Advertisement

ಅಂಧರ ನೆರವಿಗಾಗಿ ಶ್ರೀನಿವಾಸ್‌ ವಿದ್ಯಾರ್ಥಿಗಳಿಂದ ‘ಬ್ಲೈಂಡ್ಸ್‌ ಐ’ಸಂಶೋಧನೆ

01:03 AM Jun 25, 2019 | Team Udayavani |

ಮಹಾನಗರ: ವಳಚ್ಚಿಲ್ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಗಣಕಯಂತ್ರ ವಿಭಾಗದ ವಿದ್ಯಾ ರ್ಥಿಗಳಾದ ಅರ್ಪಿತಾ, ಬಿ. ಭೂಮಿಕಾ ಬೋಪಣ್ಣ, ಚಂದನಾ ಕೆ.ಕೆ. ಮತ್ತು ಚಿನ್ಮಯಿ ಅವರು ಸಹಾಯಕ ಪ್ರಾಧ್ಯಾಪಕ ಸುದರ್ಶನ್‌, ಸಂಯೋಜಕ ಮಂಜೇಶ್‌ ಆರ್‌. ಅವರ ಮಾರ್ಗದರ್ಶನದಲ್ಲಿ ಒಂದು ವಿನೂತನ ಪ್ರೊಜೆಕ್ಟ್ ‘ಬ್ಲೈಂಡ್ಸ್‌ ಐ’ ಅನ್ನುವ ವ್ಯವಸ್ಥೆಯನ್ನುವಿನ್ಯಾಸಗೊಳಿಸಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ, ಮುದ್ರಿತ ಪದಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದ, ದೃಷ್ಟಿಹೀನರು ಯಾವಾ ಗಲೂ ಕೆಲವು ಉತ್ಪನ್ನಗಳನ್ನು ಖರೀದಿಸಲು ಇತರರ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು, ‘ಬ್ಲೈಂಡ್ಸ್‌ ಐ’ ಎಂಬ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆ ಕೆಮರಾವನ್ನು ಬಳಸಿಕೊಂಡು ಉತ್ಪನ್ನದ ಚಿತ್ರವನ್ನು ಸೆರೆಹಿಡಿಯುತ್ತದೆ ಮತ್ತು ಬಳಕೆದಾರರಿಗೆ ಉತ್ಪನ್ನದ ಹೆಸರು, ಬೆಲೆ ಮತ್ತು ತೂಕದ ಮಾಹಿತಿಯನ್ನು ಧ್ವನಿಯ ಮೂಲಕ ನೀಡುತ್ತದೆ. ಇದು ಇತರರನ್ನು ಅವಲಂಬಿಸದೆ ಉತ್ಪನ್ನವನ್ನು ಖರೀದಿಸಲು ದೃಷ್ಟಿಹೀನರಿಗೆ ಸಹಾಯ ಮಾಡುತ್ತದೆ.

ಕಾಲೇಜಿನ ಪ್ರಾಂಶುಪಾಲ ಡಾ |ಶ್ರೀನಿವಾಸ ಮಯ್ಯ ಡಿ. ಹಾಗೂ ಗಣಕ ಯಂತ್ರ ವಿಭಾಗದ ಮುಖ್ಯಸ್ಥ‌ ಡಾ| ಶಿವ ಕುಮಾರ್‌ ಜಿ.ಎಸ್‌. ಅವರು ಪ್ರಾಜೆಕ್ಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next