Advertisement

ರಕ್ತ ಹೆಪ್ಪುಗಟ್ಟುವಿಕೆ ಕೋವಿಡ್-19 ಹೊಸ ಮುಖ!

11:55 PM Apr 24, 2020 | Sriram |

ನ್ಯೂಯಾರ್ಕ್‌: ಕೋವಿಡ್-19 ಸೋಂಕಿನ ಲಕ್ಷಣಗಳು ದಿನದಿಂದ ದಿನಕ್ಕೆ ವೈದ್ಯ ಜಗತ್ತಿಗೆ ಸವಾಲಾಗಿ ಪರಿಣಮಿಸಿವೆ. ವೈರಸ್‌ ದೇಹವನ್ನು ಸೇರಿಕೊಂಡ ಮೇಲೆ, ಅದು ನೇರವಾಗಿ ವಿವಿಧ ಅಂಗಾಂಗಗಳ ರಕ್ತದಲ್ಲಿ ವಿಚಿತ್ರ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.

Advertisement

ಸೋಂಕಿತನ ರಕ್ತ ದಪ್ಪ ಆಗುವ, ಹೆಪ್ಪುಗಟ್ಟುವ ಹೊಸ ಆತಂಕ ಸೃಷ್ಟಿಯಾಗುತ್ತಿದೆ.49ಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಲ್ಲೇ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದ್ದು, ಈ ಬೆಳವಣಿಗೆ ಯಿಂದಾಗಿ ಅಮೆರಿಕದಲ್ಲಿ ಕೆಲವು ಸೋಂಕಿತರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅಲ್ಲದೆ, ಕಿಡ್ನಿಗೆ ಸಂಪರ್ಕ ಬೆಸೆದ ಮೂತ್ರದ ನಳಿಕೆಗಳನ್ನೂ ವೈರಾಣುಗಳು ಹೆಪ್ಪುಗಟ್ಟಿಸುತ್ತಿವೆ.

ರಕ್ತರಹಿತ ಶ್ವಾಸಕೋಶ: ಸೋಂಕಿತನ ಶ್ವಾಸಕೋಶವು ರಕ್ತರಹಿತವಾಗಿ ಗೋಚರಿಸುವುದನ್ನು ಶ್ವಾಸಕೋಶ ತಜ್ಞರು ಗಮನಿಸಿದ್ದಾರೆ. ಪ್ರತಿಸಲ ಶ್ವಾಸಕೋಶ, ಉಸಿರನ್ನು ಎಳೆದು ಹೊರಬಿಡುವಾಗ, ಅಲ್ಲಿ ರಕ್ತದ ಚಲನೆಯೂ ಅಷ್ಟೇ ಸರಾಗವಾಗಿರುತ್ತದೆ. ಆದರೆ, ಕೋವಿಡ್-19 ಸೋಂಕಿತರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ, ಉಸಿರಾಟಕ್ಕೆ ಕುತ್ತು ತರುತ್ತಿದೆ.

ಹೆಪ್ಪುಗಟ್ಟಿದ ರಕ್ತವನ್ನು ತೆಳುಗೊಳಿಸುವ ಔಷಧಗಳು ಇವೆಯಾದರೂ, ಆ ಪ್ರಯೋಗಕ್ಕೂ ವೈದ್ಯರು ಮುಂದಾಗುತ್ತಿಲ್ಲ. ಈ ಔಷಧದ ಪರಿಣಾಮದಿಂದಾಗಿ, ಮೆದುಳು ಅಥವಾ ಇತರೆ ಅಂಗಾಂಗಗಳಲ್ಲಿ ರಕ್ತಸ್ರಾವ ಆಗುವ ಸಾಧ್ಯ ತೆಯೂ ಇರುವುದರಿಂದ, ಆ ಬಗ್ಗೆ ಹೆಚ್ಚಿನ ಅಧ್ಯ ಯನ ನಡೆದ ಬಳಿಕವಷ್ಟೇ, ಔಷಧ ಪ್ರಯೋಗಿ ಸಬೇಕು ಎನ್ನುವುದು ಅಮೆರಿಕದ ಮೌಂಟ್‌ ಸಿನಾಯ್‌ ಆಸ್ಪತ್ರೆಯ ತಜ್ಞರ ಅಭಿಪ್ರಾಯ.

ಮಕ್ಕಳ ಬೆರಳುಗಳ ಊರಿಯೂತ
ಕೋವಿಡ್‌ ಟೋಸ್‌! ಕೋವಿಡ್-19 ಸೋಂಕಿನ ಈ ಲಕ್ಷಣ ಇಟಲಿಯಲ್ಲಿ ಮೊದಲು ಕಂಡು ಬಂದು, ಈಗ ಅಮೆರಿಕದ ಸೋಂಕಿತ ಮಕ್ಕಳನ್ನು ಚಿಂತೆಗೆ ತಳ್ಳಿದೆ. ಕೋವಿಡ್-19 ತಗುಲಿದ ಮಕ್ಕಳ ಕಾಲಿನ ಬೆರಳುಗಳು ಉರಿ ಯೂತದಿಂದಾಗಿ ಕೆಂಪೇರುತ್ತಿವೆ. ಕಾಲಿನ ಬೆರಳುಗಳನ್ನು ನೋಡಿಯೇ, ಕೆಲವು ಚರ್ಮತಜ್ಞರು ಸೋಂಕು ತಗುಲಿ ದೆಯಾ, ಇಲ್ಲವಾ ಎಂದು ಹೇಳುವಷ್ಟು, ಈ ಲಕ್ಷಣ ಸಾಮಾನ್ಯವಾಗುತ್ತಿದೆ. ಊತ ದೊಂದಿಗೆ ಬೆರಳಿನ ಬಣ್ಣವೂ ಬದಲಾಗು ತ್ತಿದೆ. ಮೇಲ್ನೋಟಕ್ಕೆ ಕೆಮ್ಮು, ನೆಗಡಿ, ಗಂಟಲು ಕೆರೆತ, ಜ್ವರ- ಇವ್ಯಾವ ಲಕ್ಷಣವೂ ಇಲ್ಲದೆ, ಕೋವಿಡ್-19 ಇಂಥ ಬೇರೆ ಬೇರೆ ಲಕ್ಷಣಗಳನ್ನು ಹೊರಹಾಕುತ್ತಿರುವುದು ವೈದ್ಯರ ತಲೆಬಿಸಿಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next