ಚಾಮರಾಜನಗರ: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಮೋರ್ಚಾದಿಂದ ನಗರದ ನಂದಿ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು .
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್. ಸುಂದರ್ ಅವರು ಹಾಗೂ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ರಾಮಚಂದ್ರ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಜಿಲ್ಲಾ ಯುವಮೋಚಾ ಅಧ್ಯಕ್ಷ ಪ್ರಣಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಕುಮಾರ್,ಲೋಕೇಶ, ಉಪಾಧ್ಯಕ್ಷರಾದ ಮರಿಯಾಲ ಮಹೇಶ್, ವಿರಾಟ್ ಶಿವು,ನಲ್ಲೂರು ಮಹೇಶ್, ಮನು, ಕಾರ್ಯದರ್ಶಿಗಳಾದ ರಘು ಹಾಗೂ ಇನ್ನೂ44 ಕಾರ್ಯಕರ್ತರು ರಕ್ತದಾನ ಮಾಡಿದರು. ಬಿಜೆಪಿ ಮುಖಂಡರಾದ ಡಾ. ಎ.ಆರ್. ಬಾಬು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾದವೃಷಬೇಂದ್ರಪ್ಪ, ಬಾಲಸುಬ್ರಹ್ಮಣ್ಯಂ, ಪೃಥ್ವಿರಾಜ್, ಕಾರ್ಯದರ್ಶಿಗಳಾದ ರಾಜ್ ಹೊಸೂರು, ರಘು, ಜಿಲ್ಲೆಯ ಯುವ ಮೋರ್ಚಾದ ಮಂಡಲಗಳ ಅಧ್ಯಕ್ಷರಾದ ಆನಂದ ಭಗೀರಥ, ಮಹದೇವಸ್ವಾಮಿ, ಯರಗಂಬಳ್ಳಿ ಮಹೇಶ್, ಕೊಳ್ಳೇಗಾಲ ಕಿರಣ್, ಕೊಳ್ಳೇಗಾಲ ಗ್ರಾಮಾಂತರದ ಮಹದೇವಪ್ರಭು ಮತ್ತಿತರರು ಹಾಜರಿದ್ದರು.
ಅಂಧ ಮಕ್ಕಳ ಜತೆ ಮೋದಿ ಹುಟ್ಟುಹಬ್ಬ ಆಚರಣೆ : ಚಾಮರಾಜನಗರ: ಬಿಜೆಪಿ ಎಸ್‌ಸಿ ಮೋರ್ಚಾದ ವತಿಯಿಂದ ತಾಲೂಕಿನ ಭೋಗಾಪುರ ದೀಪಾ ಅಕಾಡೆಮಿ ಶಾಲೆಯಲ್ಲಿ ಅಂಧ ಮಕ್ಕಳ ಜತೆಯಲ್ಲಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರಾಮಚಂದ್ರ ಮಾತ ನಾಡಿ, ಪ್ರಧಾನಿ ನರೇಂದ್ರ ಮೋದಿವಿಶ್ವಕಂಡ ಅಪ್ರತಿಮ ನಾಯಕರಾಗಿದ್ದು, ಇಡೀ ವಿಶ್ವದಲ್ಲೇ ಭಾರತದೇಶವನ್ನು ಎತ್ತಿಹಿಡಿದಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್ ಮಾತನಾಡಿ, ಮೋದಿ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ನಾನಾ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಬಿಜೆಪಿ ಜಿಲ್ಲಾಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಪಂ ಸದಸ್ಯ ಬಾಲರಾಜ್, ಪ್ರಧಾನ ಕಾರ್ಯìದರ್ಶಿ ನಲ್ಲೂರು ಶ್ರೀನಾಥ್, ಮಹೇಶ್ ಇತರರಿದ್ದರು.