Advertisement
ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಅಮೆರಿಕ, ಆಸ್ಟ್ರೇಲಿಯ, ಭಾರತ, ಜಪಾನ್ ಲಸಿಕೆ ಪೂರೈಕೆ ನಿಟ್ಟಿನಲ್ಲಿ ಸಹಕಾರ ನೀಡಿಕೆ, ಭಾರತದಲ್ಲಿ ಉತ್ಪಾದನೆಯಾ ಗುವ ಲಸಿಕೆಗಳನ್ನು ವಿತರಣೆ, ಅಲ್ಲ ದೆ ಬಂಡವಾಳ ಹೂಡಿಕೆ, ಆರೋಗ್ಯ, ಶಿಕ್ಷಣ, ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರದ ಬಗ್ಗೆಯೂ ಚರ್ಚೆಯಾಗಲಿದೆ. 22 ಸಾವಿರ ಕುಟುಂಬ ಪಲಾಯನ
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ನ ಕೇಂದ್ರ ಸ್ಥಾನ ಕಂದಹಾರ್‌ನಿಂದ 22 ಸಾವಿರ ಕುಟುಂ ಬಗಳು ಮನೆಯನ್ನೇ ಬಿಟ್ಟು ಒಡಿದ್ದಾರೆ. ಈ ಬಗ್ಗೆ ಎಎಫ್ಪಿ ಸುದ್ದಿಸಂಸ್ಥೆ ಜತೆಗೆ ಮಾತನಾ ಡಿದ ನಿರ್ವಸಿತರ ವಿಭಾಗದ ಮುಖ್ಯಸ್ಥ ಮೊಹಮ್ಮದ್ ದರ್ಯಾಬ್ ಮಾತನಾಡಿ ತಿಂಗಳಿಂದ ನಡೆಯುತ್ತಿರುವ ಸಂಘರ್ಷ ದಿಂದಾಗಿ 22 ಸಾವಿರ ಕುಟುಂಬಗಳು ಪಲಾಯನ ಮಾಡಿವೆ ಎಂದಿದ್ದಾರೆ. ಕಂದಹಾರ್ ನಗರದ ಹೊರಭಾಗದಲ್ಲಿ ರವಿವಾರವೂ ಕದನ ಮುಂದುವರಿದಿದೆ. ಇದೇ ವೇಳೆ, ಕಂದಹಾರ್‌ನಲ್ಲಿ 2 ವಾರದ ಅವಧಿಯಲ್ಲಿ ಪತ್ರಕರ್ತರು ಸೇರಿದಂತೆ 33 ಮಂದಿಯನ್ನು ಉಗ್ರರು ಕೊಂದಿದ್ದಾರೆ.