Advertisement

ರಕ್ತದಾನ ಜಾಗೃತಿ ಅಗತ್ಯ: ರಾಮರಾವ್‌

09:40 PM Jun 15, 2019 | Sriram |

ದೇರಳಕಟ್ಟೆ: ರಕ್ತದಾನಿಗಳು ಜೀವ ರಕ್ಷಕರು. ರಕ್ತದ ಅಗತ್ಯವಿದ್ದಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಸಹಾಯಕ ಪೊಲೀಸ್‌ ಆಯುಕ್ತ ರಾಮ ರಾವ್‌ ಅಭಿಪ್ರಾಯಪಟ್ಟರು.

Advertisement

ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆ, ಪೊಲೀಸ್‌ ಇಲಾಖೆಯ ದಕ್ಷಿಣ ಉಪ ವಿಭಾಗ ಹಾಗೂ ಬ್ಲಿಡ್‌ ಬ್ಯಾಂಕ್‌ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಶುಕ್ರವಾರ ಜರಗಿದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಡೀನ್‌ ಡಾ| ಪ್ರಕಾಶ್‌ ಮಾತನಾಡಿ, ರಕ್ತ ಮಾರುಕಟ್ಟೆಯಲ್ಲಿ ದೊರೆ ಯುವಂತದ್ದಲ್ಲ, ದಾನದಿಂದಲೇ ನೀಡಬೇಕಾಗಿದೆ. ಜೀವನ ಉಳಿಸಲು ನೀಡುವ ಉಡುಗೊರೆಯಾಗಿರುತ್ತದೆ. ಹಿಂದೆ ವೈದ್ಯರು, ಸಿಬಂದಿ ರಕ್ತ ಒದಗಿಸುವಂತಹ ವಾತಾವರಣವಿತ್ತು. ಈಗ ಕಾಲ ಬದಲಾಗಿದೆ. ರಕ್ತದ ಬಣ್ಣ ಒಂದೇ. ಬೇಧವಿಲ್ಲದೆ ಎಲ್ಲರೂ ಮಾಡಬೇಕಾದ ಮಹತ್ಕಾರ್ಯ ರಕ್ತದಾನ ಎಂದರು.

ಈ ವೇಳೆ 24 ವರ್ಷಗಳಿಂದ ರಕ್ತದಾನ ಶಿಬಿರ, ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ, ರಾಜ್ಯ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣ ಕುಮಾರ್‌ ಪೂಂಜ ಅವರನ್ನು ಸಮ್ಮಾನಿಸಲಾಯಿತು.

ಬಳಿಕ ಮಾತನಾಡಿದ ಕೃಷ್ಣ ಕುಮಾರ್‌ ಪೂಂಜ, ಕಾರ್ಯಕರ್ತರೆಲ್ಲರ ಸೇವಾ ಮನೋ ಭಾವದಿಂದ ಕೂಡಿರು ವುದರಿಂದ 24 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಾಧ್ಯ ವಾಗಿದೆ. ದ.ಕ ಜಿಲ್ಲೆಯಲ್ಲಿ ರಕ್ತದ ಕೊರತೆ ನಿರ್ಮಾಣವಾಗಿದೆ. ಎನ್ನೆಸ್ಸೆಸ್‌ ಕಾರ್ಯ ಕರ್ತರು ಇತ ರರಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ.
ದೂರದಿಂದ ಬರುವ ಮಂದಿಗೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ರಕ್ತ ಒದಗಿಸುವಂತಹ ಕಾರ್ಯ ಮಾನವೀಯತೆಯನ್ನು ಮೈಗೂಡಿ ಸಿಕೊಳ್ಳಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನಿಟ್ಟೆ ವಿ.ವಿ. ಜತೆಗೆ ಪೊಲೀಸ್‌ ಇಲಾಖೆ ಸೇರಿಕೊಂಡು ನಡೆಸಿದ ರಕ್ತದಾನ ಕಾರ್ಯ ಶ್ಲಾಘನೀಯ ಎಂದರು.

Advertisement

ಕೊಣಾಜೆ ಠಾಣಾಧಿಕಾರಿ ರವೀಶ್‌ ನಾಯ್ಕ,ಕ್ಷೇಮ ಸಹ ಡೀನ್‌ ಡಾ| ಜೆ.ಪಿ.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ವೈದ್ಯಕೀಯ ಅಧೀಕ್ಷಕ ಶಿವಕುಮಾರ್‌ ಹಿರೇಮs… ಸ್ವಾಗತಿಸಿದರು. ಡಾ| ಸುಮಲತಾ ಸಮ್ಮಾನಿತರ ವಿವರ ಓದಿದರು. ಯಶೋಧಾ ಕಾರ್ಯಕ್ರಮ ನಿರೂಪಿಸಿದರು. ಶಶಿ ಕುಮಾರ್‌ ಶೆಟ್ಟಿ ವಂದಿಸಿದರು.

ಪೊಲೀಸ್‌ ಇಲಾಖೆಯ ದಕ್ಷಿಣ ಉಪ ವಿಭಾಗದ ಸುಮಾರು 21ಕ್ಕೂ ಅಧಿಕ ಪೊಲೀಸರು ಹಾಗೂ ನಿಟ್ಟೆ ವಿ.ವಿ. ಯ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ರಕ್ತದಾನ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next