Advertisement

ರಕ್ತದ ಕ್ಯಾನ್ಸರ್;ಪ್ರಾರಂಭಿಕ ರೋಗಪರೀಕ್ಷೆ ಸಕಾಲಿಕ ಚಿಕಿತ್ಸೆ ಮತ್ತು ನಿರ್ವಹಣೆಗೆ ನೆರವು

02:57 PM Sep 30, 2021 | Team Udayavani |

ಬೆಂಗಳೂರು:ವಾರ್ಷಿಕ ವಿಶ್ವದಾದ್ಯಂತ 1.24 ಮಿಲಿಯನ್ ರಕ್ತದ ಕ್ಯಾನ್ಸರ್ ಪ್ರಕರಣಗಳು ಸಂಭವಿಸುತ್ತಿದ್ದು,ಅವು ಎಲ್ಲ ಕ್ಯಾನ್ಸರ್ ಪ್ರಕರಣಗಳ ಸರಾಸರಿ ಶೇ.6ರಷ್ಟಾಗಿವೆ. ರಕ್ತದ ಕ್ಯಾನ್ಸರ್ ಗಳು ಅಥವಾ ಹೆಮಟೊಲಾಜಿಕ್ ಕ್ಯಾನ್ಸರ್ ಗಳು ರಕ್ತದ ಜೀವಕೋಶಗಳ ಉತ್ಪಾದನೆ ಮತ್ತು ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತವೆ. ಈ ಕ್ಯಾನ್ಸರ್ ಗಳು ರಕ್ತ ಉತ್ಪಾದನೆಯಾಗುವ ಮೂಳೆ ಮಜ್ಜೆಯಿಂದ ಪ್ರಾರಂಭವಾಗುತ್ತವೆ.

Advertisement

ಕ್ಯಾನ್ಸರ್ ಜೀವಕೋಶದ ಪ್ರಗತಿ ಮತ್ತು ವರ್ತನೆಯ ಅಸಮರ್ಪಕ ಕಾರ್ಯಗಳಿಂದ ಉಂಟಾಗುತ್ತದೆ. ಆರೋಗ್ಯಕರ ದೇಹದಲ್ಲಿ ಹೊಸ ಬಿಳಿ ರಕ್ತ ಕಣಗಳು ನಿಯಮಿತವಾಗಿ ಉತ್ಪಾದನೆಯಾಗಿ ಹಳೆಯ, ಸಾಯುವ ಕೋಶಗಳಿಂದ ಬದಲಾಯಿಸುತ್ತವೆ. ಮೂಳೆ ಮಜ್ಜೆಯಲ್ಲಿ ಬಿಳಿ ರಕ್ತ ಕಣಗಳ ಹೆಚ್ಚುವರಿ ಉತ್ಪಾದನೆಯು ರಕ್ತದ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.

ಗ್ಲೋಬೋಕಾನ್ 2020ರ ಪ್ರಕಾರ ಭಾರತದಲ್ಲಿ ಪ್ರತಿನಿತ್ಯ ಮಕ್ಕಳ ರಕ್ತದ ಕ್ಯಾನ್ಸರ್ ನ 20,000ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿದ್ದು ಅವುಗಳಲ್ಲಿ 15,000 ಲ್ಯುಕೆಮಿಯಾ ಪ್ರಕರಣಗಳಾಗಿವೆ.

ಬೆಂಗಳೂರಿನ ಶಂಕರಪುರಂನಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಿಭಾಗ ಮುಖ್ಯಸ್ಥ, ಸೀನಿಯರ್ ಕನ್ಸಲ್ಟೆಂಟ್ ಹೆಮಟಾಲಜಿಸ್ಟ್ ಮತ್ತು ಹೆಮಟೊ ಆಂಕಾಲಜಿಸ್ಟ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್ ಡಾ.ಕೆ.ಎಸ್.ನಟರಾಜ್, “ಬೋನ್ ಮ್ಯಾರೊ ಲಿಂಫಾಯಿಡ್ ವ್ಯವಸ್ಥೆಯಿಂದ ರಕ್ತ ಮತ್ತು ಸಂಬಂಧಿತ ಕ್ಯಾನ್ಸರ್ ಗಳು ಹೆಚ್ಚಾಗುತ್ತಿವೆ. ಅತ್ಯಂತ ಸಾಮಾನ್ಯ ಕ್ಯಾನ್ಸರ್ ಗಳಲ್ಲಿ ಲ್ಯುಕೆಮಿಯಾ ಮೈಲೊಮಿಯಾ ಮತ್ತು ಲಿಂಫೊಮಿಯಾಗಳಾಗಿವೆ.

ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳಲ್ಲಿ ಜ್ವರ, ದೇಹದ ನೋವುಗಳು, ವಿಸ್ತರಿಸಿದ ಗ್ರಂಥಿಗಳ ರಕ್ತಸ್ರಾವ ಮತ್ತು ಮರುಕಳಿಸುವ ಸೋಂಕುಗಳು ಒಳಗೊಂಡಿವೆ. ಹಿಂದಿನಂತೆ ರಕ್ತದ ಕ್ಯಾನ್ಸರ್ ಅಂದರೆ ತಕ್ಷಣ ಮರಣ ಸಂಭವಿಸುವುದಿಲ್ಲ, ಈಗ ನಾವು ಶೇ.50ರಷ್ಟು ರಕ್ತದ ಕ್ಯಾನ್ಸರ್ ಗಳನ್ನು ಗುಣಪಡಿಸಬಹುದು ಮತ್ತು ಹೆಚ್ಚುವರಿ ಶೇ.30ರಷ್ಟು ರಕ್ತದ ಕ್ಯಾನ್ಸರ್ ಗಳನ್ನು ಸುಧಾರಿತ ಚಿಕಿತ್ಸೆಗಳಿಂದ ನಿಯಂತ್ರಿಸಬಹುದು. ಈ ಯಶಸ್ಸಿಗೆ ಬಹಳ ಮುಖ್ಯವಾದ ಕಾರಣವೆಂದರೆ ಸಕಾಲಿಕ ರೋಗ ಪರೀಕ್ಷೆ ಮತ್ತು ಎಲ್ಲ ಜನರಿಗೂ ಲಭ್ಯವಿರುವ ಸುಧಾರಿತ ಥೆರಪಿಯ ಆಯ್ಕೆಗಳು. ಉದಾಹರಣೆಗೆ, ಮಕ್ಕಳಲ್ಲಿ ಅಕ್ಯೂಟ್ ಪ್ರೊಮೈಎಲೊಸೈಟಿಕ್ ಲ್ಯುಕೆಮಿಯಾವನ್ನು ಶೇ.80ರಷ್ಟು ರೋಗಿಗಳಲ್ಲಿ ಗುಣಪಡಿಸಬಹುದು. ಪ್ರಸ್ತುತ ಕಿಮೊಥೆರಪಿ ಇಮ್ಯುನೊಥೆರಪಿ ಸ್ಟೆಮ್ ಸೆಲ್ ಬದಲಾವಣೆಗಳು ರಕ್ತದ ಕ್ಯಾನ್ಸರ್ ಗಳ ಚಿಕಿತ್ಸೆಗೆ ಇರುವ ಪ್ರಮುಖ ಚಿಕಿತ್ಸೆಗಳಾಗಿವೆ” ಎಂದರು.

Advertisement

ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯಲ್ಲಿನ ಸೀನಿಯರ್ ಕನ್ಸಲ್ಟೆಂಟ್ ಹೆಮಟಾಲಜಿ ಡಾ.ಗಿರೀಶ್ ವಿ. ಬದಾರ್ಖೆ, “ಹೆಮಟೋಲಾಜಿಕ್ ಕ್ಯಾನ್ಸರ್ ಭಾರತದಲ್ಲಿ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದ್ದು ಪ್ರತಿವರ್ಷ ಮಕ್ಕಳ ರಕ್ತ ಕ್ಯಾನ್ಸರ್ ನಲ್ಲಿ 20,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು ಅವುಗಳಲ್ಲಿ 15,000 ಪ್ರಕರಣಗಳು ಲ್ಯುಕೆಮಿಯಾ ಆಗಿವೆ. ಪ್ರಾರಂಭಿಕ ರೋಗಪರೀಕ್ಷೆ ಮತ್ತು ಚಿಕಿತ್ಸೆಯು ಅಂತಹ ಮಾರಣಾಂತಿಕ ರೋಗಗಳ ಪ್ರಗತಿಗೆ ಪ್ರಮುಖವಾಗಿವೆ. ಕ್ಯಾನ್ಸರ್ ಬಗೆ, ಅದರ ಪ್ರಗತಿಯ ಪ್ರಮಾಣ ಮತ್ತು ಕ್ಯಾನ್ಸರ್ ದೇಹದ ಇತರೆ ಭಾಗಗಳಿಗೆ ಹರಡಿದೆಯೇ ಎನ್ನುವುದನ್ನು ಆಧರಿಸಿ ವಿಭಿನ್ನ ಸುಧಾರಿತ ಚಿಕಿತ್ಸೆಗಳು ಲಭ್ಯವಿವೆ. ಕ್ಯಾನ್ಸರ್ ಇಲ್ಲದ ಭವಿಷ್ಯ ಕುರಿತು ಸಕ್ರಿಯವಾಗಲು ಮತ್ತು ಸೃಷ್ಟಿಸಲು ಇದು ಸೂಕ್ತ ಸಮಯವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next