Advertisement

ರೈಲ್ವೆ ಸೇತುವೆಗಾಗಿ ಜೆಡಿಎಸ್‌ ರಸ್ತೆತಡೆ; ಮುಂದುವರಿದ ಪ್ರತಿಭಟನೆ

01:02 PM Mar 24, 2017 | Team Udayavani |

ದಾವಣಗೆರೆ: ಅಶೋಕ ಚಿತ್ರಮಂದಿರದ ಬಳಿಯ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ, 4 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಜೆಡಿಎಸ್‌ ಕಾರ್ಯಕರ್ತರನ್ನು ಗುರುವಾರ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. 

Advertisement

ಸತತ ನಾಲ್ಕು ದಿನಗಳ ಧರಣಿಗೂ ಜಿಲ್ಲಾಡಳಿತ ಸ್ಪಂದಿಸದಿರುವುದರಿಂದ ಗಾಂಧಿ ವೃತ್ತದ ಬಳಿ ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆತಡೆ ನಡೆಸಿದ 30 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಪಕ್ಷದ ಯುವ ಘಕಟದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್‌ ಮಾತನಾಡಿ, ಕಳೆದ 20ರಿಂದ ನಾವು ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ.

ನಮ್ಮ ಬೇಡಿಕೆ ಈಡೇರುವ ತನಕ ಧರಣಿ ಸ್ಥಳದಿಂದ ಮೇಲೇಳುವುದಿಲ್ಲ  ಎಂಬುದಾಗಿ ತಿಳಿಸಿದ್ದೇವೆ. ಆದರೆ, ಇದುವರೆಗೆ ಜಿಲ್ಲಾಡಳಿತ ನಮ್ಮ ಮನವಿ ಆಲಿಸಲು ಮುಂದೆ ಬರುತ್ತಿಲ್ಲ. ಮೊದಲ ದಿನ ಬಂದು ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಶೀಘ್ರ  ಚಾಲನೆ ನೀಡಲು ಕ್ರಮ ವಹಿಸುವುದಾಗಿ ಹೇಳಿದ್ದರು. 

ಆದರೆ, ಇದುವರೆಗೆ ಈ ಕುರಿತು ಯಾವುದೇ ಸಭೆ ಆಗಲಿ, ನಾವು ಕೊಟ್ಟ ಮನವಿಗಳಿಗೆ ಉತ್ತರವನ್ನಾಗಲಿ ಕೊಟ್ಟಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಿಂದಇಲ್ಲಿಯವರೆಗೆ ಯಾವ ಬೆಳವಣಿಗೆ ಆಗಿದೆ. ಅನುದಾನ ಬಂದಿದ್ದರೂ ಕಾಗಮಾರಿ ಆರಂಭಗೊಳ್ಳದೇ ಇರಲು ಕಾರಣ ಏನು? ಎಂಬ ವಿವರ ನೀಡಬೇಕು.

ನಾವು ಈ ಹಿಂದೆ ಫೆ.27ರಂದು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರ ಮೇಲೆ ಕೈಗೊಂಡ ಕ್ರಮಗಳೇನು? ಮಾ. 20ರಂದು  ಜಿಲ್ಲಾಧಿಕಾರಿಗಳು ನಮಗೆ ನೀಡಿದ ಭರವಸೆ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ಕೊಡಬೇಕು. ಅಲ್ಲಿಯವರೆಗೆ ನಾವು ಧರಣಿ ಕೈ ಬಿಡುವುದಿಲ್ಲ.  

Advertisement

ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಟಿ. ಅಸರ್‌, ಕೆ. ಶ್ರೀನಿವಾಸ್‌, ಪಿ. ದಾದಾಪೀರ್‌, ಖಾದರ್‌ ಬಾಷ, ಹನಮಂತ ರೆಡ್ಡಿ, ಅಹಮದ್‌ ಬಾಷ,  ಸೈಯದ್‌ ರಸೂಲ್‌ ಸಾಬ್‌, ನವೀನ್‌, ರೇಣುಕಾ ಯಲ್ಲಮ್ಮ, ಹನುಮಂತಪ್ಪ, ಆಯೂಬ್‌ ಬೇಗ್‌, ಸೋಮಶೇಖರ್‌ ಹೋರಾಟದ ನೇತೃತ್ವ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next