Advertisement

ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ರಕ್ತದಾನ

05:01 PM Jun 01, 2020 | Suhan S |

ಕನಕಗಿರಿ: ರಕ್ತದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಅದರೆ ಇಂತಹ ಕೋವಿಡ್ ವೈರಸ್‌ ಭೀತಿ ನಡೆವೆಯೂ ರಕ್ತದಾನ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಹಶೀಲ್ದಾರ್‌ ರವಿ ಅಂಗಡಿ ಹೇಳಿದರು.

Advertisement

ಪಟ್ಟಣದ ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ಕನಕಗಿರಿ ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಎಲ್ಲ ದಾನಕ್ಕಿಂತ ರಕ್ತದಾನ ಮಹಾದಾನ. ರಕ್ತದಾನ ಮಾಡುವ ಮೂಲಕ ಹಲವು ಜೀವ ಉಳಿಸುವ ಪುಣ್ಯದ ಕೆಲಸ ಮಾಡಿ ಎಂದರು.

ಪೊಲೀಸರಿಂದ ರಕ್ತದಾನ: ಪಟ್ಟಣದ ಪೊಲೀಸ್‌ ಪೇದೆಗಳಾದ ಸಿದ್ರಾಮಪ್ಪ, ಸಿದ್ಧಯ್ಯ ಗುರುವಿನ, ಗಂಗಾಧರ ನಾಯಕ, ಬೈಲಪ್ಪ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ, ಉಪತಹಶೀಲ್ದಾರ್‌ ವಿಶ್ವೇಶ್ವರಯ್ಯ, ಪ್ರಮುಖರಾದ ಕನಕರೆಡ್ಡಿ, ರಮೇಶ ಸೂಡಿ, ಮಲಕೇಶ ಕೋಟೆ, ಗೋಪಿನಾಥ, ರವಿ ಕಂಪ್ಲಿ, ನರಸಿಂಗ್‌, ಮಹ್ಮದ್‌ ರಫೀ ಹಂಚಿನಾಳ, ಬಸನಗೌಡ ಪಾಟೀಲ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next