ನವಿಮುಂಬಯಿ: ಸಂತ ನಿರಂಕರಿ ಮಂಡಳದಿಂದ ಜು. 19ರಂದು ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಭಾರೀ ಮಳೆ ಇದ್ದರೂ 112 ನಿರಂಕರಿಗಳು ರಕ್ತದಾನಗೈದರು. ಕೋಪರ್‌ಖರ್ಣೆಯ ಸೆಕ್ಟರ್-23ರಲ್ಲಿರುವ ಜ್ಞಾನ ವಿಕಾಸ್ ಸಂಸ್ಥೆಯ ಸಭಾಗೃಹದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಂಬಯಿಯ ವಿಲೇಪಾರ್ಲೆ, ಸಂತ ನಿರಂಕರಿ ಬ್ಲಿಡ್ ಬ್ಯಾಂಕ್‌ನವರು ಸಹಕರಿಸಿದರು.
ನಿರಂಕಾರಿ ಸದ್ಗುರು ಮಾತಾ ಸುದಿಕ್ಷ ಜಿ ಮಹಾರಾಜ್ ಅವರ ಬೋಧನೆಗಳನ್ನು ಅನುಸರಿಸಿ ಮಾನವಕುಲಕ್ಕೆ ಮಾಡುವ ಸೇವೆ ದೇವರ ನಿಜವಾದ ಭಕ್ತಿಯ ಸೇವೆಯಾಗಿದೆ ಎಂಬ ಧ್ಯೇಯದೊಂದಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಕ್ತ ದಾನ ಮಾಡಲು ಹತ್ತಿರದ ಪ್ರದೇಶಗಳ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿದ್ದರು. ಶಿಬಿರದಲ್ಲಿ ಸುಮಾರು 142 ದಾನಿಗಳು, ಡಿವಿಎಸ್‌ನ ಕಾಲೇಜಿನ 7 ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು. ರಕ್ತದಾನದ ಮಾನದಂಡ ಪೂರೈಸದ ಕಾರಣ ಹಲವರನ್ನು ರಕ್ತದಾನ ಮಾಡಲು ಆಯ್ಕೆ ಮಾಡಲಾಗಿಲ್ಲ.
ಜ್ಞಾನ ವಿಕಾಸ್ ಸಂಸ್ಥೆಯ ಅಧ್ಯಕ್ಷ ಪಿ. ಸಿ. ಪಾಟೀಲ್ ಅವರು ಶಿಬಿರವನ್ನು ಉದ್ಘಾಟಿಸಿ, ಕಳೆದ ಹಲವು ವರ್ಷಗಳಿಂದ ನಿರಂಕರಿ ಭಕ್ತರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರಲ್ಲಿನ ನಿಸ್ವಾರ್ಥ ಸೇವೆ ಮತ್ತು ಏಕತೆಯ ಮನೋಭಾವ ಅದ್ಭುತವಾಗಿದೆ. ನಾನು
ಸಂತ ನಿರಂಕರಿಯನ್ನು ಮೆಚ್ಚುತ್ತೇನೆ. ಮಾನವಕುಲದ ಸೇವೆಗಳಲ್ಲಿ ಮಿಷನ್‌ನ ಕೊಡುಗೆ ಅಪಾರವಾಗಿದೆ ಎಂದರು.
ನವಿಮುಂಬಯಿಯ ಜಯಶ್ರೀತಾಯಿ ಪಾಟೀಲ್, ಜ್ಞಾನ ವಿಕಾಸ್ ಸಂಸ್ಥೆಯ ಉಪಾಧ್ಯಕ್ಷ ಗಜಾನನ್ ಪಾಟೀಲ್, ಮಾಜಿ ಕಾರ್ಪೊರೇಟರ್ ಕೇಶವ್ ಮಾತ್ರೆ, ಮಾಜಿ ಕಾರ್ಪೊರೇಟರ್ ಚಾಯಾ ಕೇಶವ್ ಮಾತ್ರೆ ಮತ್ತು ರಿಲಯನ್ಸ್ ಗ್ರೂಪ್ ಉಪಾಧ್ಯಕ್ಷರಾದ ಪಿಯೂಷ್ ಗೋಯೆಲ್, ಬಾಬು ಭಾಯ್ ಪಂಚಲ…, ಅಶೋಕ್ ಕೆರೆಕರ್, ವಿವೇಕ್ ಸಿಂಗ್ ಹಾಗೂ ನವಿಮುಂಬಯಿಯ ಎಸ್‌ಎನ್‌ಎಂ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಡಳಿಯ ಸ್ಥಳೀಯ ವಲಯ ಸಂಯೋಜಕ ಸನ್ಯೋ ಜಾಕ್ ಅವರ ಮಾರ್ಗದರ್ಶನದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ಮನೋಹರ್ ಸಾವಂತ್ ಅವರು ಸ್ಥಳೀಯ ಸೇವಾದಳ ಘಟಕ ಮತ್ತು ಸ್ವಯಂಸೇವಕರು ಸಹಕರಿಸಿದರು.