Advertisement

Blockbuster Gadar 2: 100 ಕೋಟಿ ಗಳಿಕೆಯತ್ತ ಸನ್ನಿ ಡಿಯೋಲ್ ಚಿತ್ರ

01:03 PM Aug 13, 2023 | Team Udayavani |

ಹಲವು ವರ್ಷಗಳ ಬಳಿಕ ಬೆಳ್ಳಿತೆರೆಯ ಮೇಲೆ ಸನ್ನಿ ಡಿಯೋಲ್ ಅಬ್ಬರಿಸುತ್ತಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ‘ಗದರ್-2’ ಚಿತ್ರವು ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ನೂರು ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

Advertisement

ಅನಿಲ್ ಶರ್ಮಾ ನಿರ್ದೇಶನದ ಗದರ್ 2 ಚಿತ್ರವು ಕಳೆದ ಶುಕ್ರವಾರ ರಿಲೀಸ್ ಆಗಿದ್ದು, ಕೇವಲ ಎರಡು ದಿನಗಳಲ್ಲಿ ಭಾರತದಲ್ಲಿ 83 ಕೋಟಿ ರೂ ಗಳಿಸಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಪಡೆದ ಚಿತ್ರವು ಸುಲಭದಲ್ಲಿ 200 ಕೋಟಿ ರೂ ಗಡಿ ದಾಟಲಿದೆ ಎಂದು ಅಂದಾಜಿಸಲಾಗುತ್ತಿದೆ.

‘ಬೇತಾಬ್’ ಚಿತ್ರದ ಮೂಲಕ ಅದ್ಭುತವಾಗಿ ಚಿತ್ರರಂಗ ಪ್ರವೇಶ ಮಾಡಿದ್ದ ಸನ್ನಿ ಡಿಯೋಲ್ ಇದೀಗ 65 ರ ಹರೆಯದಲ್ಲಿ ಪವರ್ ಪ್ಯಾಕ್ಡ್ ಪ್ರದರ್ಶನದ ಮೂಲಕ ಹಿಟ್‌ ಗಳನ್ನು ನೀಡುತ್ತಿದ್ದಾರೆ.

ಗದರ್ 2′ ಶಾರುಖ್ ಖಾನ್ ಅವರ ಪಠಾನ್ ನಂತರ 2023 ರ ಎರಡನೇ ಅತಿ ಹೆಚ್ಚು ಆರಂಭಿಕ ಗಳಿಕೆ ಕಂಡ ಚಿತ್ರವಾಯಿತು. ಚಿತ್ರವು ತನ್ನ ಮೊದಲ ದಿನದಲ್ಲಿ ಭಾರತದಲ್ಲಿ 40 ಕೋಟಿ ರೂಪಾಯಿ ಗಳಿಸಿತ್ತು ಎರಡನೇ ದಿನದಲ್ಲಿ 43.08 ಕೋಟಿ ರೂ ಗಳಿಕೆ ಮಾಡಿದೆ.

Advertisement

‘ಗದರ್: ಏಕ್ ಪ್ರೇಮ್ ಕಥಾ’ ಚಿತ್ರ ಬಿಡುಗಡೆಯಾಗಿ 23 ವರ್ಷಗಳ ನಂತರ ‘ಗದರ್ 2’ ಬಿಡುಗಡೆಯಾಗಿದೆ. ಆದಾಗ್ಯೂ, ಸನ್ನಿ ಡಿಯೋಲ್ ಅವರ ಚಿತ್ರವು ಪ್ರಭಾಸ್ ಅವರ ದೊಡ್ಡ-ಬಜೆಟ್ ನ ಆದಿಪುರುಷ್ ಚಿತ್ರವನ್ನು ಮೀರಿಸಿದೆ. ಆದಿಪುರುಷ್ ಮೊದಲ ದಿನ 32 ಕೋಟಿ ರೂ ಗಳಿಸಿತ್ತು.

ಗದರ್-2 ತಾರಾಗಣದಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅವರಲ್ಲದೆ, ಮನೀಶ್ ವಾಧ್ವಾ, ಗೌರವ್ ಚೋಪ್ರಾ, ಲುವ್ ಸಿನ್ಹಾ, ಸಿಮ್ರತ್ ಕೌರ್, ಮೀರ್ ಸರ್ವರ್, ರೋಹಿತ್ ಚೌಧರಿ ಮತ್ತು ರಾಕೇಶ್ ಬೇಡಿ ಮುಂತಾದವರು ಇದ್ದಾರೆ. ‘ಗದರ್ 2’ ಚಿತ್ರಕ್ಕೆ ಮಿಥೂನ್ ಸಂಗೀತ ಸಂಯೋಜಿಸಿದ್ದರೆ, ಮಾಂಟಿ ಶರ್ಮಾ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next