ದುಬಾೖ: ಗಲ್ಫ್ ದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯ ಕಾಣಿಸಿಕೊಂಡಿದ್ದು, ಶುಕ್ರವಾರ ತಾಪಮಾನ -2 ಡಿಗ್ರಿ ಸೆಲ್ಸಿಯಸ್ ಗಿಳಿದು ಹಿಮಪಾತಕ್ಕೆ ಸಾಕ್ಷಿಯಾಗಿದೆ. ಕಳೆದ 24 ತಾಸುಗಳಲ್ಲಿ ಯುಎಇಯಲ್ಲಿ ಉತ್ತಮ ಮಳೆಯೂ ಸುರಿ ದಿದೆ. ಶಾರ್ಜಾ, ದುಬಾೖ, ಅಬುಧಾಬಿಯಲ್ಲಿ 2.2 ಮಿ.ಮೀ. ಮಳೆಯಾಗಿದೆ.
ಕಳೆದೆರಡು ದಿನಗಳಿಂದ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿರುವ ಪರಿಣಾಮ ವಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಮರಳು ಬಿರು
ಗಾಳಿ ಬೀಸುತ್ತಿರುವ ಹಿನ್ನೆಲೆ ಯಲ್ಲಿ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹವಾಮಾನ್ಯ ವೈಪರೀತ್ಯ ದಿಂದಾಗಿ ಅಂತಾರಾಷ್ಟ್ರೀಯ ಸೈಕಲ್ ರೇಸ್ ಸಹಿತ ಹಲವು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ದುಬಾೖಯ ಶೇಖ್ ಜಾಯೇದ್ ರೋಡ್‌ನಲ್ಲಿ ಗಾಳಿಯ ಬಿರುಸಿಗೆ ಕ್ರೇನ್ ಪಲ್ಟಿಯಾಗಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದೇ ಪರಿಸರದಲ್ಲಿ ಮೂರು ಕಾರು ಗಳು ಉರಿದು ಕರಕಲಾಗಿವೆ.
ಆರ್‌ಎಕೆಗೆ ಹಿಮ ಹೊದಿಕೆ: ಅಪರೂಪದ ವಿದ್ಯಮಾನವೊಂದರಲ್ಲಿ ಬಹಳ ವರ್ಷಗಳ ಬಳಿಕ ರಾಸ್ ಅಲ್ ಖೈಮಾದ ಜೆಬೆಲ್ ಜೈಸ್ ಪರ್ವತ ಹಿಮದ ಹೊದಿಕೆ ಹೊದ್ದು ಕೊಂಡಿದೆ. ಇಲ್ಲಿ ತಾಪಮಾನ -2ಕ್ಕಿಂತಲೂ ಕೆಳಗಿಳಿದಿದೆ. ಗಲ್ಫ್ ಜನರ ಪಾಲಿಗೆ ಇದು ಸಂಭ್ರಮದ ವಿಷಯವಾಗಿದೆ. ಜನರು ಹಿಮವರ್ಷವನ್ನು ವೀಕ್ಷಿಸುವ ಸಲುವಾಗಿ ಅಲ್‌ಖೈಮಾಕ್ಕೆ ದೌಡಾ ಯಿಸುತ್ತಿದ್ದಾರೆ. ಆದರೆ ಗೋಚರತೆ ಕುಸಿದಿರುವುದರಿಂದ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಅಡಚಣೆಯಾಗಿದೆ.
2009, ಜ.25ರಂದು ಅಲ್ ಖೈಮಾ ಪರ್ವತ ಹಿಮದಲ್ಲಿ ಮುಳುಗಿದ್ದು ಅಲ್ಲಿನ ಜನರಿಗೆ ಅಚ್ಚರಿಯ ನೋಟವಾಗಿತ್ತು. ಗಲ್ಫ್ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಡೀ ಪರ್ವತ ಮಂಜು ಹೊದ್ದು ಮಲಗಿತ್ತು. ಅನಂತರ ಕಳೆದ ವರ್ಷ ಫೆ. 18ರಂದು ಮತ್ತೂಮ್ಮೆ ಹಿಮ ಕವಿದರೂ 2009ರಷ್ಟು ತೀವ್ರವಾಗಿರಲಿಲ್ಲ. ಇಂದು 2009ರ ನೋಟ ಮರುಕಳಿಸಿರುವುದು ಅಲ್ಲಿನ ಜನರನ್ನು ಪುಳಕಗೊಳಿಸಿದೆ.