ತುಮಕೂರು: ರಕ್ತದಾನ ಮಹಾದಾನ, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕೆ.ಶಿವಚಿತ್ತಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರ ಶೇಷಾದ್ರಿಪುರಂ ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದಅವರು, ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದದಾನವಾಗಿದೆ. ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮಕೊಡುಗೆ ನೀಡುವುದನ್ನು ಬೆಳೆಸಿಕೊಳ್ಳ ಬೇಕು.ಶೇಷಾದ್ರಿ ಪುರಂ ಕಾಲೇಜು ಬೇರೆ ಕಾಲೇಜುಗಳಿಗಿಂತಭಿನ್ನ. ಸಮಾಜಸೇವೆ ಶಿಕ್ಷಣ ಮೌಲ್ಯಗಳನ್ನು ಬಿತ್ತುವಲ್ಲಿಮುಂದೆ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮನವರಿಕೆ: ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ.ರಾಜು ಚಂದ್ರಶೇಖರ್ ಮಾತನಾಡಿ,ನಮ್ಮ ರಾಜ್ಯದಲ್ಲಿ ರಕ್ತದಾನ ಮಾಡುವುದರಲ್ಲಿಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯು ಮುಂದೆ ಇದೆ.ಎಲ್ಲರೂ ರಕ್ತದಾನ ಮಾಡಿ ನಿಮ್ಮ ಆರೋಗ್ಯಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಅಂಗಾಂಗ ದಾನ ಮಾಡಿ: ಜಾನಪದ ವಿದ್ವಾಂಸ ಡಾ.ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ನಾವುಸತ್ತಮೇಲೂ ಜೀವಂತವಾಗಿರಬೇಕು ಎಂದರೆನಮ್ಮ ಅಂಗಾಂಗಗಳನ್ನು ದಾನ ಮಾಡಬೇಕು.ರಕ್ತದಾನ ಆರೋಗ್ಯಕ್ಕೆ ಬಹಳ ಮುಖ್ಯವಾದುದು.ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ನುಡಿದರು.
ನಾಡಿಗೆ ಉತ್ತಮ ಪ್ರಜೆಗಳಾಗಿ: ವಿದ್ಯಾರ್ಥಿಗಳುಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು, ದೇಹಸೌಂದರ್ಯ ವ್ಯಾಮೋಹ ಬಿಟ್ಟು ನಾವು ಮಾಡುವಕೆಲಸದಲ್ಲಿ ಸೌಂದರ್ಯವನ್ನು ಕಾಣಬೇಕು. ನಾಡಿಗೆಉತ್ತಮ ಪ್ರಜೆಗಳಾಗಬೇಕು. ನಮ್ಮ ಸಂಸ್ಥೆ ಪ್ರತಿವರ್ಷಏಳು ಸಾವಿರದಿಂದ ಎಂಟು ಸಾವಿರ ಯೂನಿಟ್‌ರಕ್ತವನ್ನು ಸಮಾಜಸೇವೆಗೆ ಕೊಡುತ್ತಿದೆ. ಇದು ಇನ್ನೂಹೆಚ್ಚಾಗಬೇಕು ಎಂದು ಶಿಕ್ಷಣ ತಜ್ಞ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೆ ಪಿ.ಕೃಷ್ಣ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ.ಟಿ. ಜಗದೀಶ, ಸಂಚಾಲಕ ಪ್ರೊ.ಎ.ಪಿ. ಮನೋಹರ ಹಾಗೂ ಕಾಲೇಜು ಅಧ್ಯಾಪಕರು ಇದ್ದರು.