇಶ ಜಿ. ನಿರೂಪಿಸಿದರು. ಕಾರ್ಯದರ್ಶಿ ಕುಮಾರ ಜಿ. ಟಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next