Advertisement

ಅಂಧರ ಟಿ20 ವಿಶ್ವಕಪ್‌ ಸೆಮೀಸ್‌, ಫೈನಲ್‌ಗೆ ಚಿನ್ನಸ್ವಾಮಿ ಆತಿಥ್ಯ

03:45 AM Jan 02, 2017 | |

ಬೆಂಗಳೂರು: ಅಂಧರ ಟಿ20 ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್‌, ಫೈನಲ್‌ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಸ್ವತಃ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಅಧ್ಯಕ್ಷ ಅನುರಾಗ್‌ ಠಾಕೂರ್‌ ಮಾಹಿತಿಯನ್ನು ಖಚಿತಪಡಿಸಿದ್ದಾರೆ. 

Advertisement

ಫೆ.11ರಂದು ಆಯೋಜಿತವಾಗಿರುವ ಸೆಮೀಸ್‌, ಫೆ.12ರಂದು ಆಯೋಜಿತವಾಗಿರುವ ಫೈನಲ್‌ಗೆ ಉಚಿತವಾಗಿ ಕ್ರೀಡಾಂಗಣವನ್ನು ನೀಡುವ ಭರವಸೆಯನ್ನು ಅನುರಾಗ್‌ ಠಾಕೂರ್‌ ನೀಡಿದ್ದಾರೆ. ಕ್ರೀಡಾಂಗಣವನ್ನು 2 ದಿನ ನೀಡುವಂತೆ ಮನವಿ ಸಲ್ಲಿಸಿದ್ದೆವು. ಇದನ್ನು ಅನುರಾಗ್‌ ಪುಸ್ಕರಿಸಿದ್ದಾರೆ. ಹೀಗಾಗಿ ಅಂಧರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುವುದು ಖಚಿತವಾಗಿದೆ ಎಂದು ಭಾರತೀಯ ಅಂಧರ ಕ್ರಿಕೆಟ್‌ ಮಂಡಳಿಯ ಮಾಧ್ಯಮ ವಕ್ತಾರ ನಿರಂಜನ್‌ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಸಿಎಬಿಐಗೆ ಬಿಸಿಸಿಐನಿಂದ ಮಾನ್ಯತೆಗೆ ಪ್ರಯತ್ನ: ರಾಜ್ಯ ಸಭಾ ಸದಸ್ಯ ರೆಡ್ಡಿ: ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಸಮರ್ಥನಂ ಸಂಸ್ಥೆಗೆ ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ಆಗಮಿಸಿ ಭಾನುವಾರ ಹೊಸ ವರ್ಷ ಆಚರಿಸಿದರು. ಇದೇ ವೇಳೆ ಅಂಧರ ಕ್ರಿಕೆಟ್‌ ತಂಡಕ್ಕೆ ಎಲ್ಲ ರೀತಿಯಲ್ಲಿ ನೆರವು ನೀಡುತ್ತೇನೆ. ಬಿಸಿಸಿಐನಿಂದ ಅಂಧರ ಕ್ರಿಕೆಟ್‌ ತಂಡಕ್ಕೆ ಮಾನ್ಯತೆ ಕೊಡಿಸುವ ಎಲ್ಲ ಪ್ರಯತ್ನವನ್ನು ಪ್ರಾಮಾಣಿಕತೆ ನಡೆಸುವುದಾಗಿ ತಿಳಿಸಿದರು.

ಕ್ರಿಕೆಟ್‌ ಅಭಿಮಾನಿಗಳಿಂದ ಸಹಾಯ ಯಾಚಿಸಿದ ಸಿಎಬಿಐ: ಅಂಧರ ವಿಶ್ವಕಪ್‌ ಆಯೋಜನೆಗೆ ಲಕ್ಷಾಂತರ ರೂ. ವೆಚ್ಚವಾಗಲಿದೆ. ಸಿಎಬಿಐ ತೀವ್ರ ಹಣಕಾಸಿನ ತೊಂದರೆ ನಡುವೆಯೂ ಅಂಧರ ಕ್ರಿಕೆಟ್‌ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಹೀಗಾಗಿ ಆರ್ಥಿಕ ಸಹಾಯ ಮಾಡಲಿಚ್ಚಿಸುವವರು ಸಿಎಬಿಐನ ಮಾಧ್ಯಮ ವಕ್ತಾರ ನಿರಂಜನ್‌ ದೂರವಾಣಿ ಸಂಖ್ಯೆ 9686927288 ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next